ನಯನಮನೋಹರ ಕೆಸರ್ಮಲ್ಲಿಗೆ,
ನೋಡುತಲೇ ಬಿದ್ದೆ ಪ್ರೀತಿಗೆ.
ದುಂಬಿಯ ಕಾತರ ಪುಷ್ಪಧೂಳಿಗೆ,
ಸಿಹಿ ಜೇನೇ ಮುತ್ತಿನ ಗುಳಿಗೆ.
ಕೇಶಘಮಲು ದುಂಡು ಮಲ್ಲಿಗೆ,
ಕೆದರಿಸು ಹಾಗೆ ಮೆಲ್ಲಗೆ.
ಮೊಗಸಿರಿಯು ಕೆಂಡಸಂಪಿಗೆ,
ತಾಗಿಸು ಎನ್ನ ಮೆಯಿಗೆ.
ಸೌಗಂಧಿಕೆಯ ಸ್ಪರ್ಶ ಕೊರಳಿಗೆ,
ಪರಾಗಸ್ಪರ್ಶ ಮೂಗಿಗೆ.
ಬೆರಳುಗಳೇ ಮಧುರ ಸೇವಂತಿಗೆ,
ಸಲುಗೆ ಸುಖ ಹೊಕ್ಕಳಿಗೆ.
ಸರಸ ಸಲ್ಲಾಪ ಗಿಡ ಮರ ಲತೆಗೆ,
ಸೋಕಲು ನಡು ಕೈಯಿಗೆ.
ನಾಟ್ಯ ಸುಮ ಹರುಷವು ತಂಗಾಳಿಗೆ,
ಸೇರಲು ಉಸಿರು ಉಸಿರಿಗೆ.
ಪ್ರೇಮದೇವತೆಗೆ,
ಪ್ರೇಮ ಭಾವದಿ ಪುಷ್ಪಾಂಜಲಿ.
ಬಾಳಸಾಥಿಗೆ,
ಪುಷ್ಪಾಲಂಕಾರದ ಪ್ರೇಮಾಂಜಲಿ.
----ಚಿನ್ಮಯಿ
No comments:
Post a Comment