Thursday, June 24, 2021

ಮದುವೆಯ ನಂತರದ ಫಜೀತಿ

"ಏನ್ರೀ, ಸ್ವಲ್ಪ ಅಂಗ್ಡೀಗ್ ಹೋಗಿ ಮನೆ ಸಾಮಾನ್ ತರ್ಬಾರ್ದೇ, ಯಾವಾಗ್ಲೂ ಆ ಹಾಳಾದ್ ನ್ಯೂಸ್ ನೋಡ್ಕೊಂಡೇ ಇರ್ತೀರಲ್ಲ" ಎಂದು ಹೆಂಡ್ತಿ ಹೇಳಲು,

ದಿಢೀರನೆ ಹೆಂಡ್ತಿಯ ಕಾಟ ತಡೆಯದೇ ಗಂಡ ಒಮ್ಮೆಲೆ ಎದ್ದು ಹೋದನು ಅಂಗ್ಡಿಯ ಕಡೆಗೆ, ಆ ಅಂಗ್ಡಿಯವ ಬಾಗಿಲ ಮುಚ್ಚುವ ಒಳಗೆ.

ನಿಟ್ಟುಸಿರ ಬಿಡುತ್ತ ಅಂಗ್ಡಿಯವನಿಗೆ ಗಂಡ ಹೇಳಿದ- "ಹೇ ಸ್ವಲ್ಪ ತಡಿಯೋ ಮಾರಾಯ, ತಿಂಗಳಿನ ಸಾಮಾನು ಕೊಟ್ಟು ಬಾಗಿಲಾಕಯ್ಯ",

ಹಳೆಯ ಗಿರಾಕಿ ಎನ್ನುವ ಸಲಿಗೆಯಿಂದ ಗಂಡ ಕೇಳಲು ರಿಯಾಯಿತಿ, ಒಲ್ಲದ ಮನಸ್ಸಿನಿಂದಲೇ ಅಂಗ್ಡಿಯವ ಕೊಟ್ಟನು ರಿಯಾಯಿತಿ.


ಮನೆಗೆ ವಾಪಸ್ಸಾದ ಗಂಡನಿಗೆ ಇನ್ನೊಂದು ಕೆಲಸ ಕೊಡಲು ಹೆಂಡ್ತಿ, "ಸರಿ ಆಯ್ತು ಕಣೆ ಎನ್ನಲ್ಲಷ್ಟೇ ಅಲ್ಲವೇ ಆದೀತು" ಎಂದು ಗೊಣಗಿದ ಗಂಡ,

ಗೊಣಗಲು ನಿಲ್ಲಿಸದ ಗಂಡ ಮತ್ತೆ ಹೀಗೆ ಗೊಣಗಿದನು-"ಯಾರಿಗೆ ಬೇಕು ಸ್ವಾಮಿ ಇದ್ದೆಲ್ಲಾ, ಏನೂ ಬೇಕಾದರೂ ತಡೆಯಬಹುದು ಈ ಹೆಂಡ್ತೀರ ಕಾಟ ತಡೆಯಲು ಆಗದು".

ಗಂಡನ ಗೊಣಗಾಟ ಕೆಳಿಸಿಕೊಂಡ ಹೆಂಡ್ತಿ- "ಏನ್ರೀ ಅದು ಗೊಣಗ್ತಾಯಿರೋದು" ಎಂದೊಂಡನೆಯೇ, "ಹೇ ಏನಿಲ್ಲ ಕಣೆ" ಎಂದು ಕೆಲಸವನ್ನು ಗೊಣಗುತ್ತಲೇ ಮುಂದುವರೆಸಿದ,

ಗಂಡ ಓದುಗರಿಗೆ ಗೊಣಗುತ್ತಲೇ ಹೀಗೆಂದನು- "ಹೀಗೇ ನೋಡಿ ಸ್ವಾಮಿ ಗಾಳಿ ಹೋದ ಬಲೂನಿನಂತೆಯೇ ಅಲ್ಲವೇ ಗಂಡಂದಿರ ಪರಿಸ್ಥಿತಿ, ಓಹೋ ನಿಮಗೆ ಮದುವೆ ಆಗಿಲ್ಲವೇ!? ಆಗಿ ನೋಡಿ ತಿಳಿಯುತ್ತೆ ಮದುವೆಯ ನಂತರದ ಫಜೀತಿ". 


ಈ ವಿನೋದಮಯ ಸತ್ಯವನ್ನು ಓದುವ ನಿಮಗೆ ನಗಲು ಆಗದೇ ಅಳಲು ಆಗದೇ ಉಂಟಾಗಬಹುದು ಇಕ್ಕಟ್ಟಿನ ಸ್ಥಿತಿ, ನೆನೆಸಿಕೊಂಡು ಮದುವೆಯ ನಂತರದ ಫಜೀತಿ!?

                ----ಚಿನ್ಮಯಿ

Wednesday, June 9, 2021

ಯೋಚಿಸಿ...! / Think...!

ಇದುವರೆಗೂ ಎಷ್ಟೋ ವಿಜ್ಞಾನಿಗಳು ಈಗಾಗಲೇ ಪ್ರಕೃತಿಯಲ್ಲಡಗಿದ್ದ ಎಷ್ಟೋ ವಿಚಾರಗಳ ಕುರಿತು ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯ ಮನುಷ್ಯರೇ ಇಷ್ಟೆಲ್ಲಾ ಮಾಡುವರೆಂದರೆ, ಇನ್ನೂ ಭಗವಂತನು ಪ್ರತಿಯೊಂದನ್ನು ಮುಂಚೆಯೇ ಸೃಷ್ಟಿಸಿರಲು ಸಾಧ್ಯವಿರುವುದಿಲ್ಲವೇ? ಹಾಗೂ ಮನುಷ್ಯನಿಗೆ ಎಲ್ಲವನ್ನೂ ಅರಿತುಕೊಳ್ಳಲು ಒಂದವಕಾಶ ಕೊಟ್ಟಿರಬಹುದಲ್ಲವೇ?

ಒಮ್ಮೆ ನೀವೇ ಯೋಚಿಸಿ ನೋಡಿ...!

          ----ಚಿನ್ಮಯಿ

In this long run of life on Earth, so many scientists have invented and discovered so many things which already had been hidden in nature. If a mere human beings can do all this, then will God not be responsible for been created everything already before humans? and will God not be responsible for giving a chance for humans to understand everything?

At least think about it once...!

          ----chinmayi

ನಾಲ್ಕನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೇ ಯೋಧನೆ
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||


ಶತ್ರುಗೆ ಯಮನಿವ ಸರದಾರ,

ವಜ್ರದ ಕವಚವು ಭಾರತಿಗೆ.

ತಲೆಯೇ ಬಾಗದೀ ಯುವಶೂರ,

ಸ್ಪೂರ್ತಿಯ ಧಾತ ತಾಯ್ನಾಡಿಗೆ.

ಹೇ ಬಿಸಿಲು ಚಳಿಗೆ ನಡುಗದೀ,

ರೋಷ-ಆವೇಷದ ಗುಂಡಿಗೆ.

ಕೊಂಚವು ಅಂಜದ ಯೋಧನ,

ಭಿಕ್ಷೆಯೇ ಈ ಉಸಿರು ನಮಗೆ‌.||೧||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ನಿನ್ನ ನಂಬಿದ್ದ ಬಾಳಿಗೆಲ್ಲಾ,

ನೀನೇ ಧೈರ್ಯದ ಹೊಂಗಿರಣ.

ನಮ್ಮ ದೇಶದ ಬಾವುಟವು,

ಹಾರಲು ನೀನೊರ್ವ ಕಾರಣ.

ಕೋಟಿ ಕಾಲಕೂ ಮರೆವೆವು,

ಇಂತಹ ಪವಿತ್ರ ಬಲಿದಾನ.

ದೇಶದ ಜನರ ಕೂಗಿದು,

ನಿನಗೆ ಇದುವೇ ಗುಣಗಾನ. ||೨||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ದೇಶವ ಕಾಯುವ ಸೈನಿಕನಲ್ಲಿ,

ದೇಶಾಭಿಮಾನವು ಅಳಿಯದು.

ಎಷ್ಟೋ ಆಯುದ್ಧ ಇದ್ದರು,

ಧೈರ್ಯವೇ ಆಯುದ್ಧ ಅವನದು.

ವೀರತ್ವ ಮೆರೆದ ಓ ವೀರನೇ,

ನಿನಗಿದು ಅರ್ಪಣೆ ಈ ಹಾಡು‌.

ನಮ್ಮಯ ಸೌಭಾಗ್ಯವು ಇದು,

ನಿನ್ನ ನಿವಾಸ ಎದೆ-ಗೂಡು. ||೩||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||

          ----ಚಿನ್ಮಯಿ