Thursday, August 27, 2020

ಪಶ್ಚಿಮ ಘಟ್ಟಗಳ ಸೌಂದರ್ಯ


ಚಿತ್ರಕ್ಕೆ ಪದ್ಯ-೪೧

ಸ್ವರ್ಗದ ದ್ವಾರವಾದ ಸಕಲೇಶಪುರ,

ಹಾಸನ ಜಿಲ್ಲೆಗೆ ಹೆಮ್ಮೆಯ ಗೋಪುರ.

ಕಾಫಿ ಬಿತ್ತನೆಯ ಚಿಕ್ಕಮಗಳೂರು,

ಸುಂದರ ಸ್ಥಳಗಳಿಗೂ ತವರೂರು.


ಸ್ವಚ್ಛ ಗಾಳಿ ಸೇವನೆಯ ಮಲೆನಾಡು,

ನಿರ್ಮಲ ನಿಸರ್ಗ ತಾಣಗಳ ನೆಲೆಬೀಡು.

ಪುಣ್ಯಕ್ಷೇತ್ರಗಳ ಪ್ರಕೃತಿಯೇ ದಕ್ಷಿಣ ಕನ್ನಡ,

ಹೋಗಲೇಬೇಕು ತಪ್ಪದೇ ಎಲ್ಲರ ಸಂಗಡ.


ಕಾವೇರಿಯ ಉಗಮಸ್ಥಾನವಾದ ಕೊಡಗು,

ಸ್ವರ್ಗದ ಅರಮನೆಗಿಂತಲೂ ಸೊಬಗು‌.

ಇದುವೇ ಪಶ್ಚಿಮ ಘಟ್ಟಗಳ ಸೌಂದರ್ಯ,

ಕರುನಾಡಿನ ಮೂಲ ಚೇತನದ ಸಾನ್ನಿಧ್ಯ.

         ----ಚಿನ್ಮಯಿ

Friday, August 21, 2020

ಅಜ್ಞಾನವೇ ಅಧರ್ಮವು

ಅಜ್ಞಾನಿಗಳಿಗೆ ಬುದ್ದಿ ಹೇಳಿದರೂ ಅರ್ಥವಾಗದು ಏಕೆಂದರೆ, ಅವರು ವಾಸ್ತವಿಕದ ನಿಜ ಸ್ವರೂಪವನ್ನು ಮರೆತಿರುತ್ತಾರೆ ಹಾಗು ಅವರಲ್ಲಿ ಗ್ರಹಿಸುವ ಶಕ್ತಿಯು ಕ್ಷೀಣಿಸಿರುತ್ತದೆ. ಅಂತವರು ಅಧರ್ಮಿಗಳಾಗಿರುತ್ತಾರೆ.

ಆದ್ದರಿಂದ, ಪುನಃ ಧರ್ಮ ಸ್ಥಾಪನೆಗಾಗಿ ಅಂತವರನ್ನು ಸಂಹರಿಸಲು ಭಗವಂತ ಶ್ರೀ ವಿಷ್ಣು ಭುವಿಯಲ್ಲಿ ಪುನಃ ಹುಟ್ಟ ಬೇಕಾಗುತ್ತದೆ.

          ----ಚಿನ್ಮಯಿ

ಕರ್ಮಯೋಗದ ಮೂಲ ಸಿದ್ಧಾಂತ

ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ಸಿದ್ದರಾಗಬೇಕು.

ಆದರೆ ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ನಿರಾಕರಿಸಬೇಕು.

ಇವೆರಡರ ಮಧ್ಯೆ ಇರುವ ವ್ಯತ್ಯಾಸ ತಿಳಿದು ಧರ್ಮಕ್ಕಾಗಿ ಜೀವನ ಸಾಗಿಸುವವನೆ ಕರ್ಮಯೋಗಿ. 

ಇದುವೇ ಕರ್ಮಯೋಗದ ಮೂಲ ಸಿದ್ಧಾಂತ.

             ----ಚಿನ್ಮಯಿ

Wednesday, August 19, 2020

ನನ್ನಪ್ಪ

ಚಿತ್ರಕ್ಕೆ ಪದ್ಯ-೪೦

ಲುಂಗಿಯ ತೊಟ್ಟಿಹನು ನನ್ನಪ್ಪ.

ಹಳೆ ಸೈಕಲ್‌ ಸವಾರನು ನನ್ನಪ್ಪ.

ಹೋಗುತ್ತಿರುವನು ಹೊಲದ ಕಡೆಗೆ,

ಗಣೇಶ ಬೀಡಿಯ ಹೊಗೆಯ ಜೊತೆಗೆ‌,

ಗಾಳಿಯ ವೇಗವನ್ನು ಮೀರಿ ನನ್ನಪ್ಪ.


ವಲ್ಲಿಯ ಧರಿಸಿಹನು ನನ್ನಪ್ಪ.

ಸಿನಿಮಾ ಪ್ರೇಮಿಯು ನನ್ನಪ್ಪ.

ಹಳೆಯ ಹಾಡನ್ನು ಹಾಡಿಕೊಂಡು,

ಬ್ರೇಕನ್ನು ಕೊಂಚ ಹಿಡಿದುಕೊಂಡು,

ಅನ್ನವ ಬೆಳೆಸಲು ಸಾಗಿಹನು ನನ್ನಪ್ಪ.

         ----ಚಿನ್ಮಯಿ

Tuesday, August 18, 2020

ಅರ್ಥಪೂರ್ಣ ಪ್ರಶ್ನೋತ್ತರ

"ನನ್ನನ್ನು ಯಾರು ಪೂರ್ತಿ ಅರ್ಥ ಮಾಡಿಕೊಂಡಿದ್ದಾರೆ?" ಎಂದು ಹೃದಯಕ್ಕೆ ಪ್ರಶ್ನಿಸಿದಾಗ, ಹೃದಯ ನಸುನಗುತ ಹೀಗೆಂದು ಉತ್ತರಿಸಿತು-


"ನಿನ್ನನ್ನು ನೀನೇ ಪೂರ್ತಿ ಅರ್ಥ ಮಾಡಿಕೊಂಡಿಲ್ಲ, ಇನ್ನೂ ಬೇರೆಯವರ ಚಿಂತೆ ನಿನಗೇತಕೋ!

ಮೊದಲು ನಿನ್ನನ್ನ ನೀನು ಅರ್ಥ ಮಾಡಿಕೋ ಅಷ್ಟೇ ಸಾಕು."

        ----ಚಿನ್ಮಯಿ

ಕಲಿಯುಗದಲ್ಲಿ ತಿಳಿಯಬೇಕಾದ ಕಟು ಸತ್ಯಗಳು

ಚಿತ್ರಕ್ಕೆ ಪದ್ಯ/ಜೀವನದ ಸತ್ಯ-೩೯

"ಪ್ರಶ್ನೆಗಳು-"

•ನಮ್ಮವರು ಇಲ್ಲಿ ಯಾರ್ಯಾರು?

•ನಮ್ಮದು ಎನ್ನುವುದು ಯಾವುದು?

•ಪ್ರಪಂಚದಲ್ಲಿ ನಮ್ಮ ಕರ್ತವ್ಯಗಳು ಏನಿಹುದು?


"ಉತ್ತರಗಳು-"

•ಪರಮಾತ್ಮನೊಬ್ಬನೇ ನಮ್ಮವನು.

•ನಾವು ಮಾಡುವ ಒಳ್ಳೆಯ ಕಾರ್ಯಗಳೇ ನಮ್ಮದು.

•ಧರ್ಮದ ಹಾದಿಯಲ್ಲಿ ನಡೆದು ಸಮಾಜದ ಹಿತಕ್ಕಾಗಿ ಜೀವಿಸುವುದೇ ನಮ್ಮ ಕರ್ತವ್ಯಗಳು.


"ಇತರೆ ಸತ್ಯದ ವಿಷಯಗಳು-"

•ಧರ್ಮದ ಮೂಲ ಆಧಾರವಾದ 'ಕರುಣೆ'ಯನ್ನು ಮೊಟ್ಟ ಮೊದಲಿಗೆ ಜೀವನದಲ್ಲಿ ರೂಪಿಸಿಕೊಳ್ಳಬೇಕಿದೆ.

•ಧರ್ಮದ ಐದು ಆಧಾರಗಳಾದ 'ಜ್ಞಾನ, ಧೈರ್ಯ, ಪ್ರೇಮ, ಸಮರ್ಪಣೆ, ನ್ಯಾಯ'ವನ್ನು ಅರಿಯಬೇಕಿದೆ.

•ಪಂಚ ಮಹಾಭೂತಗಳಾದ 'ಪೃಥ್ವಿ , ಜಲ, ಅಗ್ನಿ, ವಾಯು, ಆಕಾಶ'ದ ಭಿಕ್ಷೆಯೇ ಈ ದೇಹವೆಂಬುದನ್ನು ತಿಳಿಯಬೇಕಿದೆ.

•'ತಮಸ್ಸು, ರಜಸ್ಸು, ಸತ್ತ್ವ' ಎಂಬ ಗುಣಗಳು ಮನುಷ್ಯನ ಸ್ವಭಾವಕ್ಕೆ ಕಾರಣವಾಗಿದೆ.

•'ಭಯ, ಮೋಹ, ಕ್ರೋಧ, ಅಸೂಯೆ, ಅಹಂಕಾರ, ಮದ, ಲೋಭ, ಮಾತ್ಸರ್ಯ, ಕಾಮ'ದಂತಹ ಬಾಧೆಗಳಿಂದ ವಿಮುಕ್ತರಾಗಬೇಕಿದೆ‌.

•ಕೊನೆಯದಾಗಿ, ಆತ್ಮದಿಂದಲೇ ಪರಮಾತ್ಮನನ್ನು ಸೇರಬೇಕಿದೆ.

         ----ಚಿನ್ಮಯಿ

Sunday, August 16, 2020

ಮನುಷ್ಯತ್ವದ ಜೀವನಕ್ಕೊಂದು ಮೌಲ್ಯ

ಬದುಕಿರುವಾಗ, 

ತುಳಿಯುವವರು ಎಷ್ಟೋ!

ಹೀಯಾಳಿಸಿ ನಗುವವರೆಷ್ಟೋ!

ಬೆನ್ನಿಂದೆ ಮಾತನಾಡುವವರೆಷ್ಟೋ!

ಅರ್ಥ ಮಾಡಿಕೊಳ್ಳದ್ದೆ ಬಿಟ್ಟೋಗುವವರೆಷ್ಟೋ!


ಸಾಯುವಾಗ,

ಹೊಗಳುವವರು ಎಷ್ಟೋ!

ನೆನೆದು ನೆನೆದು ಅಳುವವರೆಷ್ಟೋ!

ಅಯ್ಯೋ ಪಾಪಾ ಎನ್ನುವವರೆಷ್ಟೋ!

ಎಂದೂ ಬಾರದ ಪ್ರೀತಿ ಉಕ್ಕಿ ಬರುವುದೆಷ್ಟೋ!


ಬದುಕ್ಕಿದ್ದ ಕಾಲವಷ್ಟೂ ನಿಂದಿಸಿದವರೆಲ್ಲಾ ಸತ್ತಾಗ ಬಂದು ಅಳುವರಯ್ಯ.

ಬದುಕ್ಕಿದ್ದಾಗ ತೋರಿಸದ ಪ್ರೀತಿ ಸತ್ತಾಗ ತೋರುವುದು ತರವಲ್ಲಯ್ಯ.


ಬದುಕ್ಕಿದ್ದ ಜೀವಕ್ಕೆ ಗೌರವ, ಪ್ರೀತಿ, ಕಾಳಜಿ ತೋರಿಸಿರಯ್ಯ.

ಸತ್ತ ಮೇಲೆ ತೋರಿಸಿದರೆ ಆ ಪರಮಾತ್ಮನು ಮೆಚ್ಚನಯ್ಯ.

        ----ಚಿನ್ಮಯಿ

Monday, August 10, 2020

ಪ್ರೇಮಕ್ಕೆ ಸಮ್ಮತಿ.!?

ಹೊಂಗನಸಿನ ಸುಂದರಿಯೇ ನೀ

ಎದುರಿಗೆ ಬಂದಾಗ ಸಂತಸ.

ನಿನ್ನನ್ನು ಹಲವೊಮ್ಮೆ ನೋಡಲು

ನನಗಿಲ್ಲ ಕೊಂಚವೂ ತಾಮಸ.


ಪ್ರೇಮವ ವ್ಯಕ್ತಪಡಿಸಲು ನನಗೆ

ತಿಳಿದಿರೋದು ಇದೊಂದೆ ತರಹ.

ಒಮ್ಮೆ ನಸುನಗುತ ಗುಳಿಕೆನ್ನೆಯಿಂದ

ಒಪ್ಪುವೆಯಾ ಪ್ರೇಮದ ಬಿನ್ನಹ?

          ----ಚಿನ್ಮಯಿ

Sunday, August 9, 2020

ಅಮ್ಮನ ಪ್ರೇಮ

ಚಿತ್ರಕ್ಕೆ ಪದ್ಯ-೩೮

ಅಮ್ಮ ಎಂಬ ಶಬ್ದವೇ

ಎಲ್ಲದಕ್ಕೂ ಮೊದಲು.

ನನ್ನ ಜೀವಕ್ಕೆ ಅವಳೇ

ಪ್ರೇಮದ ಹೊನಲು.


       ಸೂರ್ಯ ಚಂದ್ರ ತಾರೆಯರಂತೆ 

       ಬೆಳಕಾಗಿ ನಿಲ್ಲುವಳು ಬೀರುತಲಿ ಪ್ರಕಾಶ.

       ಮೊಟ್ಟ ಮೊದಲಿನ ಗುರುವಾಗಿ

       ಸ್ವರ್ಣದಂತಾಗಿಸುವಳು ಬದುಕಿನ ವಿಕಾಸ.

       

ಅಮ್ಮ ಎಂದು ಕರೆದರೆ

ಓಡಿ ಬರುವಳು ಬಳಿಗೆ.

ನೆನೆಯುತ ಸೇರುವಳು

ಬಿಟ್ಟಿರದೆ ಒಂದು ಗಳಿಗೆ.


       ಹಸುಳೆ ಇಂದ ಕೊನೆಯವರೆಗೂ

       ಬೆಳಗುವುದು ತಾಯಿಯೆಂಬ ಹಣತೆ.

       ಜೀವನಕ್ಕೊಂದು ದಾರಿ ತೋರಿಸಿ

       ಸಾಕಿ ಸಲಹುವಳು ಬಾರದಂತೆ ಕೊರತೆ.


ಅಮ್ಮ ನಿನ್ನ ನೆನೆದಾಗ

ಎದೆತುಂಬುವುದು ತಕ್ಷಣ‌.

ನನ್ನ ಸಂಪೂರ್ಣ ಬದುಕಿಗೆ

ನೀನೇ ಮೊದಲ ಕಾರಣ.

       ----ಚಿನ್ಮಯಿ

Saturday, August 8, 2020

ಪ್ರೇಮದ ಯಾಚನೆ

ಹರಿಯುವ ಜರಿ ನಾನಾದರೆ,
ಹರಿಯುವ ಮಾರ್ಗ ನೀನೇ.
ಕೆರೆಯ ಕೆಸರು-ಕಮಲದ ಹಾಗೆ,
ನಾವಿಬ್ಬರೂ ಒಂದೆ ಕೇಳೇ.

ಕಾಗದದ ದೋಣಿಯು ಹರಿದರೇನು,
ಮುಂದೆ ಸಾಗಿಸಲು ನಾನಿರುವೆನು.
ಪ್ರೀತಿಯ ಸುಧೆ ನೀಡು ಸಾಕು,
ಚಿರಂಜೀವಿಯಾಗಿ ಚೆಲ್ಲುವೆ ಬೆಳಕು.

ವೃಕ್ಷದ ಕಾಂಡ ನಾನಾದರೆ,
ವೃಕ್ಷದ ಬೇರು ನೀನೇ.
ಅರಳುವ ಪುಷ್ಪದ ಹಾಗೆ,
ಪ್ರೀತಿಯು ಹರಳಂತೆ ಕೇಳೇ.

ವಿಶ್ರಮಿಸಲು ನೆರಳಿಲ್ಲದಿದ್ದರೇನು,
ಫಲ ನೀಡಿ ನೆರಳಾಗಿ ನಾ ನಿಲ್ಲುವೆನು.
ಶುರುಮಾಡಿರುವೆ ನಾ ಪ್ರೀತಿಯ ವ್ಯವಸಾಯ,
ಫಲ ನೀಡಿದರೆ ನೀ ಸಂತಸವೇ ತರುವಾಯ.
            ----ಚಿನ್ಮಯಿ

ಬೆಳಕಾಗು ನೀ

 ಚಿತ್ರಕ್ಕೆ ಪದ್ಯ-೩೭

ಬೆಳಕಾಗು ನೀ ಬೆಳಕಾಗು.

ಬೆಂಕಿಕಡ್ಡಿಯ ಶಾಖವಾಗು.

ಕತ್ತಲು ಕವಿದ ಬಾಳಿಗೆ

ಉಲ್ಲಾಸದ ಬೆಳಕಾಗು.


ಬೆಳಕಾಗು ನೀ ಬೆಳಕಾಗು.

ಜ್ವಾಲೆಯಂತೆ ನಿರ್ಮಲವಾಗು.

ಪೂರ್ತಿ ಬೇಸತ್ತ ಬಾಳಿಗೆ

ಪ್ರೇರಣೆಯ ಬೆಳಕಾಗು.

        ----ಚಿನ್ಮಯಿ

Friday, August 7, 2020

Srinivasa Ramanujan (FRS)


                                     ಚಿತ್ರಕ್ಕೆ ಪದ್ಯ/ಕಥೆ- ೩೬

TamiL naaDu is the land of temples and also the land which has given birth to many of the geniuses of our country. One among them was one of the world's greatest mathematican, "S. Ramanujan." His IQ was so high that he was a gifted talent. Without even a formal education in mathematics, he has created many theorems and formulas which have been used now in many fields and also his new formulas are now used to study the 'black holes.' Though he suffered from poverty and health issues frequently and lived for only 32 years, his achievements towards mathematics in very short span of time is just amazing and if he had lived for even more years, then 'the world's mathematics would have been in other dimension.' His amazing contributions to the field of mathematics is enough to consider him to be as great as "Newton, Einstein, Euler, Gauss, Euclid, Fermat, Leibniz, Descartes, Aryabhata, Brahmagupta, Bhaskaracharya, Pythagoras, Hilbert, Archimedes."

He was just a remarkable and greatest mathematician that India has ever seen and probably the world too.


"An equation for me has no meaning, unless it expresses a thought of God.

----S Ramanujan"


                  ----chinmayi