Saturday, July 29, 2023

ಏಕತೆ, ಐಕ್ಯತೆ, ಸಮಾನತೆ.

ಏಕತೆ, ಐಕ್ಯತೆ, ಸಮಾನತೆ

ಕುರಿತಾಗಿ ಮಾತನಾಡುವ ಯೋಗ್ಯತೆ—

ಮೊದಲು ಸಂಪಾದನೆ ಮಾಡಬೇಕು 

ಹಾಗೂ 

ಸಂಪಾದನೆ ಮಾಡಕ್ಕೆ ಜೀವನದಲ್ಲಿ ಕಾರ್ಯರೂಪವಾಗಿ ಅದನ್ನೇ ಅಳವಡಿಸಿಕೊಳ್ಳಬೇಕು.


      ----ಚಿನ್ಮಯಿ

Sunday, July 23, 2023

CHANGE lies Within

Don't wait for a CHANGE to happen. Instead CHANGE YOURSELF, then automatically CHANGE happens.

                ----Chinmayi

Saturday, July 22, 2023

"ಕ" ಅಕ್ಷರದ ಕಲಿಯುಗ ಯುದ್ಧ. ಕಲಿ VS ಕಲ್ಕಿ. The battle of "K" in Kaliyuga. Kali VS Kalki.

ಚಿತ್ರಕ್ಕೆ ಪದ್ಯ- ೭೩


ಒಂದೇ ಒಂದು ವ್ಯತ್ಯಾಸ ಕಲಿ ಹಾಗೂ ಕಲ್ಕಿ ನಡುವಲ್ಲೇನೆಂದರೆ "ಕ" ಅಕ್ಷರ, ಅದರರ್ಥ ಕರುಣೆ.

               ----ಚಿನ್ಮಯಿ


The only difference between Kali and Kalki is the letter "K", which stands for Kindness.

              ----Chinmayi

Friday, July 21, 2023

ತ್ರಿಪದಿ- ೨

ಮೋರಿಯೊಳ ಮಳೆ ಮಿಂದರೂ ಶುಚಿ ಆಪುದಿಲ್ಲ.

ಸೇರಬೇಕು ಆತ್ಮದೊಳು ಪರಮಾತ್ಮನ ಸದ್ಭಾವನೆ—

ಅರಿವಿನ ಶುಚಿಯ ಉಗಮಕ್ಕೆ ಚಿನ್ಮಯಿ.


"ಭಾವಾರ್ಥ:"

ಮೋರಿಯೊಳಗೆ ಅದೆಷ್ಟೇ ಮಳೆ ನೀರು ಸೇರಿದರೂ ಮೇಲ್ನೋಟಕ್ಕೆ ಶುಚಿ ಕಾಣುವುದೇ ಹೊರತು ಆಳದಲ್ಲಿ ಕೊಳಕು ಆಗೆಯೇ ಕೊಳೆತು ನಾರುತ್ತಿರುತ್ತದೆ ಹಾಗೂ ತನ್ನ ಸೇರೋ ಮಳೆ ನೀರನ್ನು ಕೊಳಕು ಮಾಡುತ್ತದೆ. ಆಳದಿಂದ ಶುಚಿಯಾದಾಗಲೇ ಶುದ್ಧ ನೀರಿನ ರೂಪ ಪಡೆಯುವುದು.

ಹಾಗೆಯೇ, ಮನುಷ್ಯರ ವಿಚಾರದಲ್ಲೂ ಸಹ ಮೇಲ್ನೋಟಕ್ಕೆ ಆಡಂಬರ ಪೂಜೆ-ಪನಸ್ಕಾರಗಳು ಅದೆಷ್ಟೇ ಮಾಡಿದರೂ ಸಹ ಪರಮಾತ್ಮನು ಒಲಿಯಲ್ಲ, ಅಂಧಕಾರವ ದೂಡಿ ಪರಿಶುದ್ಧತೆ ಹಾಗೂ ಸದ್ಭಾವದ ಅರಿವಿಂದ ಆತ್ಮದಲ್ಲಿ ನೆಲೆಸಿಹ ಪರಮಾತ್ಮನನ್ನು ಒಲಿಸಿದರೇ ಭಕ್ತಿಯ ಉಗಮದಿಂದ ಪರಮಾತ್ಮನ ಸಾಕ್ಷಾತ್ಕಾರವಾಗುವುದು.


              ----ಚಿನ್ಮಯಿ

Best way to reach GOD.!?

Worshipping through pure mind and heart is the best way to access the best portal of life called GOD.

               ----Chinmayi

Wednesday, July 19, 2023

ಮನಸ್ಸು -> ನಾಲಗೆ <- ಹೃದಯ

ಚಿತ್ರಕ್ಕೆ ಪದ್ಯ- ೭೨


ಮನಸ್ಸು ಹಾಗೂ ಹೃದಯದ ಮಧ್ಯದಲ್ಲಿ ನಾಲಗೆಯನ್ನಿರಿಸಿ ಆ ಎರಡಕ್ಕೂ ನಾಲಗೆಯನ್ನ ಜೋಡಣೆ ಮಾಡಿರುವುದು ಆ ಬ್ರಹ್ಮನ ದೇಹ ವಿನ್ಯಾಸದ ಚಮತ್ಕಾರವೇ ಸರಿ.

ಏಕೆಂದರೆ,

ಮಾತನಾಡುವಾಗ ಮನಸ್ಸು-ಹೃದಯ ಎರಡರ ಹಿಡಿತವಿರಬೇಕು, ಸಮತೋಲನವಿರಬೇಕು— ಆಗಲೇ ಒಳ್ಳೆ ನಡತೆ ಪ್ರಾಪ್ತಿಯಾಗುತ್ತದೆ...


              ----ಚಿನ್ಮಯಿ

Sunday, July 16, 2023

ಆಷಾಢ ಪ್ರೇಮ

ನವ ದಂಪತಿಗಳ

ನವ ಜೀವನದ

ವಿರಹ ಯಾತನೆ

ಅದುವೇ ಆಷಾಢ ಪ್ರೇಮ.

ಬಳಿ ಸೇರಲಾಗದೆ

ಕಾಯೋ ತವಕದಿ

ಸನಿಹ ಭಾವನೆ

ಎದೆಯೊಳಗೆ ಉಗಮ.


ಇರುವೆ ಬಳಿಯಲಿ

ಸಿಹಿಯನ್ನಿರಿಸಿ

ತಾಕದಂಗೆ ತಡೆಯುವ

ಅಪರಾಧ ಬಲು ಘೋರ.

ಹೀಗೆಯೇ ಆಗಿರಲು

ನವಜೋಡಿ ಪರಿಸ್ಥಿತಿ

ಹೇಗೆ ತಾನೆ ಇಳಿಸಲು

ಸಾಧ್ಯವು ಎದೆಯ ಭಾರ...!


ಕುಸುಮದಲ್ಲಡಗಿಹ

ಸವಿಯನ್ನೀರುತ

ಮಕರಂದ ತಯಾರಿಗೆ

ಜೇನು ಹುಳುವಿಗೇರಪ್ಪಣೆ...?

ಹಾಗೆಯೇ ಸಖ-ಸಖಿಯ

ಒಲವ ಸಂಗಮಕ್ಕೆ

ಅಡಚಣೆಯ ಕುರಿತು

ಹೃದಯ ಬೇಡಿದೆ ಸ್ಪಷ್ಟನೆ...!


ಎಲ್ಲೆ ಮೀರಿದ ಚಳಿಗೆ

ನಲುಗಿ ಹೋಗುತ

ವಿಯೋಗ ಸವಿಯುತ

ಒಂದು ಮಾಸವು ಕಳೆದಾಯ್ತು.

ಪ್ರೇಯಸಿ ಹಾದಿಯ

ಎದುರು ನೋಡುತ

ಮುಗುಳುನಗುತ 

ಎದೆ ಕುಣಿಯಲು ನೋವೇ ಮರೆಯಾಯ್ತು..


      ----ಚಿನ್ಮಯಿ

Friday, July 7, 2023

ಬಾಳಸಾಥಿಯೇ...

ನಾ ಮಾಡಿದ ಯಾವ ಜನ್ಮದ ಪುಣ್ಯ—

ಈ ಜನ್ಮ ನಿನ್ನ ಪಡೆದ ನಾನೇ ಧನ್ಯ.

         ----ಚಿನ್ಮಯಿ

Thursday, July 6, 2023

ತ್ರಿದೇವಿ

ಚಿತ್ರಕ್ಕೆ ಪದ್ಯ- ೭೧

ಹೇ ಮಾತೆ ಜಗತ್ಜನನಿ ನಿನ್ನಿಂದಲೇ ಎನಗೆ ಆರೋಗ್ಯ-ಶಕ್ತಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...

ಹೇ ಮಾತೆ ಮಹಾಲಕ್ಷ್ಮಿ ನಿನ್ನಿಂದಲೇ ಎನಗೆ ಹಣ-ಐಶ್ವರ್ಯದ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...

ಹೇ ಮಾತೆ ಸರಸ್ವತಿ ನಿನ್ನಿಂದಲೇ ಎನಗೆ ವಿದ್ಯೆ-ಬುದ್ಧಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...


ತ್ರಿದೇವಿಗಳಲ್ಲಿ ವಾಣಿಯೇ ಎನ್ನ ಪ್ರೀತಿಯ ಮಾತೇ. ಇದೋ ನಿನ್ನ ಪ್ರೀತಿಯ ಪುತ್ರನ ಶತಕೋಟಿ ನಮನಗಳು...


                 ----ಚಿನ್ಮಯಿ

Wednesday, July 5, 2023

ತ್ರಿದೇವಿ-ತ್ರಿಮೂರ್ತಿಗಳಲ್ಲಿ ಆದಿಶಕ್ತಿ ಹಾಗೂ ಆದಿಯೋಗಿಯೇ ಶ್ರೇಷ್ಠರು

ಚಿತ್ರಕ್ಕೆ ಪದ್ಯ- ೭೦

ಈ ಜೀವಕ್ಕೆ—

ಆರೋಗ್ಯ-ಶಕ್ತಿಯಿದ್ದರೆ ಮಾತ್ರ,

ವಿದ್ಯೆ-ಬುದ್ಧಿಯು ಹಾಗೂ ಹಣ-ಐಶ್ವರ್ಯವು ಉಪಯುಕ್ತ...


ಆದ್ದರಿಂದಲೇ, 

ಆದಿಶಕ್ತಿಯು ಆಕೆಯ ಮೂಲ ಮಹಾದೇವನು ಮೊದಲು ಒಲಿಯಬೇಕು,

ತದನಂತರ ತಂತಾನೆ ವಾಣಿಯು ಆಕೆಯ ಮೂಲ ವಿರಿಂಚನು ಹಾಗೂ ಮಹಾಲಕ್ಷ್ಮಿಯು ಆಕೆಯ ಮೂಲ ಅಚ್ಯುತನು ಒಲಿಯುವರು...


      ----ಚಿನ್ಮಯಿ

ಗುರುದೇವೋ ನಮಃ

ಇದೀಗ ಜನಿಸಿರುವ ಹಸುಳೆಯಿಂದಿಡಿದು, 

ಇನ್ನೇನು ಸಾಯುತ್ತಿರುವ-ಸತ್ತಿರುವ ಮನುಷ್ಯರವರೆಗೂ—

ಪಂಚಭೂತಗಳಿಂದಿಡಿದು,

ಸಕಲಜೀವರಾಶಿಗಳವರೆಗೂ—


ಎಲ್ಲರೂ ಎನಗೆ ಗುರುವೇ.

ಎಲ್ಲರಿಗೂ ತಲೆ ಬಾಗಿರುವೇ.

ಎಲ್ಲರಿಗೂ ನಮಿಸಿರುವೇ.

ಎಲ್ಲರೊಳಗೊಂದಾಗಿರುವೇ...


      ----ಚಿನ್ಮಯಿ

Tuesday, July 4, 2023

ಅರುಣರಾಗದ ಅನುರಾಗ

ಚಿತ್ರಕ್ಕೆ ಪದ್ಯ- ೬೯

ಗೋಧೂಳಿ ವೇಳೆಯಲಿ ತಂಗಾಳಿ ಬೀಸುತಲಿ,

ಬಾನಿಗೆ ಭಾನು ಉಡಿಸುವಾಗ ಕೇಸರಿ—

ಒಲವ ಮಂಟಪದಡಿ ನಮ್ಮಿಬ್ಬರ ಮಿಲನ.

ನದಿಯೊಳ ಸವಿದೆವು ಆ ಸುಂದರ ಕ್ಷಣ.

ಮೇಘಗಳು ಗದರಿ ತಾ ಬಿಕ್ಕಿ ಬಿಕ್ಕಿ ಅಳುವಾಗ,

ಇಳೆಯು ಆಗಸ ತಾಕಿ ಉಡುವಂತೆ ಹಸಿರ—

ನಮ್ಮಿಬ್ಬರ ಸಿಹಿ ಕಾದಾಟದ ಸವಿ ಸಮಯ.

ಅದರಿಂದಿರೋ ಮಧುರ ಸುಮಧುರ ಪ್ರಣಯ.

ಶಶಿಯ ಆಗಮನ ಬೇಡವೆನಿಸುವಷ್ಟು,

ಒಳ ಮನಸ್ಸನ್ನು ಹೊಕ್ಕಿರಲು ವಾತಾವರಣ—

ಈಗೆಯೇ ಸದಾ ಇದ್ದುಬಿಟ್ಟರೇ ಅದೆಷ್ಟು ಸಂತಸ!

ಅದಾಗದೆಂದಿಗೂ ಜೊತೆ ಆವರಿಸಿರಲು ನೀರಸ...!


        ----ಚಿನ್ಮಯಿ