Friday, May 16, 2025

ಆತ್ಮೀಯ ಅಗ್ರಜ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೦


ಅವನೋ ಶ್ರೀ ರಾಮಚಂದ್ರನು,

ನಾನು ಅವನ ದಾಸನುಜನು.


ಅವನೋ ಮರ್ಯಾದ ಪುರುಷೋತ್ತಮನು,

ನಾನು ಪರಮ ಭಕ್ತ ಆಂಜನೇಯನು.


ಅವನೋ ಶ್ರೀ ಕೃಷ್ಣ ಪರಮಾತ್ಮನು,

ನಾನು ಅವನ ಅಗ್ರಜನುಜನು.


ಅವನೋ ಯುಗ ಯುಗಗಳ ಮಹಾಪುರುಷನು,

ನಾನು ಪರಮ ಸ್ನೇಹಿತ ಸುದಾಮರ್ಜುನನು.


ಅವನೋ ಶ್ರೀ ಅಚ್ಯುತನು,

ನಾನು ಶೇಷನಾಗ್ಗರುಡನು.


ಅವನೋ ಅತ್ಯುನ್ನತನು

ನಾನು ಹೆದ್ದಾರಿ ಹಿಂಬಾಲಕನು.


     ----ಚಿನ್ಮಯಿ

Wednesday, May 14, 2025

Ultimate Truth of Life via Mathematics

I'll explain the ultimate truth of life poetically using few of the basic mathematical expressions, since mathematics is the language in which the universe and the multiverses speak.

"1+0=1:-" When Singularity adds up with Nothingness, there exists "Nothingness inside Singularity."

"1-0=1:-" When Nothingness differs from Singularity, there exists "Singularity inside Nothingness."

"1*0=0:-" When Singularity is multiplied by Nothingness, there exists "Complete Nothingness."

"1÷0= Undefined:-" When Singularity is divided away from Nothingness, there exists "Complete Undefined Chaos."

"1<10<100<1000:-" When Singularity keeps on increasing with Nothingness, there exists "Infinite Singularity and Infinite Nothingness."

"1=01=001=0001:-" When Nothingness keeps on increasing with Singularity, there exists "Complete Singularity."

Hence by the interpretation of these above mathematical expressions, both Singularity and Nothingness coexist with each other irrespective of anything and makes both as "One Entity ('1(0)' '0(1)')" of this very Natural Existence of the Universe and the Multiverses.

Hence, if at all we Human Beings achieve Nothingness by always being at the Singularity state by interconnecting Mind, Heart and Soul, then as per mathematics proves, we can achieve the highest state of meditation and that's called as "Liberation."


                    ----Chinmayi

Mathematics and Science

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೯

The relationship between Mathematics and Science is similar to Men and Women—

Without one, the other will not have any meaning in it's/their natural existence, only it will be a "hypothesis for life."


             ----Chinmayi

Monday, May 12, 2025

ನಲ್ಮೆಯ ರೂಪಸಿ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೮


ನಲ್ಲೆ ನೀ ಓದು ಓಲೆ.

ಬಿಡದೆ ಒಂದೂ ಹಾಳೆ.


ಮನದಾಳದಿ ಭಾವ ಉಲ್ಬಣ,

ಮೊಗದೊಳು ನಗೆ ಸಿಂಚನ.

ತುಟಿಯಂಚಲಿ ಸಿಹಿ ಕಂಪನ,

ತನು ಬಯಸಲು ಬಾಹು ಬಂಧನ.

ಅನುಭವವು ನವ ನವೀನ,

ಎದೆಯೊಳು ಪ್ರೇಮ ಮಂಥನ.


ನಲ್ಲೆ ನೀ ಓದಿ ಹೇಳೇ.

ಕಾಯುವೆ ಇಂದೂ ನಾಳೆ...


    ----ಚಿನ್ಮಯಿ

Sunday, May 11, 2025

चाँदनी सुंदरता

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೭


जब चाँद खुद ही खूबसूरत है तो मैं उसकी खूबसूरती का वर्णन कैसे करूँ...!?

                  ----चिन्मयी

ರವಿಯ ನಲ್ಲೆ ಇಳೆ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೬


ದಿನಕರನಿಣುಕಿಣುಕಿ ಅವನಿಯ‌ ನೋಡಿಹನು.

ಅವಳೋ ಅವನಂತರಂಗ ಸ್ಪರ್ಶಕೆ ನಾಚಿಹಳು.

ಜಲಸೇತುವೆಯೇ ಬಾಹು ಬಂಧನ ಚುಂಬನ.

ಉದಯರಾಗದಿ ಜಗದೊಳು ಪ್ರೇಮ ಮಂಥನ.


           ----ಚಿನ್ಮಯಿ

Unconditional Infinite Love = Parent's Love

It never hurts deeply at the moments when we realise and remember- we are growing older and older. But, it really hurts very deeply at the moments when we realise and remember- our parents are getting older and older and all those beautiful past remains only as an infinite treasure.

So, always "Be Kind to everyone especially to your parents", "Give Abundance of Love to them", "Take Care of them", "Live and Spend Time with them as much as possible" no matter what Life Situations are because once the past is gone, it's gone forever.

🤍❤️


              ----Chinmayi

Saturday, May 10, 2025

ಮಿಡ್ಲ್ ಕ್ಲಾಸ್ ಜೀವನ...

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೫


ಮೂರು ಹೊತ್ತು ಊಟಕ್ಕಾಗಿ.

ರಾತ್ರಿಯ ನೆಮ್ಮದಿ ನಿದ್ರೆಗಾಗಿ‌.

ದುಡಿಯೋ 'ನಾವು.'

ಕೊನೆಗೆ ಊಟ, ನಿದ್ರೆಯನ್ನೇ ಮರೆತ್ತಿದ್ದೇವೆ.

ಬದುಕಿ ಸಾಯುತ್ತಾ ನಗುತ್ತಿದ್ದೇವೆ.

ನುಂಗುತ್ತಾ 'ನೋವು.'—


ಇದು ಎಲ್ಲಾ ಮಿಡ್ಲ್ ಕ್ಲಾಸ್ ಜನರ ಪಾಡು.

ಆರೋಗ್ಯದ ಕಡೆ ಗಮನವಿಲ್ಲದೇ ತಮ್ಮವರಿಗಾಗಿ, ಕುಟುಂಬಕ್ಕಾಗಿ—

ದುಡಿಯೋ, ಎಲ್ಲಾ ಮಿಡ್ಲ್ ಕ್ಲಾಸ್ ಜನರ ಹಾಡು.

🤍💔


    ----ಚಿನ್ಮಯಿ

Tuesday, May 6, 2025

Steady Wisdom

When one who thinks he has achieved, then he probably wouldn't have achieved.

But, the one who thinks he hasn't achieved, then he probably would have achieved.


               ----Chinmayi

Thursday, May 1, 2025

How To achieve the Greatest Control...!?

The greatest control can always be achieved by assessing the toughest situations with the right approach and continuing with discipline and constant practice.


              ----Chinmayi

Wednesday, April 30, 2025

"Once a Akhand Bhaarath and now a Developing Nation." But Why...!?

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೪


It all started with King Jayapala's biggest blunder for the Islamic invasion inside Akhand Bhaarath and it happened due to his mercy mistake towards Mahmud Ghazni which had led to the latter's first defeat in the year 1001 AD at the region around present-day Afghanistan and Pakistan and which inturn became a gravest mistake during the latter's second invasion and other 16 invasions making it into 17 invasions on total and the rest is history until now.

Also, it all started with King Samudiri's (King Zamorin's) biggest blunder for Christianity invasion inside Akhand Bhaarath and it happened due to his guestful gesture towards Vasco Da Gama which had led to the latter's first visit at Calicut (Kozhikode) on May 20, 1498 and this visit later turned into a ugly desire and became a gravest mistake during the rest European Nations invasion and the rest is history until now.

"Bhaarath would have been entirely different if at all that mercy mistake had not happened by the King Jayapala and Mahmud Ghazni had been killed in his first attack itself and guestful gesture mistake had not happened by the King Samudiri and Vasco Da Gama had been killed in his first visit itself."


No one (except very few) will speak about these illegal and ugly invasions (not even our school's syllabus properly teach true facts and true history) which has turned the once "Akhand Bhaarath" into a "Developing Nation" with so many viral problems.

If at all our kings during those times had unity among themselves and most importantly if few of our own people didn't turn as a traitors then such illegal invasions and atrocities would have never happened (just like one of our smallest kingdom but yet great King Poru, Paurava (King Porus) once successfully stopped Alexander and his army from invading Bhaarath in the year 326 BC at the Battle of Hydaspes which took place near the Jhelum River) and Bhaarath would have looked entirely different in current times and definitely it would have been a "Vishwaguru at present too" like it had been for "millenniums and centuries ago."


                  ----Chinmayi

Sunday, April 27, 2025

ಮಳೆ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೩


ಬೆಳಗಲು ಹೊನ್ನ ಬೆಳೆ,

ಸುರಿದು ಬಾ ಜೀವ ಅಲೆ.

ಧರೆಗಿಳಿದು ಬಾ ಓ ಮಳೆ.


ಪ್ರಾಣಿ ಪಕ್ಷಿ ಸಸ್ಯ ಕಾಶಿ,

ಹೂವು ಹಣ್ಣು ಜೀವ ರಾಶಿ

ನಗಲು ಕಾದಿವೆ ನಿನ್ನೇ ಮಳೆ.

ಆಲಾಪಿಸಲು ನಿನ್ನ ಸೆಲೆ

ಬಂದು ಸೋಕು ನಿನ್ನ ನೆಲೆ.

ಧರೆಗಿಳಿದು ಬಾ ಓ ಮಳೆ.


ಗಂಧ ಸೂಸೋ ತಂಗಾಳಿ,

ಕಾಂತಿ ಬೀಸೋ ಬಾನುಲಿ

ನಾಟ್ಯ ಖಯಾಲಿ ನಿಂದೇ ಮಳೆ.

ಜೀವಂತವಾಗಿಸಲು ದಿವ್ಯ ಕಲೆ

ಹರಿದು ಸಂತೈಸು ಜೀವ ಹೊಳೆ.

ಧರೆಗಿಳಿದು ಬಾ ಓ ಮಳೆ.


      ----ಚಿನ್ಮಯಿ

Saturday, April 26, 2025

"ಗಾಳಿಯನ್ನೇಕೆ ದೂಷಿಸಲಿ ಧೂಳನ್ನು ತಂದಿದ್ದಕ್ಕೆ, ಕಿಟಕಿ ಬಾಗಿಲನ್ನು ತೆರೆದಿಟ್ಟಿದ್ದು ನಾನಲ್ಲವೇ...! ----ಅನಾಮಿಕ"

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೨


ನಮ್ಮಲ್ಲೇ ಇರುವಾಗ ದೋಷವು,

ಆಚೀಚೆ ಹುಡುಕಾಟ ಭ್ರಮೆಯು.


ನಮ್ಮೊಳಗೆ ನೆಲೆಸಿದೆ ಕೊಳಕು.

ನಮ್ಮೊಳಗೆ ಅವಿತಿದೆ ಬೆಳಕು.


       ----ಚಿನ್ಮಯಿ

Saturday, April 19, 2025

ಪ್ರೇಮ ರವಾನೆ... ಸುಖ ಕಾಮನೆ...

ಪ್ರೇಮದಂಗಡಿಯೊಳು ಮೊದಲ ಭೇಟಿ.

ಒಲವ ಗ್ರಾಹಕನಾಗಿ ಬೇಡಿಹೆನು ರಿಯಾಯಿತಿ...!

ಬಹುದೂರ ದೂಡಲು ಅನಪೇಕ್ಷಿತ ಭ್ರಾಂತಿ,

ಸಾಕೆನಗೆ ಅವಳ ಚಮತ್ಕಾರ ಧಾಟಿ.

ಕಾಯುವ ಮಜದಲ್ಲೇನೋ ಮಧುರ ಭೀತಿ.

ನಗೆಯ ಠಸ್ಸೆಯಿಂದಲೇ ಶುರುವು ಪ್ರೀತಿ.

ನೂಪುರ ನಾದದಮಲ ಮನದ ತಣಿವೇ,

ನಯನ‌ ಮನೋಹರ ಹೃದಯ ಶಾಂತಿ.

ಶ್ಯಾಮಕೇಶ ಸುಗಂಧ ಸರಾಗ ಸೇವನೆಯೇ,

ಸುಮಧುರ ಪ್ರೀತಿಯ ಅಮೋಘ ಕಾಂತಿ.

      

      ----ಚಿನ್ಮಯಿ

Sunday, April 13, 2025

ಜ್ಞಾನೋದಯ

'ನಾನು'— ಅಲ್ಪ ಜ್ಞಾನಿ,

ಪಯಣ ಕೇವಲಜ್ಞಾನದೆಡೆಗೆ.

'ನಾನು'ವಿನ ಮಾರಣಹೋಮವೇ—

ಸಾಧಿತಜ್ಞಾನದ ಕಾಲ್ನಡಿಗೆ.


    ----ಚಿನ್ಮಯಿ

Monday, March 31, 2025

The Art War: AI vs Humans

My perspective on the recent intense debate on AI's Ghibli Art form—

How much ever an AI can develop at a rapid pace, but when it comes to the true art, it can never beat the artistic creativity of the humans.


          ----Chinmayi

Friday, March 21, 2025

ಜೀವನದ ಅದ್ಭುತ ವೈಚಿತ್ರ್ಯ

ಜೀವನ ಎಷ್ಟು ವಿಚಿತ್ರ ಅಂದ್ರೇ—

ಹಲ್ಲಿದ್ದವ್ರಿಗೆ ಕಡ್ಲೆ ಇಲ್ಲ.

ಕಡ್ಲೆ ಇದ್ದವ್ರಿಗೆ ಹಲ್ಲಿಲ್ಲ.

ಈ ಎರಡೂ ಇದ್ದವ್ರಿಗೆ ತಿನ್ನೋ ಮನ್ಸೇ ಇಲ್ಲ...

ಈ ಎರಡೂ ಇಲ್ಲ್ದೋರಿಗೆ ಆಸೆನೇ ಎಲ್ಲಾ...


ಇದೆಲ್ಲಾ ಅವಿಸ್ಮರಣೀಯ ಗೊಂದಲಗಳ್ ಮಧ್ಯೆ—

ಏನಿದ್ದ್ರೂ ಏನಿಲ್ಲ್ದಿದ್ದ್ರೂ ಈ ಕ್ಷಣದಲ್ಲಿ ಖುಷಿಯಾಗಿ, ನೆಮ್ಮ್ದಿಯಾಗಿ, ಆತ್ಮ ತೃಪ್ತಿಯಿಂದ ಬದುಕಬಲ್ಲೋರು ತೀರ ಕಡ್ಮೆ....


              ----ಚಿನ್ಮಯಿ

Thursday, March 20, 2025

ಗುರುವಾರ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೧


ಗುರುವಾರ—

ಶ್ರೀ ಸಾಯಿಯ ದಿನ.

ಶ್ರೀ ರಾಯರ ದಿನ.

ಶ್ರೀಶನ (ಮಹಾವಿಷ್ಣುವಿನ) ದಿನ.

ಶ್ರೀ ಈಶನ (ಮಹಾದೇವನ) ದಿನ.

ಹರೀಶನ ದಿನ.

🙏🏽🙇🏾‍♂️🕉️🤍


  ----ಚಿನ್ಮಯಿ

ಜನ್ಮೋತ್ಸವಕ್ಕೆ ಸ್ವಯಂ ಕಾಣಿಕೆ

ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೦


ಅದೆಷ್ಟೋ ಮರೆಯಲಾಗದ ಜನುಮದಿನಗಳು ಕಳೆದಿವೆ.

ಅದೆಷ್ಟೋ ಸುಖ-ದುಃಖಗಳ ಮಿಲನಗಳಾಗಿವೆ.

ಮರಳಿ ಬರಲಿ ಇನ್ನಷ್ಟೂ ಸರಸ-ವಿರಸ ಕಲಹಗಳು.

ಸದಾ ಸಿದ್ಧವಿರುವೆನು ನಾ ಸಂತಸದಿ ಮತ್ತಷ್ಟೂ ಸವಿಯಲು.


"ಜನ್ಮೋತ್ಸವವೇ ಚೈತ್ರೋತ್ಸವವು."

"ಜನ್ಮೋತ್ಸವವೇ ನಿತ್ಯೋತ್ಸವವು."


       ----ಚಿನ್ಮಯಿ

Friday, March 14, 2025

ಸರ್ವಂ‌ ಶಿವ ಮಯಂ

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೯


ಚೈತನ್ಯ ಪೂರ್ವಕ ಶಿವನು.

ಚೈತನ್ಯ ದ್ಯೋತಕ ಶಿವನು.

ತನು ಚಾಲಕ ಶಿವನು.

ಶವ ಮಾಲೀಕ ಶಿವನು.

.....

.....

.....


    ----ಚಿನ್ಮಯಿ

Life's Greatest Remembrance

Whatever it is.

Whenever it is.

Wherever it is. 

I always don't forget two things to do in my life and that's to be happy and enjoy each moment.


Inspired to write after watching the movie "Into The Wild" and at the same time having a conversation with one of my "brother man."


            ----Chinmayi

Thursday, March 13, 2025

ಪ್ರೇಮದ ವಿನಿಮಯ

ವೈಯಾರಿಯೇ,

ನಿನ್ನ್ ವೈಖರಿಯಿಂ ರದ್ದಾಗಿದೆ ದಿನಚರಿ.

ನಷ್ಟ ಪರಿಹಾರ ಬೇಡಲು ಹೃದಯ—

ಖಾಸಗಿ ಭಾವನೆಗಳ ಆಲಿಸಾಗುವೆಯ ಸಹಚರಿ...!?

ಸಹಚರನೇ,

ಎದೆಯಾಳದಿ ಒಲವೇನೋ ಪರಿಪರಿ.

ನಿನ್ನೆದೆಯ ಸೇರಿದೆ ಒಂದಾಗಿ—

ತವಕದಿ ಸೀದಾ ನನ್ನೆದೆಯಿಂ ಜಾರಿ.


      ----ಚಿನ್ಮಯಿ

Monday, March 3, 2025

स्वयंम बनना चाहिए खुद के जीवन का विकास

नहीं होंगे तो नकारात्मक भाव का निकास,

कैसे होगा जीवन में बढ़िया विकास...!?

शुद्ध करो श्वास और ले लो पूरा सकारात्मक सास,

रब में रखो संपूर्ण विश्वास तो ज़रूर होगा जीवन विकास.


               ----चिन्मयी

Saturday, March 1, 2025

Mathura, Gokul and Vrindavan

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೮

As soon as I kept my feet upon the holiest lands on the Earth— "Mathura, Gokul and Vrindavan.", the 'Positive Vibes' that passed throughout my body especially when my Mind, Heart and Soul were connected and synched up were just unique and were on another level which can't be explained through words but can only be experienced, felt and lived.

After visiting my gurudHaiva— "Sri Krishna's" birth place and where he was brought up and grown up, my eyes were filled with happy tears and my heart was filled with love, devotion and my mind was in a peaceful state and my soul was satisfied ultimately.

What else does a human being needs other than this in the entire lifetime...!?


                ----Chinmayi

Tuesday, February 25, 2025

Village

I knew from birth that the best life was the village life and the happiest and cultured people can be found in the villages, but in between my city life, I had forgotten this true essence of life.

Yet again, I realised and rediscovered the lost glory and I'm the happiest person alive at present just because of the above reasons and I definitely want to thank one friend of mine and the people around him for this to have happened.


                  ----Chinmayi

Saturday, February 22, 2025

Standard of Living

The greatest and truest standard of living always lies in- 'how one treats others with utmost respect.'

                 ----Chinmayi

Friday, February 21, 2025

Toxicity

If a person who always tries to be calm gets frustrated frequently, then the environment and the people around him/her are the most toxic.

             ----Chinmayi

Thursday, February 13, 2025

How will I try to stay calm, happy and keep smiling always...!?

Well, it's just simple, I've understood the importance of living a life in the present moment through various life situations and experiences, but mostly through my gurudeva "Sri Krishna" and learnt and practiced the same for very long. The result, you see now— "Perhaps, I'm living my life with happiness, satisfaction to the fullest and definitely without any sort of regrets."


                    ----Chinmayi

Wednesday, January 15, 2025

ಹದಿನಾಲ್ಕನೆ ಮರುಸಾಹಿತ್ಯ ಬರವಣಿಗೆ

ಹಾಡು: ನಗು ಎಂದಿದೆ ಮಂಜಿನ ಬಿಂದು

ಚಿತ್ರ: ಪಲ್ಲವಿ ಅನುಪಲ್ಲವಿ

ಮೂಲ ಸಾಹಿತ್ಯ: ಆರ್. ಎನ್. ಜಯಗೋಪಾಲ್

ಮೂಲ ಗಾಯನ: ಎಸ್. ಜಾನಕಿ

ಸಂಗೀತ: ಇಳಯರಾಜ

ಮರುಸಾಹಿತ್ಯ ಹಾಡು: ನಭ ವಾರಿಧಿ ಸೇರಿದೆ ಈಗ

--------------------------------------------------------------

--------------------------------------------------------------


ನಭ ವಾರಿಧಿ ಸೇರಿದೆ ಈಗ.

ನಭ ವಾರಿಧಿ ಸೇರಿದೆ ಈಗ.

ಮಳೆ ಹನಿಯ ಭಾವ ಮೇಘ.

ನಭ ವಾರಿಧಿ ಸೇರಿದೆ ಈಗ. 

||ಪ||


ಚಿಗುರೆಲೆ ಒಮ್ಮೆ ನಕ್ಕರೆ ಗಾಳಿಗೆ ಬಂತು ಜೀವ.

ಮರಗಿಡ ಸೋಕೋ ಜೀವಂತ ಅಂಶವೇ ನೀರ ಭಾವ.

ಹಾಸಲು ಹಾಸಿಗೆ ಕಾನನವು.

ಮೂಡಿದೆ ಹಸುರಿಗೆ ಸಂತಸವು.

ಚಿಲಿಪಿಲಿ ಒಲವದು ಓ.

ಇಂದು ಮಾಗಲು ಓ.

ಎಂಥ ಸಂಭ್ರಮವೋ.

ಹಾಡೋ ಹಕ್ಕಿಯ ಇಂಚರ ಕಾವ್ಯ.

ಓಡೋ ಜಿಂಕೆಯ ಕುಣಿತ ಭವ್ಯ. ||೧||


ಆ....ತನನ....


ಜಾರುತ ಸಾಗೋ ಜಲ ಧಾರೆ

ಪಯಣವು ಮೌನ ಗಾನ.

ತರುಲತೆ ಬಳ್ಳಿ ನದಿ ಜೊತೆ

ನಡೆಸಿದೆ ಪ್ರೇಮ ಯಾನ.

ತೀರದಲಿ ಅಲೆಯ ಬರವಣಿಗೆ.

ನದಿಯದು ಕಡಲಿನ ಪ್ರೇಮನಗೆ.

ಮೂಡಿದೆ ಜೀವಸುಧೆ.

ಬಾನ ಅನುರಾಗ ಹಾಹಾ ಸೋಜಿಗ.

ಹಾರೋ ಹಕ್ಕಿಯ ಚಾರಣ ಲಾಸ್ಯ.

ಈಜೋ ಮೀನಿನ ನೆಗೆತ ದಿವ್ಯ.

ಹಾರೋ ಹಕ್ಕಿಯ ಚಾರಣ ಲಾಸ್ಯ. ||೨||


       ----ಚಿನ್ಮಯಿ

Tuesday, January 14, 2025

ಮಕರ ಸಂಕ್ರಾಂತಿ

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೭


ನೇಸರನ ರಥ ಬದಲಿಸಲು ಪಥ ಧನುವಿನಿಂದ ಮಕರದೆಡೆಗೆ,

ಆಗಸದಿ ಕಾಣುವುದೊಂದು ದಿವ್ಯ ಜ್ಯೋತಿ—

ಅದುವೇ ಅಯ್ಯಪ್ಪ ಸ್ವಾಮಿಯ ಕಾಂತಿ.


ಮಾಗಿಯ ಕಾಲ ಅಂತ್ಯದಿ ಸುಗ್ಗಿಯ ಕಾಲ ಶುರುವು,

ಅನ್ನದಾತನ ನಗುವೇ ಹಸಿವಿನ ಸುಖ ಕಾಮನೆ—

ಅದುವೇ ಸಂಕ್ರಮಣದ ಸಿಹಿ ಸೂಚನೆ‌‌.


ಅವರೆಕಾಯಿ-ಕಡಲೆಕಾಯಿ-ಗೆಣಸು-ಕಬ್ಬು ಸವಿಯುತಲಿ,

ಎಳ್ಳು-ಬೆಲ್ಲದ ಸಂಗಮದಿ ನಗು ನಗುತ ನಲಿಯುತಲಿ,

ಹಬ್ಬದ ಸಂಭ್ರಮಾಚರಣೆಯಲ್ಲೇ ಜೀವಿಸೋಣ.


ಸರ್ವರಿಗೂ ಸುಗ್ಗಿಯ ಹಬ್ಬ- "ಮಕರ ಸಂಕ್ರಾಂತಿ"ಯ ಶುಭಕಾಮನೆಗಳು.


               ----ಚಿನ್ಮಯಿ

Saturday, January 11, 2025

ಸಕಲ ಬ್ರಹ್ಮಾಂಡದ ಮನುಷ್ಯರೆಲ್ಲರ ಗುರಿ ಒಂದೇ...

ನಾವೆಲ್ಲರೂ ಒಂದೇ. ನಮ್ಮೆಲ್ಲರ ಗುರಿ ಒಂದೇ- ಅದುವೇ "ಭಗವಂತನ ಧ್ಯಾನದೊಳು ತಲ್ಲೀನರಾಗಿ ಲೀನವಾಗೋದು."

ಇದನ್ನು ಸಾಕಾರಗೊಳ್ಳಿಸಲು ಮನುಷ್ಯರಾದ ನಾವುಗಳು ಹಲವಾರು ಧರ್ಮಗಳನ್ನು, ಕರ್ಮಗಳನ್ನು, ಜಾತಿಗಳನ್ನು, ನೀತಿಗಳನ್ನು, ಮತಗಳನ್ನು, ಪಥಗಳನ್ನು, ಚಿಂತೆಗಳನ್ನು, ಚಿಂತನೆಗಳನ್ನು, ಭಾವಗಳನ್ನು, ಭಾವನೆಗಳನ್ನು, ರೂಪಗಳನ್ನು, ರೂಪಕಗಳನ್ನು ಹಾಗೂ ಇನ್ನೂ ಅನೇಕ ಇತ್ಯಾದಿಗಳನ್ನು ಚೌಕಟ್ಟಾಗಿ ಸೃಷ್ಟಿಸಿಕೊಂಡು ಹರಸಾಹಸ ಪಡುತ್ತಿದ್ದೇವೆ. ಇಂತಹ ಅನೇಕ ವಿಶಿಷ್ಟ, ವೈವಿಧ್ಯ ಗೊಂದಲಗಳಿಂದಲೇ ನಾವುಗಳು ತಲ್ಲೀನತೆಯಿಂದ ಭಗವಂತನಲ್ಲಿ ಲೀನವಾಗೋದು ಅತೀ ಕಠಿಣವಾಗಿಬಿಟ್ಟಿದೆ.

ಇಂತಹ ಎಲ್ಲಾ ಕಟ್ಟುಪಾಡುಗಳನ್ನೆಲ್ಲಾ ಭೇದಿಸಿ ದಾಟಿ ಜ್ಞಾನ ಮಂದಿರದೊಳು ಪ್ರೇಮ ಜ್ಯೋತಿಯ ಬೆಳಗಿದರೇ ತಲ್ಲೀನರಾಗಿ ಭಗವಂತನಲ್ಲಿ ಲೀನವಾಗೋದ್ರಲ್ಲಿ ಸಂಶಯವೇ ಇಲ್ಲ.

ಇದನ್ನ ಬಹಳ ಸ್ಪಷ್ಟವಾಗಿ ಹೇಳುವಂತಹ ಸಕಲ ಬ್ರಹ್ಮಾಂಡದ ಒಂದೇ ಒಂದು ಆತ್ಮ— ಭಾಷೆ, ಭಾವ, ವಿದ್ಯೆ, ಜ್ಞಾನ ಅಂದ್ರೆ ಅದುವೇ "ಸನಾತನ ಧರ್ಮ." ಇಲ್ಲಿ 'ಸನಾತನ'ವೆಂದರೇ ಶಾಶ್ವತವಾಗಿರುವಂತಹದು ಹಾಗೂ 'ಧರ್ಮ'ವೆಂದರೇ ನಮ್ಮಾತ್ಮದಲ್ಲಡಗಿಹ ಪರಮಾತ್ಮನೆಂಬ ನಂದಾದೀಪದ ಬೆಳಕನ್ನು ಬೆಳಗಿಸಿ ಅದರ ಬೆಳಕಲ್ಲೇ ನಡೆದು ಬದುಕಿದರೆ ಅದೇ ಬೆಳಕಲ್ಲೇ ಮುಕ್ತಿ ಸಿಗುವುದೆಂಬುದನ್ನು ತಿಳಿಸುವಂತಹ ದಾರಿದೀಪವದು.


"ವಸುಧೈವ ಕುಟುಂಬಕಂ."

"ಸರ್ವೇ ಜನಾಃ ಸುಖಿನೋ ಭವಂತು."

"ಸರ್ವ ಜೀವರಾಶಿ ಸುಖಿನೋ ಭವಂತು."

"ಸರ್ವೇ ಭವಂತು ಸುಖಿನಃ."

🙏🏽🙇🏾‍♂️🕉️🤍


               ----ಚಿನ್ಮಯಿ

Thursday, January 9, 2025

LIFE

First Breath at Birth, No Name.

Last Breath at Death, Imprint Name.

In between B (Birth) and D (Death), there's always a C (Choices for current state of joy and happiness) and through that C, the journey between B and D must be complete, fulfilling and meaningful.


With much respect 

"Gaur Gopal Das" ji 🙏🏽🙇🏾‍♂️🤍


         ----Chinmayi

Tuesday, January 7, 2025

Dear ज़िंदगी

ज़िंदगी में जीतना enjoy करसकते हो उतना enjoy करो और प्रती क्षण, प्रति दिन में खुश रहने को कोशिश करो क्यूंकि—

"ज़िंदगी ना मिलेगी दोबारा." 


                 ----चिन्मयी

Sunday, January 5, 2025

Foolishness of Humans

Literally everyone has forgotten the Diamond (present state of living the life happily with satisfaction) and all are running behind Gold (past, future, money, materialistic pleasures).


              ----Chinmayi

Thursday, January 2, 2025

ABCD Songuu

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೬

A for Artuu

B for Batuu

C for Catuu

D for Dotuu

ಹೊಡಿ ಒಂಭತ್ತು...

ಹೊಡಿ ಒಂಭತ್ತು...


E for Eatuu

F for Fatuu

G for Gutuu

H for Hutuu

ಹೊಡಿ ಒಂಭತ್ತು...

ಹೊಡಿ ಒಂಭತ್ತು...


I for Insectuu

J for Jetuu

K for Kiteuu

L for Lightuu

ಹೊಡಿ ಒಂಭತ್ತು...

ಹೊಡಿ ಒಂಭತ್ತು...


M for Meatuu

N for Nutuu

O for Outuu

P for Putuu

ಹೊಡಿ ಒಂಭತ್ತು...

ಹೊಡಿ ಒಂಭತ್ತು...


Q for Quietuu

R for Restuu

S for Situu

T for Tightuu

ಹೊಡಿ ಒಂಭತ್ತು...

ಹೊಡಿ ಒಂಭತ್ತು...


U for Upittu

V for Vibrateuu

W for Whiteuu

X for Xpertuu

Y for Yeastuu

Z for Zomatouu

ಹೊಡಿ ಒಂಭತ್ತು...

ಹೊಡಿ ಒಂಭತ್ತು...

ಹೊಡಿ ಒಂಭತ್ತು...

ಹೊಡಿ ಒಂಭತ್ತು...



      ----ಚಿನ್ಮಯಿ