Tuesday, June 30, 2020

ಸೌರ ಗ್ರಹಣ


ಚಿತ್ರಕ್ಕೆ ಪದ್ಯ-೨೯

ಆದಿತ್ಯ-ಧರಿತ್ರಿಯರ ನಡುವೆ ಶಶಧರನು
ಬಂದು ಅರ್ಧ ಬೆಳಕನ್ನು ತಡೆಹಿಡಿದನು.
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ
ಸೌರ ಗ್ರಹಣವನ್ನು ಉಂಟಾಗಿಸಿದನು.

ಧರೆಗೆಂದಲೇ ಭಾಸ್ಕರ ಬೆಳಕನ್ನು ನೀಡಲು
ಸೋಮನು ಅಡ್ಡಿಯಾಗಿ ಕಸಿದನು ಬೆಳಕನ್ನು.
ಪೃಥ್ವಿಗೆ ಹಿಮಾಂಶುವಿನ ಕಡುಗಪ್ಪಿನ ನೆರಳು
ಆವರಿಸಿ ಕ್ಷೀಣಿಸಿತು ನೇಸರನ ಕಿರಣಗಳನ್ನು.

ಚಂದಿರನ ಈ ನಡೆಯಿಂದ ಭುವಿಯಲ್ಲಿ
ಮನುಜರಿಗೆಲ್ಲಾ ನಿಶ್ಚಿಂತೆಯ ವಾತಾವರಣ.
ಕೊನೆಗೆ ಗ್ರಹಣ ಕಳೆದು ಸಂತಸ ತುಂಬಿ
ಇಳೆಗೆ ಜಾರಿತು ಸೂರ್ಯನ ಹೊಂಗಿರಣ.
      ----ಚಿನ್ಮಯಿ

ನಮಗೆ ನಾವೇ ಹೀರೋ


ಚಿತ್ರಕ್ಕೆ ಪದ್ಯ-೨೮

ಪ್ರಥಮ ಮೆಟ್ಟಿಲು ಕಠಿಣವೆಂದು ಅಂಜಬೇಡ
ನೀ ತಿಳಿಯೋ ಎಲ್ಲದಕ್ಕೂ ಶುರುವು ಜೀರೋ.
ಸೋತೆನೆಂದು ಕುಗ್ಗಬೇಡ ಸತತ ಪ್ರಯತ್ನದಿಂದ
ಗೆಲುವು ಸಾಧ್ಯ ತಿಳಿಯೋ ನಮಗೆ ನಾವೇ ಹೀರೋ.

ಕೆಟ್ಟ ಯೋಚನೆಯ ದೂಡಿ ಒಳ್ಳೆಯ ಯೋಜನೆಯ
ಮಾಡಿ ಧೈರ್ಯದಿ ಮುಂದಿನ ಹೆಜ್ಜೆಯ ಕಡೆಗೆ ನೀ ಓಡೋ.
ಅಡೆತಡೆಗಳ ಸರಿಸಿ ಛಲದಿಂದ ಗುರಿಯನ್ನು ಬೆನ್ನಟ್ಟಿ
ಸಾಧನೆಯ ಕಿರೀಟ ಧರಿಸಿ ಜಗಕ್ಕೆ ಹೇಳು ನಮಗೆ ನಾವೇ ಹೀರೋ.
         ----ಚಿನ್ಮಯಿ

Sunday, June 28, 2020

ಕನಸು-ನನಸು


ಚಿತ್ರಕ್ಕೆ ಪದ್ಯ-೨೭

ನೂರಾರು ಕನಸುಗಳನ್ನು ಪ್ರತಿ ದಿನ
ಪ್ರತಿ ಕ್ಷಣ ನಾವೆಲ್ಲ ಕಾಣುವೆವು.
ಆದರೇ ಜೀವನಕ್ಕೆಂದು ಒಂದೆರಡು
ಕನಸುಗಳು ನಮಗೆ ಬೀಳುವವು.

ಆ ಒಂದೆರಡು ಕನಸಿನ ಭಾವದ ಭಾವನೆಯನ್ನು
ಸದಾ ಜೀವಂತವಾಗಿಸಬೇಕು.
ಕನಸುಗಳನ್ನು ನನಸು ಮಾಡಿ ಕಂಡ ಕನಸಿಗೆ
ಪುನರ್ಜನ್ಮ ನೀಡಿ ಜೀವಿಸಬೇಕು.
     ----ಚಿನ್ಮಯಿ

Sunday, June 21, 2020

ಅಕ್ಷಿಯೊಳಗಿನ ನೋಟ


ಚಿತ್ರಕ್ಕೆ ಪದ್ಯ-೨೬

ಮನದೊಳಗೆ ನೆಲೆಸಿರುವ ಸೊಗಸಾದ ಆಸೆಗಳನ್ನು ಅಕ್ಷಿಗಳಿಂದು
ಜೀವಿಸಿ ತನ್ನೊಳಗೆ ಜೀವಂತವಾಗಿಸಿದೆ.
ರೆಪ್ಪೆಗಳೊಳಗೆ ನನ್ನ ನಾನೇ ನೋಡುವಂತಹ ಅವಿಸ್ಮರಣೀಯ
ದೃಶ್ಯ ಕಾಣಲು ಮನವಿಂದು ಕುಣಿದಾಡಿದೆ.
           ----ಚಿನ್ಮಯಿ

ರಂಗು ರಂಗಿನ ಬದುಕು


ಚಿತ್ರಕ್ಕೆ ಪದ್ಯ-೨೫

ಜಗವೆಲ್ಲಾ ರಂಗಿನಿಂದಲೇ
ರಂಗಿಲ್ಲದೆ ಏನಿಲ್ಲ.
ಬಾಳೆಲ್ಲಾ ರಂಗೋಲಿಯಂತಿರಲು
ನಿಶ್ಚಿಂತೆ ಸಾಕಲ್ಲ!

ಎಲ್ಲೆಲ್ಲಿಯೂ ರಂಗಿದೆಯೆಂದು
ಅಕ್ಷಿಗಳು ಹೇಳಿತು.
ರಂಗು ರಂಗಿನ ಬದುಕಿದೆಂದು
ಹಾಡೊಂದ ಹಾಡಿತು.
          ----ಚಿನ್ಮಯಿ

Friday, June 19, 2020

ಕಾನನ


ಚಿತ್ರಕ್ಕೆ ಪದ್ಯ-೨೪

ಪಟ್ಟಣದಲ್ಲಿ ಸದಾ ದುಡಿಯುತ್ತಿರಲು
ಜೀವನವೆಂದರೆ ಇಷ್ಟೇನಾ ಎಂದೆನಿಸಿದೆ!
ಅದೇ ಕೆಲಸ, ಅದೇ ಜೀವನ ಸಾಕಾಗಿ
ನವೀನತೆಗಾಗಿ ಮನಃ ಬಯಸಿದೆ.

ಬರಹದ ಜೊತೆ ಪ್ರವಾಸ ಛಾಯಾಗ್ರಹಣವು
ನನ್ನ ಎರಡು ಇಷ್ಟದ ಕೆಲಸಗಳಾಗಿವೆ.
ಇವೆರಡರಲ್ಲಿಯೇ ಪೂರ್ಣಪ್ರಮಾಣವಾಗಿ
ತೊಡಗಿಕೊಳ್ಳಲೆಂದೇ ಸಂಚಾರಿಯಾಗಿರುವೆ.

ನನಗೆ ಸದಾ ಸ್ಪೂರ್ತಿಯಾಗಿರುವುದೇ
ಪ್ರಕೃತಿಯ ಹೃದಯವಾದ ಹಸಿರ ಕಾನನ.
ಅಲ್ಲಿಗೆ ಹೋಗಲೇ ಬೇಕು ಇಲ್ಲದಿದ್ದರೆ
ಶಾಚಿತಿಯಿಂದಿರುವುದಿಲ್ಲ ನನ್ನಯ ತನು ಮನ.

         ----ಚಿನ್ಮಯಿ 

Sunday, June 14, 2020

ಇನ್ನೂ ಬಾಕಿ ಇದೆ

ನಮ್ಮಿಬ್ಬರ ಅಕ್ಷಿಗಳ ಮಿಲನದಿಂದ ಪ್ರಥಮ
ಪ್ರೇಮವೀಗ ನನ್ನಲ್ಲಿ ಉದ್ಭವವಾಗಿದೆ.
ನಸುನಗುತ ಗುಳಿಕೆನ್ನೆಯಿಂದ ನೀನೊಮ್ಮೆ
ಸಮ್ಮತಿಸುವುದು ಇನ್ನೂ ಬಾಕಿ ಇದೆ.

ನಿನ್ನ ಅಧರಗಳ ಚಲನೆಯಿಂದ ಉದುರುವುದು
ಮುತ್ತುಗಳೆಂದು ನನಗೆ ತಿಳಿದಿದೆ.
ಮಧುರ ಧ್ವನಿಯ ಕೇಳಿ ನನ್ನ ಕರ್ಣಗಳನ್ನು
ಇಂಪಾಗಿಸುವುದು ಇನ್ನೂ ಬಾಕಿ ಇದೆ.

ಉದ್ದನೆಯ ಜಡೆಯನ್ನು ನೀನು ಸರಿಸುವ
ದೃಶ್ಯವು ಮನಕ್ಕೆ ಸಂತಸ ನೀಡಿದೆ.
ಕೇಶಕ್ಕೊಂದು ರೋಜಾ ಹೂವನ್ನು ನಾನು
ಮುಡಿಸುವುದು ಇನ್ನೂ ಬಾಕಿ ಇದೆ.

ನಡುವ ಬಳುಕಿಸುತಲಿ ವೈಯಾರದಿ ನಡೆಯುವ
ನಿನ್ನ ಶೈಲಿಯು ವಿಭಿನ್ನವಾಗಿದೆ.
ಅದ ನೋಡುತಲೇ ಸೋತಿರಲು ನಾನು ಕೊರಳಿಗೆ
ತಾಳಿ ಕಟ್ಟುವುದು ಇನ್ನೂ ಬಾಕಿ ಇದೆ.

ನಿನ್ನ ಪಾದಗಳ ಸ್ಪರ್ಶದಿಂದ ನನ್ನೆದೆಯು
ಹರ್ಷದಿ ಕುಣಿ ಕುಣಿದಾಡಿದೆ.
ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ
ತೊಡಿಸುವುದು ಇನ್ನೂ ಬಾಕಿ ಇದೆ.
         ----ಚಿನ್ಮಯಿ

Saturday, June 13, 2020

ತ್ರಿಮೂರ್ತಿಗಳಿಂದ ಬದುಕಿನ ಪಾಠ


ಚಿತ್ರಕ್ಕೆ ಪದ್ಯ-೨೩

ಬ್ರಹ್ಮ, ವಿಷ್ಣು, ಮಹೇಶ್ವರರು ಬ್ರಹ್ಮಾಂಡದ
ಸೃಷ್ಟಿ, ಸ್ಥಿತಿ, ಲಯದ ಸೂತ್ರದಾರರು.
"ಅಹಂ" ಇಲ್ಲದೆ, "ನಾನೇ" ಎನ್ನದೆ, ಒಬ್ಬರಿಗೊಬ್ಬರು
ತಮ್ಮ ತಮ್ಮ ಕರ್ತವ್ಯವ ಮಾಡುವರು.

ಒಮ್ಮೆ ಸರಸಿಜಭವನು, ಹರಿಹರರಿಗೆ ನಮಿಸಿದರೆ
ಇನ್ನೊಮ್ಮೆ ನಾರಾಯಣನು, ಬ್ರಹ್ಮ ಈಶರಿಗೆ ನಮಿಸುವನು.
ಇವರಿಬ್ಬರ ಸರದಿ ಮುಗಿದ ಮೇಲೆ ಕೊನೆಯದಾಗಿ
ದೇವರಿಗೆಲ್ಲಾ ದೇವನಾದ ಮಹದೇವನು, ವಿರಿಂಚಿ ಅಚ್ಯುತರಿಗೆ ನಮಿಸುವನು.

ತ್ರಿಮೂರ್ತಿಗಳೇ ಪರಸ್ಪರ ಸೌಹಾರ್ದ ಮೆರೆದಿರುವಾಗ
ಇನ್ನೂ ನರರಾದ ನಮಗೇತಕೆ ಬೇಕು ಅಸೂಯೆ ದ್ವೇಷವೆಲ್ಲಾ!
ಪ್ರೀತಿಯ ಹಂಚಿ ಬಾಗುವುದೇ ಶ್ರೇಷ್ಠ, ಇನ್ನಾದರೂ
ತಗ್ಗಿ ಬಗ್ಗಿ ಬಾಳುವುದನ್ನು ಕಲಿಯಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ.
        ----ಚಿನ್ಮಯಿ

ಜೀವನದ ಅಂತಿಮ ಧ್ಯೇಯ

ಜನನ-ಮರಣದ ನಡುವಿನ ಬದುಕಲ್ಲಿ,
ಸ್ವಾರ್ಥ ತೊರೆದು ಸೌಹಾರ್ದ ಮೆರೆದು ಬಾಳಬೇಕು.
ಕೋಪವ ಸಾಯಿಸಿ ತಾಳ್ಮೆಯ ಉದಯಿಸಿ ಬದುಕಬೇಕು.
ಆದಷ್ಟು ಸತ್ಯ ಧರ್ಮದ ಹಾದಿಯಲ್ಲಿಯೇ ನಡೆಯಬೇಕು.
ಪರರ ಸಂತೋಷದಲ್ಲಿ ನಮ್ಮ ಸಂತೋಷ ನೋಡಬೇಕು.
ಕಷ್ಟ ಎಂದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು.
ಅಹಂಕಾರ ತೊರೆದು ಹೃದಯದಿಂದ ಎಲ್ಲರನ್ನೂ ಪ್ರೇಮಿಸಬೇಕು.
ಇರುವಷ್ಟೂ ದಿನ ಒಳ್ಳೆಯತನದಿಂದ ಜೀವನ ಸಾಗಿಸಬೇಕು.

ಕೊನೆಯದಾಗಿ, ಜೀವನದ ಅಂತಿಮ ಧ್ಯೇಯವಾದ ಮೋಕ್ಷದ ದಾರಿಯನ್ನು ಹುಡುಕಬೇಕು.
ಆತ್ಮವನ್ನು ಪರಮಾತ್ಮನಲ್ಲಿ ಸೇರಿಸಿ ಅಂತಿಮವೇ ಇಲ್ಲದ ಈ ಬದುಕಿನ ಚಕ್ರದಿಂದ ಮುಕ್ತಿಯನ್ನು ಪಡಿಯಬೇಕು.
      ----ಚಿನ್ಮಯಿ

Friday, June 12, 2020

ಕಡಲ ತೀರದ ವರ್ಣನೆ


ಚಿತ್ರಕ್ಕೆ ಪದ್ಯ-೨೨

ಪ್ರಶಾಂತ ವಾತಾವರಣದಲ್ಲಿ
ತಂಗಾಳಿಯು ಬೀಸುತ್ತಿದೆ.
ಸುತ್ತಲೂ ನಿಶಬ್ದವಾಗಿರಲು
ಕಡಲ ಅಲೆಗಳು ಸದ್ದು ಮಾಡುತ್ತಿದೆ.

ನೀಲಿ ಬಣ್ಣದ ತಿಳಿ ನೀರಿನಲ್ಲಿ
ಸಣ್ಣ ಮೀನುಗಳು ಕಾಣುತ್ತಿದೆ.
ಪ್ರೇಮದಿ ಅಲೆಗಳು ಕಡಲ ತೀರದ
ಕಲ್ಲುಗಳನ್ನು ಹಾಯಾಗಿ ತಾಕುತ್ತಿದೆ.

ಈ ಅವಿಸ್ಮರಣೀಯ ಸಮಯದಲ್ಲಿ
ಏಕಾಂತವು ಹಿತವೆನಿಸುತ್ತಿದೆ.
ಇಲ್ಲಿಗೆ ಕಡಲ ತೀರದ ಸೊಗಸಾದ
ವರ್ಣನೆಯು ಸಮಾಪ್ತಿಯಾಗಿದೆ.
          ----ಚಿನ್ಮಯಿ

ಬಾಲ ಕಾರ್ಮಿಕ ಪದ್ಧತಿಯು ಭೂತದಂತೆ


ಚಿತ್ರಕ್ಕೆ ಪದ್ಯ-೨೧

ಖುಷಿಯಿಂದ ನಲಿದು, ಆಟವಾಡುತ
ಬೆಳೆಯಬೇಕಾದ ಮಕ್ಕಳನ್ನು ದುಡಿಯಲು ಕಳುಹಿಸುವುದು ಸರಿಯೇನು?
ಓದಲು ಇಚ್ಛೆ ಇರುವ, ಏನನ್ನೂ ಅರಿಯದ
ಪುಟಾಣಿಗಳಿಂದ ದುಡಿಸಿಕೊಳ್ಳಲು ಮನಸ್ಸಾದರೂ ಹೇಗೆ ಬರುವುದೆಂದು ನಾ ಅರಿಯೆನು!

ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಿ ಮಕ್ಕಳ
ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ.
ಇದೆಲ್ಲವನ್ನು ತಡೆಯಲೆಂದೇ "ಒಕ್ಕೂಟ ರಾಷ್ಟ್ರಗಳ
ಅಂಗವಾಗಿ" "ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು" ಸ್ಥಾಪನೆಯಾಗಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಈ ದಿನವನ್ನು
"ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನವೆಂದು" ಕರೆಯುತ್ತದೆ.
ಇದು ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಿದರೂ
ಮುಖ್ಯವಾಗಿ "ಬಾಲ ಕಾರ್ಮಿಕ ಪದ್ಧತಿಯ" ವಿರುದ್ಧವಾಗಿದೆ.
         ----ಚಿನ್ಮಯಿ

ನನ್ನ ಪ್ರೀತಿಯ ರಾಮ


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೨೦

ಇವನ ಅಮ್ಮ ಇವನಿಗೆ ಜನುಮ ನೀಡಿ ಸತ್ತಳು.
ಮರಿಯಾಗಿದ್ದಾಗ ಇವನು ನಮ್ಮ ಬಳಿ ಬಂದನು.

ನಮ್ಮಮ್ಮ ಇವನಿಗೆ ''ರಾಮ'' ಎಂದು ಹೆಸರಿಟ್ಟರು.
ಬಲು ತುಂಟನಿವನು, ಆಡುತ ನಲಿಯುತ ಬೆಳೆದನು.

ನಮ್ಮಪ್ಪ ''ಪಾರ್ಲೆ ಜಿ'' ಬಿಸ್ಕತ್ತನ್ನು ದಿನ ನಿತ್ಯ ಉಣಿಸುವರು.
ಆಗಾಗ ಮಾಂಸವನ್ನು ಸಹ ತಿನ್ನುತ್ತ ದೇಹದ ಆರೋಗ್ಯ ಕಾಪಾಡಿಕೊಳ್ಳುವನು.

ಬಹಳ ಚೂಟಿತನದಿಂದ ತರಲೆ ಕೆಲಸಗಳನ್ನು ಮಾಡುತ್ತಲೇ ಇರುವನು.
ಇವನೆಂದರೆ ಎನಗೆ ಬಲು ಇಷ್ಟ, ಅದಕ್ಕೆ ಕೆನ್ನೆಯನ್ನು ಎಳೆದು ಆಟವಾಡುವೆನು.

ತುಂಬಾ ಕಿಲಾಡಿತನದಿಂದ ಕುಪಿತಗೊಂಡಂತೆ ನಟಿಸಿ ಕರೆದಾಗ ಬರುವುದಿಲ್ಲ.
ನಾವೆಂದರೆ ಇವನಿಗೆ ಅಚ್ಚುಮೆಚ್ಚು, ನಮ್ಮನ್ನು ಎಂದಿಗೂ ಬಿಟ್ಟೋಗೋದಿಲ್ಲ.

ನನ್ನ ಪ್ರೀತಿಯ ರಾಮನಿವನು.
ಎನಗೆ ಬಲು ಇಷ್ಟನಿವನು.
          ----ಚಿನ್ಮಯಿ

Thursday, June 11, 2020

ವಾಯುಪುತ್ರರು


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೧೯

ರಾಮಾಯಣದ ಪ್ರಮುಖ ಸ್ಥೂಲದಾರನು, ಶಿವನ ಅಂಶವುಳ್ಳ
ವಾಯು ಪುತ್ರನು ನಮ್ಮ ಹನುಮಂತನು.
ಅಂಜನ ಸುತನು, ರಾಮನ ಬಂಟನು, ನಿಜಗುಣ ಸೋಮನಾದ
ವೀರಾದಿ ಧೀರನು ನಮ್ಮ ಆಂಜನೇಯನು.

ಮಹಾಭಾರತದ ಪ್ರಮುಖ ಸ್ಥೂಲದಾರನು, ವಜ್ರ ದೇಹ ಸಹನಾಭೂತಿಯುಳ್ಳ
ವಾಯು ಪುತ್ರನು ನಮ್ಮ ವೃಕೋಧರನು.
ಕುಂತಿಯ ಸುತನು, ಹನುಮನ ಅನುಜನು, ಗದಾಯುದ್ಧ ಪ್ರವೀಣನಾದ
ನೂರಾನೆಯ ಬಲದವನು ನಮ್ಮ ಭೀಮಸೇನನು.

ಹೀಗೊಂದು ದಿನವು ಮಹಾಭಾರತದ ಕಾಲದಲ್ಲಿ ಬಲ ಭೀಮನಿಗೆ ಅವನ
ಭುಜ ಬಲದ ಮೇಲೆ ಗರ್ವ ಉಂಟಾಗುವುದು.
ಅಗ್ರಜನಾದ ಹನುಮಂತನು ತನ್ನ ಬಾಲವನ್ನು ಮೇಲಕ್ಕೆತ್ತೆಂದಾಗ
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.

ನಂತರ ವಾಯುಪುತ್ರರಿಬ್ಬರೂ ತಬ್ಬಿಕೊಳ್ಳುವರು.
          ----ಚಿನ್ಮಯಿ

True Education

True education is not found in the books. It's inside everyone. But the thing is, we need to explore it as soon as possible and live accordingly.
        ----chinmayi

ಬಾಹ್ಯಾಕಾಶದೆಡೆಗೆ ಎನ್ನ ನಡಿಗೆ


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೧೮

ಸಣ್ಣ ಪ್ರಾಯದಿಂದಲು ಆಕಾಶವನ್ನೇ
ದಿಟ್ಟಿಸಿ ನೋಡುತ್ತ ಬೆಳೆದೆ.
ಆಕಾಶದಾಚೆಗೆ ಏನಿರಬಹುದೆಂದು
ಗಾಢವಾಗಿ ಯೋಚಿಸುತ್ತಿದೆ!

ಬೆಳೆಯುತ್ತ ಶಾಲೆಯಲ್ಲಿ ಕೆಲವು ಬಾಹ್ಯಾಕಾಶ
ವಿಚಾರಗಳನ್ನು ತಿಳಿದುಕೊಂಡೆ.
ಸೂರ್ಯ, ಚಂದ್ರ, ಗ್ರಹಗಳು, ತಾರೆಗಳನ್ನು
ತಲುಪಬೇಕೆಂದು ಹಂಬಲಿಸುತ್ತಿದೆ.

ಕನಸನ್ನು ಪೂರ್ಣಗೊಳಿಸಲು ಕಾಲೇಜಿನಲ್ಲಿ
ಖಗೋಳ ವಿಜ್ಞಾನವನ್ನು ಓದಿದೆ‌.
ಉತ್ತೀರ್ಣನಾಗಿ ಕೆಲಸವನ್ನೂ ಗಿಟ್ಟಿಸಿ ಬಾಹ್ಯಾಕಾಶದ
ಗ್ರಹದ ಮೇಲೆ ಸಂತಸದಿ ಓಡಿದೆ.
           ----ಚಿನ್ಮಯಿ

Tuesday, June 9, 2020

ನನ್ನ ನೆಚ್ಚಿನ ಬೈಕು


ಚಿತ್ರಕ್ಕೆ ಪದ್ಯ-೧೭

ನಿನ್ನ ಮೇಲೆ ಕುಂತು
ಸವಾರಿಸುವ ಸವಾರ ನಾನು.
ನನ್ನ ಎಲ್ಲೆಡೆಯೂ ಕರೆದೊಯ್ಯುವ
ಪ್ರೀತಿಯ ಬೈಕು ನೀನು.

ನೀನಿಲ್ಲದೆ ಎಲ್ಲಿಗೂ ಹೋಗಲು
ನನ್ನ ಮನಸ್ಸು ಒಪ್ಪದು.
ನಿನ್ನೊಂದಿಗೆ ಜಗವ ಸುತ್ತಲು
ಆಲಸ್ಯವೇ ದೂರ ಓಡುವುದು.

ನನ್ನ ಜೊತೆ ಸದಾಕಾಲವೂ
ಇರುವ ನೆಚ್ಚಿನ ಗೆಳೆಯ ನೀನು.
ಬಾ ಒಮ್ಮೆ ಸಂಚರಿಸೋಣ
ನಿಸರ್ಗದೆಡೆಗೆ ನಾನು ನೀನು.
         ----ಚಿನ್ಮಯಿ

Monday, June 8, 2020

೧೦ ಪದಗಳಲ್ಲಿ ಬದುಕಿನ ಅರ್ಥ


"ಬದುಕು- ಅದೊಂದು ಸುಂದರ ಅನುಭವ. ಬದುಕಿನ ಅನುಭವ ಅರಿತವನೇ ಬಲ್ಲ ಅದರ ರಮ್ಯತೆಯ."
        ----ಚಿನ್ಮಯಿ

ಯಾವುದೂ ಶಾಶ್ವತವಲ್ಲ

ನೀ ಪಡೆದ ಜನುಮ ಶಾಶ್ವತವಲ್ಲ.
ನೀ ಹೆದರೋ ಮರಣ ಶಾಶ್ವತವಲ್ಲ.
ಇವೆರಡರ ನಡುವಿರೋ ಬದುಕಿನ ಅನುಭವವೇ ಶಾಶ್ವತ.

ನಿನ್ನ ಸುಖ-ದುಃಖಗಳು ಶಾಶ್ವತವಲ್ಲ.
ನಿನ್ನ ನೋವು-ನಲಿವು ಶಾಶ್ವತವಲ್ಲ.
ಇದೆಲ್ಲದರಿಂದ ಕಲಿತ ಜೀವನದ ಪಾಠಗಳೇ ಶಾಶ್ವತ.

ನೀ ದುಡಿದ ಹಣವು ಶಾಶ್ವತವಲ್ಲ.
ನೀ ಸುಖಿಸುವ ಅಧಿಕಾರ ಶಾಶ್ವತವಲ್ಲ.
ಇವೆರಡರ ಹಿಂದಿರೋ ದಾನದ ಗುಣಗಳೇ ಶಾಶ್ವತ.

ನಿನ್ನ ಬಂಧು-ಬಳಗ ಶಾಶ್ವತವಲ್ಲ.
ನಿನ್ನ ಸ್ನೇಹ-ಪ್ರೀತಿ ಶಾಶ್ವತವಲ್ಲ.
ಇದೆಲ್ಲದರಿಂದ ದೊರೆತ ಮಧುರ ಕ್ಷಣಗಳೇ ಶಾಶ್ವತ.

ನೀ ಮಾಡುವ ಚಿಂತೆ ಶಾಶ್ವತವಲ್ಲ.
ನೀ ನಡುಗುವ ಭಯ ಶಾಶ್ವತವಲ್ಲ.
ಇವೆರಡರ ಒಳಗಿರೋ ಧೈರ್ಯದ ಮೂಲವೇ ಶಾಶ್ವತ.

ನಿನ್ನ ದೇಹ-ಪ್ರಾಣ ಶಾಶ್ವತವಲ್ಲ.
ನಿನ್ನ ರೂಪ-ಸೌಂದರ್ಯ ಶಾಶ್ವತವಲ್ಲ.
ಇದೆಲ್ಲದರಿಂದ ಅರಿತ ಆತ್ಮದ ಪರಿಶುದ್ಧತೆಯೇ ಶಾಶ್ವತ.

ಇಲ್ಲಿ ಯಾವುದೂ ಶಾಶ್ವತವಲ್ಲ. ಆದರೆ,
ನೀ ಮಾಡಿದ ಒಳ್ಳೆಯ ಕಾರ್ಯಗಳು ಶಾಶ್ವತವಾಗುತ್ತದೆ.
ಅದುವೆ ನಿನ್ನನ್ನು ಸತ್ತ ಮೇಲೂ ಶಾಶ್ವತವಾಗಿ ಉಳಿಸುತ್ತದೆ.
             ----ಚಿನ್ಮಯಿ

Sunday, June 7, 2020

ಹಿಂತಿರುಗದ ಸಮಯ

ನೀ ನನ್ನ ತೊರೆದು ಮರೆತರು
ನಾ ನಿನ್ನ ತೊರೆದು ಮರೆಯಲು ಆಗದು.
ನಿನ್ನ ನೆನಪಲ್ಲೇ ನಾ ಬಾಳಿದರೂ
ಮುಗಿದೋದ ಸಮಯ ಮರಳಿ ಹಿಂತಿರುಗದು.

ನಾನು ನೀನು ಕಳೆದಂತ
ಮಧುರ ಕ್ಷಣಗಳು ನೆನಪಾದವು ಇಂದು.
ಎಷ್ಟೇ ನೆನಸಿಕೊಂಡರೂ
ಮುಗಿದೋದ ಸಮಯ ಮರಳಿ ಹಿಂತಿರುಗದು.

ನಾನಿಲ್ಲಿ ಕಾದಿಹೆನು ನಿನಗಾಗಿ
ಮುಗಿದೋದ ಸಮಯ ಮರಳಿ ಹಿಂತಿರುಗದಿದ್ದರು.
ಬಳಿಬಂದು ಸೇರು ನನ್ನೊಮ್ಮೆ
ಇನ್ನುಳಿದ ಸಮಯ ಜೊತೆಯಾಗಿ ಬದುಕಲು.
         ----ಚಿನ್ಮಯಿ

ಬಾನಿಂದ ವರ್ಷ ಧರೆಗಿಳಿದಾಗ

ಬಾನಿಂದ ವರ್ಷ ಧರೆಗಿಳಿದಾಗ
ತಂಪಾಯಿತು ವಾತಾವರಣ.
ಏನನ್ನೋ ಯೋಚಿಸುತ್ತಿದ್ದ ನನ್ನನ್ನು
ಮೈಮರೆಸಿತು ಸಂಪೂರ್ಣ.

ಬಾನಿಂದ ವರ್ಷ ಧರೆಗಿಳಿದಾಗ
ಹಸಿರಸಿರು ಎಲ್ಲೆಲ್ಲೂ.
ಖುಷಿಯಿಂದ ನೆನೆದೆನು ನಾನೀಗ
ನೋಡುತ್ತ ಕರಿ ಮುಗಿಲು.
          ----ಚಿನ್ಮಯಿ

ಬಯಸಿದ್ದೆಲ್ಲಾ ಸಿಗುವಂತಿದ್ದರೆ

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಬಯಕೆಗೆ ಬೆಲೆ ಇರದು.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ವೈಫಲ್ಯಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ನೋವಿಗೆ ನೆಲೆ ಇರದು.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಮೌನಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಕಣ್ಣೀರಿಗೆ ಸ್ಥಾನ ಇರದು‌‌.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಪರಾಜಯಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಬದುಕು ಪರಿಪೂರ್ಣವಾಗಲು ಅಸಾಧ್ಯವದು.
ಬಯಸಿದ್ದೆಲ್ಲಾ ಸಿಗದಂತಿದ್ದರೇನೆ,
ಬದುಕಿನ ನೈಜತೆಯ ಅರಿವಾಗುವುದು.
          ----ಚಿನ್ಮಯಿ

Thursday, June 4, 2020

ವರುಷಕ್ಕೊಮ್ಮೆಯಾದರೂ


ಚಿತ್ರಕ್ಕೆ ಪದ್ಯ-೧೬

ವರುಷಕ್ಕೊಮ್ಮೆಯಾದರೂ
ನಾ ಮಾಡುವೆ ಒಬ್ಬಂಟಿ ಯಾನ.
ಮನಃ ಶಾಂತಿ ಪಡೆಯಲೆಂದು
ಸೇರುವೆ ಸ್ವರ್ಗವೆಂಬ ನಿಸರ್ಗ ತಾಣ.

ವರುಷಕ್ಕೊಮ್ಮೆಯಾದರೂ
ಪ್ರಕೃತಿಯ ಮಡಿಲ ಸೇರುವೆನು.
ಶಾಚಿತಿಗೋಸ್ಕರ ಅಲೆದಾಡುವ
ಸಂಚಾರಿ ನಾನಾಗುವೆನು.
           ----ಚಿನ್ಮಯಿ

Wednesday, June 3, 2020

ಅಧರ್ಮದಿಂದಲೇ ವಿನಾಶ

ಅಧರ್ಮದ ಪಾಲನೆ
ವಿನಾಶಕ್ಕೆ ಮುನ್ಸೂಚನೆ.
      ----ಚಿನ್ಮಯಿ

Quote for a meme-1


ಚಿತ್ರಕ್ಕೆ ಪದ್ಯ/ಉಲ್ಲೇಖ-೧೫
When I hear someone say,
"Lockdown is over, Hutto Bhai."
My reaction will be like above picture.
      ----chinmayi

No use of being intelligent!

There's no meaning of having high level outer knowledge if there is a lacking commonsense and a lack of inner knowledge.
        ----chinmayi

ಭೂತಾಯಿಯ ಮಡಿಲು

ಮಳೆರಾಯನ ಸಾನಿಧ್ಯವಿಲ್ಲದೆ
ಭೂತಾಯಿಯ ಮಡಿಲಾಯಿತು ಬರಡು.
ಪಯಿರು ಬೆಳೆಯಲು ನೀರು ಸಾಲದೆ
ಕಾಣಿಯಾಲನ ಬದುಕಾಯಿತು ಕುರುಡು.

ತಿನ್ನಲು ಅನ್ನವಿಲ್ಲದೆ ಶ್ರೀಸಾಮಾನ್ಯರ
ಜೀವನವಾಯಿತು ಅದೋಗತಿ.
ಕುಡಿಯಲು ಸಹ ನೀರು ಸಿಗದೆ ಬದುಕಿನ್ನು
ಪರದಾಟದ-ನರಳಾಟದ ಫಜೀತಿ.

ಪ್ರಕೃತಿಗೆ ದ್ರೋಹ ಬಗೆದರೆ ಇದೆ ಗತಿ
ಎಂದು ಅರಿಯಬೇಕು ಇನ್ನಾದರು.
ಅರಿಯದ್ದಿದ್ದರೆ ಪ್ರಕೃತಿಯ ಭಾರಿ
ವಿಕೋಪಕ್ಕೆ ಬಲಿಯಾಗಬೇಕು ನಾವೆಲ್ಲರು.

ಓ ನಿಸರ್ಗವೇ ಮುನಿಸು ತೊರೆದು ಮನ್ನಿಸು
ಮೂರ್ಖ ಜನರ ಕ್ರೌರ್ಯ ಕೃತ್ಯಗಳನ್ನು.
ದಯಮಾಡಿ ಮಳೆರಾಯನ ದಯಪಾಲಿಸಿ
ಭರ್ತಿಮಾಡು ಭೂತಾಯಿಯ ಮಡಿಲನ್ನು.
       ----ಚಿನ್ಮಯಿ

"ಬದುಕು"- ಅದೊಂದು ಸುಂದರ ಅನುಭವ.

ಜನಿಸಲು ಈ ಭುವಿಯಲ್ಲಿ
ಪಾಪ ಪುಣ್ಯದ ಲೆಕ್ಕಾಚಾರವೆಷ್ಟೋ!
ಜನನದ ನಂತರ ಬದುಕಲ್ಲಿ
ಪಾಪ ಪುಣ್ಯವ ಮಾಡುವವರೆಷ್ಟೋ!

ಇದೆಲ್ಲದರ ನಡುವೆ ಬದುಕನ್ನ
ಹಾಗೋ ಹೀಗೋ ಸಾಗಿಸುವರು.
ಕೊರಗುತ ನರಳುತ ಬದುಕಿನ
ಮೂಲವನ್ನೇ ಮರೆತಿರುವರು.

ಮರಣ ನಿಶ್ಚಿತವೆಂದರು ನಿರ್ಭಯದಿ
ಜೀವಿಸಿ ಸಾಧಿಸಬೇಕು ಅಲ್ಲವೇ?
ಬದುಕೊಂದು ಸುಂದರ ಅನುಭವವೆಂದು
ಅರಿತು ಬಾಳಿದರೆ ಒಳಿತಲ್ಲವೇ?

ಬದುಕಿನ ಅನುಭವ ಅರಿತವನೇ
ಬಲ್ಲ ಅದರ ರಮ್ಯತೆಯ.
ಅರಿಯದವರು ದೂಷಿಸಲಷ್ಟೇ
ಸಾಧ್ಯ ಬದುಕಿನ ವ್ಯಥೆಯ.
       ----ಚಿನ್ಮಯಿ

Tuesday, June 2, 2020

ಹಸಿವು ಕಲಿಸಿದ ಪಾಠ

ಅಂದೊಂದು ಕಾಲದಲ್ಲಿ ಝಣ ಝಣ
ಹಣದ ಮದವೇರಿ ಅಜ್ಞಾನಿಯಾಗಿದ್ದೆ.
ರೈತನ ಕಷ್ಟ ಹಾಗು ಅನ್ನದ ಮಹಿಮೆ
ತಿಳಿಯದೆ ಅಹಂಕಾರದಿ ಮೆರೆಯುತ್ತಿದ್ದೆ.

ಇಂದೊಂದು ಕಾಲ ಬಂತು ಒಂಚೂರು
ಹಣವೇ ಇಲ್ಲದಂತೆ ಬದುಕಲು.
ತಿನ್ನಲು ಏನೂ ಸಿಗದೆ ಪರದಾಡುತ್ತಿರುವೆನು
ನೆನಸಿಕೊಂಡು ಮಾಡಿದ ತಪ್ಪುಗಳು.

ಜೇಬಿನಲ್ಲಿ ಬಿಡಿಗಾಸು ಇಲ್ಲದಂತಾಯಿತೀಗ
ಕೊಂಡು ತಿನ್ನಲು ಅನ್ನವನ್ನು.
ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿಯಾಯಿತೀಗ
ಉಳಿಸಿಕೊಳ್ಳಲು ಪ್ರಾಣವ‌ನ್ನು.

ಖಾಲಿ ಜೇಬು ಹಾಗು ಹಸಿದ ಹೊಟ್ಟೆ
ಕಲಿಸಿದವು ಜೀವನದ ಪಾಠವ.
ಅಜ್ಞಾನವ ಅಳಿಸಿ ಜ್ಞಾನವ ಗಳಿಸಿ
ಅರಿತೆನು ಅನ್ನದ ಋಣವ.

"ಅನ್ನಂ ಪರಬ್ರಹ್ಮ ಸ್ವರೂಪಂ"
             ----ಚಿನ್ಮಯಿ

Monday, June 1, 2020

ಬರಿದಾಗಿದೆ ಈ ಬಾಳು!


ಚಿತ್ರಕ್ಕೆ ಪದ್ಯ-೧೪


ಬರಿದಾಗಿದೆ ಈ ಬಾಳು
ನೀನಿಲ್ಲದೆ ಪ್ರೇಯಸಿ.
ಒಡೆದ ಹೃದಯವ ಜೋಡಿಸು
ನಿನ್ನ ಹೃದಯವ ಸೇರಿಸಿ.

ಚೂರಾಗಿದೆ ಈ ಬಾಳು
ಗಾಡಿಯ ಗಾಜು ಒಡೆದಂತೆ.
ಭದ್ರವಾದ ಗಾಜು ಒಡೆದೋಗದ
ಹಾಗೆ ಪ್ರೀತಿಸು ಮೊದಲಿನಂತೆ.

ಬರಿದಾಗಿದೆ ಈ ಬಾಳು
ನೀನಿಲ್ಲದೆ ರೂಪಸಿ.
ಬಳಿ ಬಂದು ಸೇರು ಒಮ್ಮೆ
ನನ್ನನ್ನು ಪರದೆಯ ಸರಿಸಿ.

ಸವೆದೋಗಿದೆ ಈ ಬಾಳು
ಹಳೆಯ ಗಾಡಿಯ ಚಕ್ರದಂತೆ.
ಹೊಸದಾದ ಚಕ್ರವು ಚಲಿಸುವ ಹಾಗೆ
ಎನ್ನ ಜೊತೆ ಪಯಣಿಸು ಮುಂಚೆಯಂತೆ.
      ----ಚಿನ್ಮಯಿ

ನಿಸರ್ಗವೇ ಸ್ವರ್ಗ


ಚಿತ್ರಕ್ಕೆ ಪದ್ಯ-೧೩

ಮೆಲ್ಲನೆ ಜಾರಿದನು ಮಳೆರಾಯನು
ತಂಪಾಗಿಸಲು ಧರಿತ್ರಿಯ ಒಡಲು.
ಸುತ್ತಲೆಲ್ಲಿ ನೋಡಲು ಹಸಿರ ಚಾಪೆ
ಹಾಸಿದಂತೆ ಕಾಣುತ್ತಿದೆ ಮರ ಗಿಡಗಳು.

ತಣ್ಣನೆಯ ಗಾಳಿ ಬೀಸುತ್ತಿರಲು
ಕಂಡಿತೊಂದು ಖಾಲಿಯ ಮಾರ್ಗ.
ಹಾಗೆ ಸುಮ್ಮನೆ ಅತ್ತ ಸಾಗಿದಾಗ
ಅರಿತೆನು ನಿಜವಾಗಿಯೂ ನಿಸರ್ಗವೇ ಸ್ವರ್ಗ.
          ----ಚಿನ್ಮಯಿ