Saturday, August 8, 2020

ಪ್ರೇಮದ ಯಾಚನೆ

ಹರಿಯುವ ಜರಿ ನಾನಾದರೆ,
ಹರಿಯುವ ಮಾರ್ಗ ನೀನೇ.
ಕೆರೆಯ ಕೆಸರು-ಕಮಲದ ಹಾಗೆ,
ನಾವಿಬ್ಬರೂ ಒಂದೆ ಕೇಳೇ.

ಕಾಗದದ ದೋಣಿಯು ಹರಿದರೇನು,
ಮುಂದೆ ಸಾಗಿಸಲು ನಾನಿರುವೆನು.
ಪ್ರೀತಿಯ ಸುಧೆ ನೀಡು ಸಾಕು,
ಚಿರಂಜೀವಿಯಾಗಿ ಚೆಲ್ಲುವೆ ಬೆಳಕು.

ವೃಕ್ಷದ ಕಾಂಡ ನಾನಾದರೆ,
ವೃಕ್ಷದ ಬೇರು ನೀನೇ.
ಅರಳುವ ಪುಷ್ಪದ ಹಾಗೆ,
ಪ್ರೀತಿಯು ಹರಳಂತೆ ಕೇಳೇ.

ವಿಶ್ರಮಿಸಲು ನೆರಳಿಲ್ಲದಿದ್ದರೇನು,
ಫಲ ನೀಡಿ ನೆರಳಾಗಿ ನಾ ನಿಲ್ಲುವೆನು.
ಶುರುಮಾಡಿರುವೆ ನಾ ಪ್ರೀತಿಯ ವ್ಯವಸಾಯ,
ಫಲ ನೀಡಿದರೆ ನೀ ಸಂತಸವೇ ತರುವಾಯ.
            ----ಚಿನ್ಮಯಿ

No comments:

Post a Comment