Saturday, May 22, 2021

ನನ್ನಾಕೆ

ಅಂದೊಂದು ದಿನ ಕಂಡೆನವಳ ನಗುತಿದ್ದಲಿ-

ಕೇಳಲಾಸೆ, ಹೇಳಲಾಸೆ ಎಂದೆನಿಸಿ-

ಪಚ್ಚೆ ಹಸುರ ತೊಟ್ಟವಳ ಬಳಿ ನಿಂತೆನು.

ಅವಳ ನಗುವ ಕಂಡೊಡನೆ ಆಗೊಮ್ಮೆ-

ಮಾತು ಬಾರದೆ, ಮೌನ ಕಾಡಿದೆ-

ಎಂದು ಯೋಚಿಸಿ ಕುಂತೆನು!


ನಡುವ ಬಳುಕುತಲಿ ಅವಳಾಕಡೆಗೆ ಹೊಂಟಳು-

'ಏನು ವಿಷಯವೆಂದು?' ಎನ್ನ ಕೇಳಿ-

ಉತ್ತರ ಸಿಗದೆ, ತಿರುಗಿ ನೋಡದೆ ಸೀದಾ ಹೊಂಟಳು.

ಈ ದಿನಕ್ಕೆ ವ್ಯರ್ಥ ಮರುದಿನಕ್ಕೆ ಸಮರ್ಥ-

ವೆಂಬಂತೆ ಧೈರ್ಯ ಮಾಡಿದೊಮ್ಮೆಲೆ-

ಗುಲಾಬಿಯ ಹಿಡಿದೆ, ಅವಳೆಡೆಗೆ ನಡೆದೆ ಪ್ರೇಮವೇಳಲು.


ನಡುವೇನೋ ಸಣ್ಣ, ನುಣುಪಾದ ಕಣ್ಣ-

ನೋಡುತಲೇ ತಲೆ ಗಿರಗಿರನೆ ತಿರುಗಿ-

ದಂತಾದರೂ ಪ್ರೇಮವ ಹೇಳಿಯೇಬಿಟ್ಟೆ.

ಅವಳೇನೋ ನಾಚಿದಳೋ, ಕುಪಿತಗೊಂಡಳೋ-

ಅರಿವಿಲ್ಲ ಎನಗೆ ಕಾಣಿಸಿತಷ್ಟೇ ತಲೆಯಲ್ಲಿದ್ದ ಮಲ್ಲಿಗೆ-

ಅದ ನೋಡಿದೆ, ಸುಮ್ಮನಾದೆ ಗುಲಾಬಿಯ ಎಸೆದುಬಿಟ್ಟೆ.


ಬೇಜಾರಾದ ಎನಗೆ, ಬೇಕೆನಿಸಿತು ಸಲಿಗೆ-

ಆಗಿದ್ದಾಗಲೆಂದು ಮತೊಮ್ಮೆ ಕಾದೆ-

ನಾನು ಅವಳು ಬಹಳೆಂದು.

ಒಂದಾಶ್ಚರ್ಯ ಕಾದಿತ್ತೆನಗೆ ಮೇಗಡೆ-

ನೋಡಲು ರೇಸಿಮೆಯುಟ್ಟು ಬಂದೊಡನೆ-

ಮುತ್ತಿಟ್ಟಳೆನ್ನ ಕೆನ್ನೆಗೆ, ಆ ಘಳಿಗೆ-

ಬಂದಿತ್ತು ಪ್ರೇಮದೌತಣ ಸವಿಯಲೆಂದು.

               ----ಚಿನ್ಮಯಿ

Tuesday, May 4, 2021

Past-Present-Future / ಭೂತ-ವರ್ತಮಾನ-ಭವಿಷ್ಯತ್

Be it "Time Travel", "Alien Theories", "Black Hole Theories", "Multiverse and Parallel Universe Concepts", "100% Brain Capacity Concepts" and much more things which are being shown and being showed in movies, webseries etc and also the hypothetical theories that were and that are being published by many scientists have become true reality. Henceforth, in the far future many other things will surely become true and we humans ourselves will watch and experience all of it lively like how we are watching and experiencing it now.

"Human mind is so powerful and at the same time it's so cruel."

                  ----chinmayi

"ಕಾಲಯಾನ", "ಅನ್ಯಲೋಕ ಜೀವಿಗಳ ಸಿದ್ಧಾಂತಗಳು", "ಕಪ್ಪು ರಂಧ್ರದ ಸಿದ್ಧಾಂತಗಳು", "ಬಹುತೇಕ ಬ್ರಹ್ಮಾಂಡದ ಹಾಗೂ ಸಮಾನಾಂತರ ಬ್ರಹ್ಮಾಂಡದ ಪರಿಕಲ್ಪನೆಗಳು", "೧೦೦% ರಷ್ಟು ಮೆದುಳಿನ ಸಾಮರ್ಥ್ಯ"- ಇವುಗಳೆಲ್ಲದರ ಕುರಿತು ಹಾಗೂ ಇನ್ನೂ ಬಹುತೇಕ ಅವಿಸ್ಮರಣಿಯ ವಿಚಾರಗಳ ಕುರಿತು ಚಲನಚಿತ್ರಗಳಲ್ಲಿ ಹಾಗೂ ಗಣಕ ಜಾಲ ಸರಣಿಗಳಲ್ಲಿ ಮುಂಚೆಯೇ ತೋರಿಸಿರುವುದು ಹಾಗೂ ಈಗೀಗ ತೋರಿಸುತ್ತಿರುವುದು ಹಾಗೂ ಎಷ್ಟೋ ವಿಜ್ಞಾನಿಗಳು ರಚಿಸಿರುವ ಸಾಕಷ್ಟೂ ಕಲ್ಪನೆಯ ಸಿದ್ಧಾಂತಗಳು ಎಲ್ಲವೂ ನಿಜವಾಗಿದೆ. ಈಗ ಹೆಂಗೆ ನಾವು ಮನುಷ್ಯರೆಲ್ಲರೂ ಎಲ್ಲವನ್ನೂ ಕಾಣುತ್ತಿರುವೆವೋ ಹಾಗು ಅನುಭವಿಸುತ್ತಿರುವೆವೋ ಹಾಗೆಯೇ ಇನ್ನು ಮುಂಬರುವ ಬಹು ದೂರದ ಭವಿಷ್ಯತ್ಕಾಲದಲ್ಲಿ ಇನ್ನೂ ಎಷ್ಟೋ ವಿಚಾರಗಳು ಅವಶ್ಯವಾಗಿ ಸತ್ಯವಾಗುವುದು ಹಾಗೂ ನಾವೆಲ್ಲರೂ ಇದನ್ನೆಲ್ಲವನ್ನೂ ಸ್ವತಃ ಪ್ರತ್ಯಕ್ಷವಾಗಿ ಕಾಣುವೆವು ಹಾಗು ಅನುಭವಿಸುವೆವು.

"ಮನುಷ್ಯನ ಮೆದುಳು ಎಷ್ಟು ಶಕ್ತಿಯುತವಾದದ್ದೋ ಅಷ್ಟೇ ಕ್ರೂರವಾಗಿದೆ."

                     ----ಚಿನ್ಮಯಿ