Wednesday, December 21, 2022

ತೆಗಳಿಕೆ <-> ಹೊಗಳಿಕೆ

ಸೇವಿಸಿದರೆ ತೆಗಳಿಕೆಯೆಂ ಖಾದ್ಯ,

ಹೊಗಳಿಕೆಯಿಂ ಬೆಳವಣಿಗೆ ಸಾಧ್ಯ.

          ----ಚಿನ್ಮಯಿ

Wednesday, December 14, 2022

ಕಾಮ..ಪ್ರೇಮ..

ಮನಸ್ಸಿಗೆ ಕಾಮದೂಟ ಉಣಿಸಿದರೆ ಮನುಷ್ಯನಾಗುವನು ಕಾಮಾಸುರ.

ಮನಸ್ಸಿಗೆ ಪ್ರೇಮದೂಟ ಉಣಿಸಿದರೆ ಮನುಷ್ಯನ ಹೃದಯ ಪ್ರೇಮ ಮಂದಿರ.

              ----ಚಿನ್ಮಯಿ

Sunday, December 11, 2022

ಮಳೆಗಾಲದ ಬೆಂಗಳೂರಿನ ಕಷ್ಟದ ಕಥೆಗಳು

ಅಂಕು-ಡೊಂಕಿನ ರಸ್ತೆಯ ಮೇಗಡೆ ದಿನವೂ ಸವಾರಿ.

ಗಾಡಿ ಜೊತೆ ಬಾಡಿ ಬೌಂಸಿಂಗ್ ಹ್ಯಾಂಡಲ್ ಸ್ವಿಂಗಿಂಗ್.


ಬೇಸಿಗೆ-ಚಳಿಗಾಲದಲ್ಲಿ ಪರವಾಗಿಲ್ಲ ರಸ್ತೆ ಕಾಣುವುದು,

ಬೈಕ್-ಕಾರ್ ಓಡ್ಸ್ಬೋದು.

ಮಳೆಗಾಲದ ಕಥೆಯೇ ಬೇರೆ,

ಆಗಲೇ ಉದಯಿಸುವುದು ಸಿಟ್ಟಿನ ಮೋರೆ.


ಗಾಡಿ ಓಡ್ಸೋ ಕಷ್ಟಕ್ಕೆ ಆಗಾಗ ನೆನೆಸ್ಕೊಂಡ್ ನೆನೆಸ್ಕೊಂಡ್ ಉಗಿಯುವೆವು,

"ಎಂಎಲ್ಎ - ಎಂಎಲ್ ಸಿ - ಎಂಪಿ" ಗಳಿಗೆ "ಥೂ ಬ್ಯಾವರ್ಸಿಗಳ ನಿಮ್ಮ್ ಮಕ್ಕೆ, ಉದ್ದಾರ ಆಗಕ್ಕಿಲ್ಲ ದ್ಯಾವ್ರಾಣೆ" ಎಂದು.


        ----ಚಿನ್ಮಯಿ

Sunday, November 20, 2022

ಸಂಸ್ಕಾರ

ಮಾಡಿ ನೋಡು ಅಹಂಕಾರದ ಸಂಹಾರ,

ಮರುಚಣವೇ ಉದ್ಭವಿಸುತ್ತದೆ ಸಂಸ್ಕಾರ.


'ಸಂಸ್ಕಾರ'ದಿಂದಲೇ 'ಅಹಂಕಾರ'ದ ಸಂಹಾರ...


       ----ಚಿನ್ಮಯಿ

ಅವನು.. ಅವಳು.. ಪ್ರೇಮ..

ಅವಳಾದರೆ ಪ್ರೇಮ ಪುಸ್ತಕದ ಪರಿವಿಡಿ,
ನಾನಾಗುವೆ ಅವಳಿಗಾಗಿ ಮುನ್ನುಡಿ.
ಅವಳಾದರೆ ಪದಕೋಶದ ಸಹಚರಿ,
ಓದುವ ಹವ್ಯಾಸ ಇನ್ಮುಂದೆ ದಿನಚರಿ.

ಅವನಾದರೆ ಪ್ರೇಮದಡಗಿನ ನಾವಿಕ,
ನಾನಾಗುವೆ ದಾರಿ ತೋರುವ ದ್ಯೋತಕ.
ಅವನಾದರೆ ಹಣೆಯಲ್ಲಿ ಗೋಧೂಳಿ ರವಿಯು,
ಬಾಳಸಾಗರದಲೆಗಳಿಗೆ ಎಂದೆಂದೂ ಸುಖವು.

ಮನೆಯರಸಿ ಮನದರಸಿ ಗುಣಶೀಲೆ ಅವಳೇ ವಿಮಲ,
ಗುಣವಂತ ಸಿರಿವಂತ ಅವನ ಪ್ರೇಮವೆಂದೆಂದಿಗೂ ಅಚಲ.
ಪ್ರೇಮದೀಷಾರೆಯ ನೀಡಿದವಳದೋ ಹೃತ್ಕಮಲ,
ಬಾಳಸಖನಾಗಿ ಅವನಿರಲು ಜೊತೆಗೆ ಇರದಿರದು ತುಮುಲ...

            ----ಚಿನ್ಮಯಿ

Saturday, November 19, 2022

ಮಾನವೀಯತೆ...!

ಮನುಷ್ಯ ಇತರ ಮನುಷ್ಯರನ್ನು ಹಾಗೂ ಸಕಲ ಜೀವರಾಶಿಗಳನ್ನು ತನ್ನಲ್ಲಿ ಒಬ್ಬರೆಂದು ಮಾನವೀಯತೆಯಿಂದ ಕಂಡರೆ ಪ್ರಪಂಚ ಎಷ್ಟೋ ಸುಂದರಮಯ

             ----ಚಿನ್ಮಯಿ

Tuesday, November 15, 2022

ಬಾ...

ಚಿತ್ರಕ್ಕೆ ಪದ್ಯ-೬೧

ಹಾರುವ ಹಕ್ಕಿಗಳ ನೋಡುವ ಬಾ

ಚಿಲಿಪಿಲಿ‌ ನಾದಕ್ಕೆ ಕುಣಿಯುವ ಬಾ

ಬಾನಂಗಳದಾಚೆಗೆ ಹೋಗುವ ಬಾ

ನಾವೇ ಹಕ್ಕಿಗಳಾಗಿ ಹಾರಾಡುವ ಬಾ


           ----ಚಿನ್ಮಯಿ

Saturday, November 5, 2022

ದೇವರೇ...

ದೇವರೇ ಈ ಬದುಕು ನಿನ್ನಯ ಭಿಕ್ಷೆ.

ತಪ್ಪಿಗೆ ಅನುಭವಿಸಲೇಬೇಕು ಶಿಕ್ಷೆ.

ಬಂದಂತೆ ಬದುಕುವುದೇ ಧರ್ಮ.

ಇಲ್ಲವೇ ಕಾದು ಕುಳಿತಿರುವುದು ಕರ್ಮ.


         ----ಚಿನ್ಮಯಿ

ಬದುಕಿನ ಸಾರ್ಥಕತೆ

ಬದುಕ- ಬಂದಂತೆ ಜೀವಿಸು.

ಎಲ್ಲರ ನಿಷ್ಕಲ್ಮಶದಿ ಪ್ರೀತಿಸು.

ಇಷ್ಟಿದ್ದರೆ ದ್ವೇಷ-ಆಕ್ರೋಷ ಇನ್ನೇತಕೆ?

ಖುಷಿಯಿಂದ ಜೀವಿಸಿದರೆ ಸಾರ್ಥಕವು ಬದುಕೇ..


        ----ಚಿನ್ಮಯಿ

Monday, October 31, 2022

'ಪುನೀತ'ರ ನೆನಪು

ಬೇಡವೆಂದರು ಕಾಡುತ್ತಿವೆ ನೆನಪುಗಳು ಬಹಳ.

ಮರಳಿ ಬಂದು ಈಡೇರಿಸಬಾರದೇ ಹೃದಯದ ಹಂಬಲ!?

              ----ಚಿನ್ಮಯಿ

ಸಗ್ಗನಾಡಿದು ಕರುನಾಡು

ಸಗ್ಗನಾಡಲ್ಲಿ ಜನಿಸಲು ನಾ ಮಾಡಿರುವೇ ಪುಣ್ಯ.
ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಕಂಗಳೇ ಧನ್ಯ.
            ----ಚಿನ್ಮಯಿ

Monday, October 24, 2022

Two successes to be achieved in life

There are two successes to be achieved in life:

•The first one (which everyone needs it desperately and almost all achieve it) is to earn name, fame, and money- All comprises of getting settled.

•The second one and the most important one (which only few achieve but most fail to achieve) is to lead a peaceful, happy life by "being human".

               ----chinmayi

Wednesday, October 5, 2022

ಆರನೆ ಸ್ವಂತ ಸಾಹಿತ್ಯ ಬರವಣಿಗೆ

ಚೊಚ್ಚಲ ಚಲನಚಿತ್ರದ ಸಾಹಿತ್ಯ ಬರವಣಿಗೆ


ಹಾಡು: ನಿಜವಾ ಇದು 

ಚಲನಚಿತ್ರ: ಲವ್ ಲೆಟರ್

ಸಾಹಿತ್ಯ: ಚಿನ್ಮಯಿ


ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||

ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಕೈಹಿಡಿದು ನೀನು ಸಪ್ತಪದಿ ತುಳಿದು.
ಕೈಹಿಡಿದು ನೀನು ಸಪ್ತಪದಿ ತುಳಿದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಬೆನ್ನಿಂದೆಯೇ ಪ್ರೀತಿ ಕೊಂದೆ ಇಂದು. ||೧||

ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ! ||ಅನು ಪ||

ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ನಗುಮುಖದೀ ಮುಖವಾಡವ ಧರಿಸಿ.
ನಗುಮುಖದೀ ಮುಖವಾಡವ ಧರಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ಮನಃಶಾಂತಿಯ ಕೆಡಿಸಿ ದೂರಾದೆ ನೀ. ||೨||

ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||

    ----ಚಿನ್ಮಯಿ

Saturday, September 3, 2022

ಪ್ರಾಯಶಃ!

ಎದೆ ಮುಗಿಲ ಮೋಡಗಳು ಭಾರವಾಗಲು—

ನಯನಗಳು ಸುರಿಸುತ್ತಿವೆ ಧಾರಾಕಾರ ಮಳೆಯ.

ಕರಿ ಮೋಡಗಳ್ಹಿಂದೆ ಎಲ್ಲೋ ನಗೆ—

ಸೂರ್ಯನು ಮರಳಿ ಉದಯಿಸಬಹುದೇನೋ ಪ್ರಾಯಶಃ!


ಎದೆದೋಟದ ಹೂಗಳೆಲ್ಲವೂ ಬಾಡಿ—

ಕಳೆದುಕೊಂಡಿರುವ ಹಾಗಿದೆ ಬದುಕಿನ ಉತ್ಸಾಹವ.

ಯಾರಾದರೂ ನವ ಚೈತನ್ಯವೆಂ—

ನೀರುಣಿಸಿ ಮರಳಿ ಬದುಕಿಸಬಹುದೇನೋ ಪ್ರಾಯಶಃ!

             ----ಚಿನ್ಮಯಿ

Thursday, August 4, 2022

Information->Knowledge->Intelligence->Wisdom

"Information" is the infinite dots hidden in nature.

"Knowledge" is how one tries to acquire as many dots as possible.

"Intelligence" is how one connects to the acquired dots.

"Wisdom" is how one leads life to the fullest after connecting with the dots.

              ----Chinmayi

ಈಗೊಂದು ಪಾನಿಪುರಿಯ ಕಥೆ

"ನಾ ತಿನಿಸುವೆ, ನಾ ತಿನಿಸುವೆ."

'ನಾ ತಿನ್ನುವೆ, ನಾ ತಿನ್ನುವೆ.'

"ನೀ ಮೊದಲೋ ನಾ ಮೊದಲೋ ನೋಡುವೆ."

'ಓಹೋ! ಸರಿ ನಾನು ಸಹ ನೋಡುವೆ.'


"ಇಗೋ ಶುರುವು ಆಟ,

ಇದೇ ನಿನಗೆ ಊಟ.

ಅಗಲಿಸು ಬಾಯಿಯನ್ನ,

ಕೈಯಿಗೆ ಕೊಡು ಕೆಲಸವನ್ನ."

'ಬಟಾಣಿ, ಈರುಳ್ಳಿ, ಟೊಮ್ಯಾಟೊ, ಮಿಕ್ಸ್ಚರ್,

ಮಸಾಲೆ, ಪಾನಿಯ ಪರ್ಫೆಕ್ಟ್ ಮಿಕ್ಸ್ಚರ್.

ಆಹಾ! ರುಚಿಯೋ ರುಚಿಯು,

ನಾಲಗೆಗೇನೋ ಸಡಗರದ್ಕುಣಿತವು.'


'ಮೊದಮೊದಲು ನಾ ಮೊದಲು,

ತದನಂತರ ನೀನೇ ಮೊದಲು.'

"ಒಂದರಿಂದಿನ್ನೊಂದು ಪಾನಿಪುರಿ,

ತಿನಿಸುವುದರಲ್ಲಿ ನಾನೇ ಕಿಂಗು ರೀ.

ಇನ್ನಷ್ಟು ತಿನಿಸುವೆ ಬಾ ಬಾರೋ,

ತಿಂದು ಗೆದ್ದರೆ ನೀನೇ ಹೀರೋ."

'ಅಯ್ಯೋ! ಶುರುವಿನಲ್ಲಿ ಮಸ್ತೋ ಮಸ್ತು,

ತಿಂದು ಸಾಕಾಗೀಗ ಸುಸ್ತೋ ಸಸ್ತು.'

           ----ಚಿನ್ಮಯಿ

Tuesday, June 21, 2022

Real INDIANS 🇮🇳

Do you know who the Real INDIANS are?

'Undercover Agents' and 'RAW Agents', who work anonymously to safeguard India from any threats even after knowing that they doesn't receive any benefits, medals, name, fame etc in return for their sevice towards India are the Real INDIANS.

                ----Chinmayi

Sunday, June 12, 2022

ರಾಗಿ ಮುದ್ದೆ

ಚಿತ್ರಕ್ಕೆ ಪದ್ಯ-೬೦

ಕರುನಾಡಿನೆಮ್ಮೆಯ ಕೂಸಾಗಿ, ಬಸ್ಸಾರು ನಾಟಿಕೋಳಿ ಸಾರುಗಳಾತ್ಮೀಯ ಸ್ನೇಹಿತನಾಗಿ, ದೇಹದಾರೋಗ್ಯದ ಪ್ರಾಕೃತಿಕ ವೈದ್ಯನಾಗಿ‌,

ಯೋಗ್ಯ'ರಾಗಿ'ಸೋ, ಭಾಗ್ಯ'ರಾಗಿ'ಸೋ, ಭಾಗ್ಯವಂತ'ರಾಗಿ'ಸೋ— 

ಕಪ್ಪ-ಬಿಳುಪ ಮಿಶ್ರಣದಿ ಸಿರಿಧಾನ್ಯಗಳೊಡೆಯ.

            ----ಚಿನ್ಮಯಿ

ಶ್ವಾನ

ಚಿತ್ರಕ್ಕೆ ಪದ್ಯ-೫೯

ಭಾವಮಂದಿರದೊಳು ಭಾವನೆಗಳಿಗೆ ಪ್ರೇಮಾಮೃತವುಣಿಸಿ-

ಭಾವಾತ್ಮಕತೆಯೊಳು ಜೀವಿಸೋ ಪವಿತ್ರ ಚೇತನ.
                       ----ಚಿನ್ಮಯಿ

Inspired by
"777 Charlie"

Wednesday, June 8, 2022

ಚಿರನಿದ್ರಾ ನಿವಾಸ

ಚಿತ್ರಕ್ಕೆ ಪದ್ಯ/ಉಲ್ಲೇಖ- ೫೮

ಮಲಗುವರು ಎಲ್ಲರಿಲ್ಲಿ ಪಾಪ-ಪುಣ್ಯದ ಹೊದಿಕೆಯಡಿ ನಿಶ್ಚಿಂತರಾಗಿ.

ಎಲ್ಲಿಹುದು "ನಾನು-ನಾನೇ" ಈ ಜಾಗದಲ್ಲಿ!?

           ----ಚಿನ್ಮಯಿ

Saturday, June 4, 2022

ಬದುಕಿನ ಸತ್ಯದ ಅರಿವು

ಹೇಗೆ ಕಾಮನಬಿಲ್ಲು ಬಿಸಿಲು-ಮಳೆಯ ಮಿಲನದ ಫಲವೋ,

ಹೇಗೆ ಹಣತೆಯ ಬೆಳಕು ಎಣ್ಣೆಯ ಅವಲಂಬಿತವೋ,

ಹಾಗೆಯೇ,

ಎಲ್ಲರೂ ಇಲ್ಲಿ ಸಮಯದ ಗೊಂಬೆಯೇ.

ಸಮಯಕ್ಕೆ ಮಾತ್ರ ನೆನೆಯುವ ಸ್ವಾರ್ಥಿಗಳೇ.


ಹೇಗೆ ಊಸರವಳ್ಳಿಯು ಬೇಕಾದಾಗ ಬಣ್ಣವ ಬದಲಿಸುವುದೋ,

ಹೇಗೆ ಕೋಗಿಲೆಯು ತನ್ನ ಮೊಟ್ಟೆಗಳನ್ನ ಕಾಗೆಯ ಮೊಟ್ಟೆಗಳ ಜೊತೆ ಬೆರೆಸುವುದೋ,

ಹಾಗೆಯೇ,

ಎಲ್ಲರೂ ಇಲ್ಲಿ ಕೆಲಸ ಮುಗಿಯುವವರೆಗೂ ಜೊತೆಗಾರರೇ.

ಕೆಲಸ ಮುಗಿದ ನಂತರ ಹಠಾತನೇ ಕಣ್ಮರೇ. 


ಹೇಗೆ ರಸ್ತೆಯಲಿ ಓಡುವ ಗಾಡಿಗೂ ಡೆಡ್ ಎಂಡ್ ಇರುವುದೋ,

ಹೇಗೆ ಬಲುದೂರ ಕರೆದೊಯ್ಯೋ ಗಾಡಿಗೂ ಕೆಲವು ಸಲ ಬಯ್ಯುವೆವೋ,

ಹಾಗೆಯೇ,

ಕೆಲಸ ಮುಗಿದ ನಂತರ ನಮ್ಮನ್ನು ಮರೆಯುವರು.

ಧನ್ಯವಾದಗಳು ಕೂಡ ಹೇಳದೆ ಹೊರಟೋಗುವರು ಹಾಗೂ ಮತ್ತೆ ಕೆಲಸದ ನಿಮಿತ್ತ ಬರುವರು.


ಮನುಜನು ಗಾಳಿ-ನೀರು-ಬೆಳಕು-ಆಹಾರಗಳ ಬಂಧಿತನು,

ಇಷ್ಟಿದ್ದರೂ ಜಂಭದಿ "ನಾನು, ನಾನೇ" ಎಂದು ಮೆರೆವನು.


ಒಳಿತು ಮಾಡು ಮನುಸ,

ಕಷ್ಟದಿ ಕೈಯಿಡಿದವರ ನೆನೆಯುತಿರು ದಿವಸ.

        ----ಚಿನ್ಮಯಿ

ಒಲವ ರಾಗ

ಹೂವಿನೆಡೆಗೆ ದುಂಬಿಯ ಪಯಣ,

ಅವನೆಡೆಗೆ ನನ್ನಯ ಗಮನ,

ದುಂಬಿಗೆ ಸಿಹಿಯ ಸುಖಭೋಗ,

ನನ್ನಲ್ಲಿ ಶುರುವು ಪ್ರಣಯ ಯಾಗ,

ಹಾ! ಹಾ! ಇದುವೆಯಾ ಒಲವ ರಾಗ!?


ಧರೆಗೂ ಬಾನಿಗೂ ನಡುವೆ ಅಂತರ,

ಅವನನ್ನು ಸೇರಲು ಮನಸ್ಸಿಗೆ ಆತುರ,

ಮಳೆಯ ಸೇತುವೆ ಪ್ರಣಯ ಮಾರ್ಗ,

ಎದೆಯೊಳಗಿನ ಅನುಭವ ಅಮೋಘ,

ಹಾ! ಹಾ! ಇದೆಂಥಹ ಒಲವ ರಾಗ!


ಚಿಗುರೆಲೆಗಳ ನರ್ತನಕ್ಕೆ ಗಾಳಿಯೇ ಮಾಲಿಕ,

ಅವನ ಸ್ಪರ್ಶದಿಂದಲೇ ಪ್ರೇಮವು ದ್ಯೋತಕ,

ಮರಗಳಿಗಂತು ಮಿಲನವ ಸವಿಯುವ ಸುಯೋಗ,

ಇದುವೇ ಇರಬಹುದೇನೋ ವಾಸಿಯಾಗದ ಪ್ರೇಮರೋಗ!

ಹಾ! ಹಾ! ಸುಮಧುರವು ಒಲವ ರಾಗ.

               ----ಚಿನ್ಮಯಿ

Friday, June 3, 2022

ಪ್ರಣಯ... ವಿರಹ

ಒಲವ ದಾರಿಯಲಿ ನಡೆವಾಗ ಎದುರು ಬಂದಳೋರ್ವ ಮನಮೋಹಿನಿ,

ನಯನಗಳ್ಕುಣಿಯಲು ಮೊಗವರಳಲು ಕಾರಣ-

ಎದೆದೋಟದ ಸುಹಾಸಿನಿ.


ಕೇಶವ ಕೆದರುತ ಹಿಂದಿರುಗಿ ನೋಡುತ ಮರೆತೆ ಮನೆದಾರಿಯ,

ಆಕೆಯು ಹಿಂದಿರುಗಲು ತಲೆಯ ಕೆಳಗಿಳಿಸಲು ಮೇಲ್ನೋಡಿ-

ಜಿಗಿಯಲು ಪ್ರೇಮೋದಯ.


ಉದಯರಾಗ ಮೂಡಲು ಪ್ರಣಯಗೀತೆ ಹಾಡಲು ಶುರುವಾಯ್ತು ಪಯಣವು,

ಎದುರು ಬಂದು ನಿಂತರು ಪಕ್ಕಕ್ಕೆ ಸರಿದು ಹೋದಳು-

ಪ್ರಣಯವಾಯ್ತು ವಿರಹವು.


ಒಮ್ಮೆ ಹಿಂದೆ ನೋಡಲು ಹಕ್ಕಿ ಇನೋರ್ವ ಹೆಗಲೇರಿದೆ ಪ್ರಣಯಗೂಡು ಮುರಿದಿದೆ,

ನಾನೇ ತಪ್ಪು ತಿಳಿದೆನೋ ಅವಳೇ ಬಿಟ್ಟು ಹೋದಳೋ ಅರಿಯದೆ-

ಮನೆಯೆಡೆಗೆ ಸಾಗುತ ವಿರಹಗೀತೆ ಹಾಡಿದೆ.

                ----ಚಿನ್ಮಯಿ

Thursday, June 2, 2022

ಗೃಹಭೂಷಿತೆ

ಮನಸ್ಸನ್ನು ಮನಸೂರೆಗೊಳ್ಳಿಸಿ

ಪ್ರೇಮ ಬಲೆಯೊಳು ಬಂಧಿಸಿ

ಅಭಿಸಾರಿಕೆಯಾಗಿ ಎನಗಾಗಿ ಕಾಯುವವಳಾಕೆ.


ತುಷಾರ ಹವಾಮಾನವಿದ್ದರು

ಹಜಾರ ಬಳಿಯೇ ಕೂತು

ಎನಗಾಗಿ ಪ್ರೇಮಯೋಗಿ ಆಗುವವಳಾಕೆ.


ಮುಂಜಾನೆ ಮುಗುಳ್ನಗುತ ಕಳುಹಿಸಿ

ಸಾಯಂಕಾಲ ಬರುವುದು ತಡವಾದರೆ

ಎನಗಾಗಿ ವಿಹ್ವಲವಾಗುವವಳಾಕೆ.


ಸಂಬಳ ಅಪೇಕ್ಷೆ ಕೊಂಚವಿಲ್ಲದೆ

ಸ್ನಿಗ್ಧ ಪ್ರೇಮವ ಮಾತ್ರ ನೀಡುವ

ನಿಸ್ವಾರ್ಥ ಪ್ರೇಮದರಸಿಯು ಆಕೆ.


ಎನ್ನ ಎದೆ ಅಂಗಳದೊಳು

ಅವಳದೇ ಹೆಜ್ಜೆಗುರುತಿರಲು

ಪ್ರೇಮ ಗೆಜ್ಜೆನಾದದ ಸೆಲೆ ಅವಳದಲ್ಲದೆ ಇನ್ಯಾರದಿರಲು ಸಾಧ್ಯವು!


ಅವಳೇ

ಬಾಳಶೋಭಿತೆ.

ಗೃಹಭೂಷಿತೆ‌.

                    ----ಚಿನ್ಮಯಿ

Sunday, May 1, 2022

Top 5 Worst things of Bengaluru:

1) RCB not winning IPL.

2) The Irritating Traffic.

3) Other State people not speaking KannaDa and telling "KannaDa" as "KannaD".

4) Our State people showing "Shoki" by speaking other languages even knowing "KannaDa".

5) Disgusting Hindi Imposition by Northies.

                     ----Chinmayi

Top 5 Best things of Bengaluru:

1) Existence of RCB and BFC

2) The Weather

3) Gully Cricket

4) Weekend Parties and Night Life

5) Variety of Mouth Watering Food

                ----Chinmayi

For the Age group between 20-25 years:

Stop chasing a Girl, instead chase your Goal.

                        ----Chinmayi

Saturday, April 30, 2022

ತ್ರಿಪದಿ- ೧

"ಮುಂದೆ ಸಾಗಲ? ಹಿಂದೆ ಸಾಗಲ? ಎತ್ತ ಸಾಗಲಿ ಚೆನ್ನಕೇಶವ!"

" 'ಎತ್ತ ಎತ್ತ' ಎಂಬ ಚಿಂತೆ ಬಿಡು ಸಮಚಿತ್ತ ಸಸಿಯ ನೆಡು

ದಿಟ್ಟ ಉತ್ತರ ಒಳಗಿಹುದೋ- ಚಿನ್ಮಯಿ"||

                ----ಚಿನ್ಮಯಿ

Saturday, April 2, 2022

ವರುಷದ ಕೊನೆಯ ಮಳೆ

ಮೋಡ ಬಿಕ್ಕಿಬಿಕ್ಕಿ ಅಳಲು-

ಜಗಕ್ಕೆ ಪರಿಚಯ ಹರುಷ.

ಪಂಚ ಭೂತಗಳ ಸಮ್ಮಿಲನ-

ಜನಿಸಿತು ಹೊಸ ವರುಷ.

ಬಂತೋ ವರುಷದ ಕೊನೆಯ ಮಳೆ..

ಬಾಳ ಸಾಗರವ ಸೇರಲಿ ಸಡಗರ ಹೊಳೆ.


ಹನಿಗಳ ತೋರಣ,

ಮಣ್ಣಿಗೆ ಹೂರಣ.

—ಇಬ್ಬರ ಸಂಗಮ,

ಯುಗದ ಉಗಮ.

ಬಂತೋ ವರುಷದ ಕೊನೆಯ ಮಳೆ..

ಮನವ ತೊಳೆದು ಅಳಿಸಲಿ ಕೊಳೆ.

         ----ಚಿನ್ಮಯಿ

Friday, February 11, 2022

ಬೆಂಗಳೂರು ಮಹಾನಗರ

ಬೆಂಗಳೂರು ಮಹಾನಗರ

—ನೂಕುನುಗ್ಗಲು ಜನ ಸಾಗರ

—'ಬಿಎಂಟಿಸಿ', 'ಮೆಟ್ರೋ' ಅನುದಿನ ಸಂಚಾರ.


ಬೆಂಗಳೂರ ಮೇಲ್ನೋಟ

—ದಿನನಿತ್ಯ 'ಟ್ರಾಫಿಕ್' ಜಂಜಾಟ

—'ಸೌಂಡ್ ಪೊಲ್ಯೂಷನ್', 'ವಾಟರ್ ಪೊಲ್ಯೂಷನ್', 'ಏರ್ ಪೊಲ್ಯೂಷನ್' ಗಳ ಪೀಕಲಾಟ.


      ----ಚಿನ್ಮಯಿ

Thursday, January 13, 2022

ನಮ್ಮನೆಯ ಮೊದಲ ಕಾರಿನ ಕಥೆ

ಎಲ್ಲರ ಮನೆಯ ಕಥೆಯೇ

ನಮ್ಮನೆದೂನು

ಕಾರು ಖರೀದಿಸಿ ಕಾರಿನ 

ಸವಾರಿಯ ತೃಪ್ತಿ

ಯೊಳು ಅತೀತ ಖುಷಿ 

ಪಡುವುದು

ಯಾರಿಗಿರಲ್ಲ ಸ್ವಾಮಿ ಆಸೆ ಹೇಳಿ!


ಎನಗೂ ಎನ್ನಣ್ಣನಿಗೂ ಅಷ್ಟಾಗಿ

ಓಡಿಸಲು ಬರದ ಕಾರಣ 

ಒಂದ್ 'ಸೆಕೆಂಡ್ ಹ್ಯಾಂಡ್ ಕಾರ್'

ಸಾಕು ಎಂದೇ ನಿರ್ಧರಿಸಿದ್ದೆವು

ಅದರ ಹುಡುಕಾಟದಲ್ಲಿಯೇ

ಅದೆಷ್ಟು ಕಡೆ ಅದೆಷ್ಟು ಶೋರೂಂ

ಹುಡುಕಿದೆವೋ ಲೆಕ್ಕವಿಲ್ಲಾ

ಈ ಪುಣ್ಯಾತ್ಮನಿಗೋ

'ಟಾಪ್ ಎಂಡ್' ಕಾರೇ ಬೇಕಿತ್ತು 

ಅದು ಸೆಕೆಂಡ್ಸ್ನಲ್ಲೇ

ಇದಕ್ಕಾಗಿಯೇ ಕೊಂಚ ಲೇಟ್ ಆಯ್ತು.


ಎಲ್ಲಾ ಕಡೆ ಹುಡುಕಿ ಹುಡುಕಿ ಸಾಕಾಗಿ

ಈಗೆ ಒಂದಿನ 

ನನ್ 'ಕುಚಿಕು'ವಿನ ಸಂಬಂಧಿಕರೊಬ್ಬರ

'ಪ್ರೀ-ಓನ್ಡ್ ಕಾರ್ ಶೋರೂಂ'ಗೆ ಹೋದೆವು—

ಅಲ್ಲಿ ಸಿಕ್ಕರು ಸಿಗಬಹುದೇನೋ ಎಂಬ

ಮಹದಾಶಯದಲ್ಲಿ

'ಓಲ್ಡ್ ಆದ್ರೂ ಲೇಟೆಷ್ಟ್' ('ಲೇಟ್ ಆದ್ರೂ ಲೇಟೆಷ್ಟ್') 

ಎಂಬಂತೆ

ದೇವರು ಅವನ ಕರೆಯ ಆಲಿಸಿ ಅಸ್ತು ಎಂ

ದಂತೆ ಸಿಕ್ತು ಕೊನೆಗೂ ಅವನಿಚ್ಛೆಯ ಕಾರು

ಕಾರೇನೋ ಬೊಂಬಾಟಾಗಿತ್ತು

ನಮ್ಮಿಬ್ರಿಗೂ, ಅಪ್ಪ-ಅಮ್ಮನಿಗೂ ಇಷ್ಟವಾಯಿತು

ಎಲ್ರಿಗೂ ಅದೇನೋ ನಿರ್ಲಿಪ್ತ ಭಾವ ಕೊನೆಗೂ.


ಹಾ ಹಾ ಅದೆಷ್ಟು ಚೆಂದ ಸ್ವಾಮಿ

'ಏರ್ಬ್ಯಾಗ್ ಗಳು, ಎಬಿಎಸ್, ಇನ್ಫೋಟೇನ್ಮೆಂಟ್, ರಿವರ್ಸ್ ಕ್ಯಾಮೆರ, ಮ್ಯಾಗ್ ವೀಲ್ ಗಳು, ಸ್ಪೋರ್ಟಿ ಲುಕ್, ಅದು ಇದು ಇತ್ಯಾದಿ'

—ಎಲ್ಲಾ ಸೌಕರ್ಯಗಳುಳ್ಳಂತಹ ಅದ್ಭುತ ಇಷ್ಟವಾದ ಕಾರು

'ಒಂದು ಲಕ್ಷ ಚಿಲ್ರೆ ಕಿ.ಮೀ.' ಓಡಿದ್ದರೂ

ಬಲು ಸ್ಮೂತಾಗಿತ್ತು ಕಾರು

ಅಷ್ಟಾಗಿ ಎಕ್ಸ್ಟ್ರಾ ಖರ್ಚು ಬೀಳಲಿಲ್ಲ

—ಅದರಿಂದ ಇನ್ನೂ ಕೊಂಚ ಖುಷಿಯೋ ಖುಷಿ.


ಏತನ್ಮಧ್ಯೆ ನಾವಿಬ್ರೂ ಪರಿಪೂರ್ಣವಾಗಿ ಕಲಿಯ

ಲೆಂದು ದಿನನಿತ್ಯ 'ರೌಂಡ್' ಹೊಡೆಯುವ ಮಜ ಒಂದ್ಕಡೆ ಆದ್ರೆ

ಇನ್ನೊಂದ್ಕಡೆ 

'ಕ್ಲಚ್ಚು, ಬ್ರೇಕು ಹಾಗು ಆಕ್ಸಿಲರೇಟರ್'

ಗಳು ಕಾಲುಗಳ ಸ್ಪರ್ಶಕ್ಕೆ ಸಿಲುಕಿ

'ಗೇರು ಹಾಗು ಸ್ಟೇರಿಂಗ್'

ಗಳು ಕೈಗಳನ್ನು ಸೋಕಿ

ಸುಖಮಯ ನೋವನ್ನು ಒಂದೇ ಸಮನೆ

ಅನುಭವಿಸಿದವು.


ಅವನೇನೋ ಪುಸ್ಸುಕನೆ

ಬಹು ಬೇಗ ಕಲಿತು ಬಿಟ್ಟ

ಎನಗೋ ಬರೋಬ್ಬರಿ

ಎರಡ್ಮೂರು ವಾರಗಳೇ ಬೇಕಾಯ್ತು

ಕಲಿಯುವ ಆತುರದಲ್ಲಿ ಎರಡ್ ಸಲ

ಡಿಕ್ಕಿ ಹೊಡೆದದ್ದು ಉಂಟು

ಕಾರ್ 'ಡೆಂಟ್' ಆದದ್ದು ಉಂಟು

ಅದೆಷ್ಟು ನೋವಾಯ್ತೋ ಏನೋ

ಪಾಪ ಕಾರಿಗೆ

ಎಷ್ಟೇ ಆದರೂ ಕಲಿಯುವಾಗ

ಇದೆಲ್ಲಾ ಮಾಮೂಲಿ ಬಿಡಿ

ಆದರೇ ಕಲಿತ ಮೇಲಂತೂ ಅವನು

ಪರ್ಫೆಕ್ಟ್ ಡ್ರೈವರ್ ಆದ

ನಾನು ಕೂಡ ಅವನಷ್ಟಿಲ್ಲ ಅಂದ್ರೂ ಓಡಿಸುವೆ—

ಕೂತವರಿಗೆ ಭಯ ಇರ್ಬಾರ್ದಷ್ಟೆ.


ಇದುವೆ ನೋಡಿ 'ನಮ್ಮನೆಯ ಮೊದಲ ಕಾರಿನ ಕಥೆ'.

(ಅಂದ್ಹಾಗೆ ಕಾರ್ ಯಾವ್ದು ಅಂತ ಹೇಳೇ ಇಲ್ಲ ಅಲ್ವಾ

—ಥೂ ಹೋಗಪ್ಪ ಈ ಅರ್ಧಂಬರ್ಧ ನೆನಪಿಂದ ಮರ್ತೆಬಿಟ್ಟಿದೆ

'ಮಾರುತಿ ಸುಜ಼ುಕಿ ಸ್ವಿಫ್ಟ್ ೨೦೧೩ ನೇ ಲಿಮಿಟೆಡ್ ಎಡಿಷನ್ ಪೆಟ್ರೋಲ್ ಮಾಡೆಲ್' ಯೇ ನಮ್ಮ ಕಾರು)


    ----ಚಿನ್ಮಯಿ