Sunday, November 20, 2022

ಸಂಸ್ಕಾರ

ಮಾಡಿ ನೋಡು ಅಹಂಕಾರದ ಸಂಹಾರ,

ಮರುಚಣವೇ ಉದ್ಭವಿಸುತ್ತದೆ ಸಂಸ್ಕಾರ.


'ಸಂಸ್ಕಾರ'ದಿಂದಲೇ 'ಅಹಂಕಾರ'ದ ಸಂಹಾರ...


       ----ಚಿನ್ಮಯಿ

ಅವನು.. ಅವಳು.. ಪ್ರೇಮ..

ಅವಳಾದರೆ ಪ್ರೇಮ ಪುಸ್ತಕದ ಪರಿವಿಡಿ,
ನಾನಾಗುವೆ ಅವಳಿಗಾಗಿ ಮುನ್ನುಡಿ.
ಅವಳಾದರೆ ಪದಕೋಶದ ಸಹಚರಿ,
ಓದುವ ಹವ್ಯಾಸ ಇನ್ಮುಂದೆ ದಿನಚರಿ.

ಅವನಾದರೆ ಪ್ರೇಮದಡಗಿನ ನಾವಿಕ,
ನಾನಾಗುವೆ ದಾರಿ ತೋರುವ ದ್ಯೋತಕ.
ಅವನಾದರೆ ಹಣೆಯಲ್ಲಿ ಗೋಧೂಳಿ ರವಿಯು,
ಬಾಳಸಾಗರದಲೆಗಳಿಗೆ ಎಂದೆಂದೂ ಸುಖವು.

ಮನೆಯರಸಿ ಮನದರಸಿ ಗುಣಶೀಲೆ ಅವಳೇ ವಿಮಲ,
ಗುಣವಂತ ಸಿರಿವಂತ ಅವನ ಪ್ರೇಮವೆಂದೆಂದಿಗೂ ಅಚಲ.
ಪ್ರೇಮದೀಷಾರೆಯ ನೀಡಿದವಳದೋ ಹೃತ್ಕಮಲ,
ಬಾಳಸಖನಾಗಿ ಅವನಿರಲು ಜೊತೆಗೆ ಇರದಿರದು ತುಮುಲ...

            ----ಚಿನ್ಮಯಿ

Saturday, November 19, 2022

ಮಾನವೀಯತೆ...!

ಮನುಷ್ಯ ಇತರ ಮನುಷ್ಯರನ್ನು ಹಾಗೂ ಸಕಲ ಜೀವರಾಶಿಗಳನ್ನು ತನ್ನಲ್ಲಿ ಒಬ್ಬರೆಂದು ಮಾನವೀಯತೆಯಿಂದ ಕಂಡರೆ ಪ್ರಪಂಚ ಎಷ್ಟೋ ಸುಂದರಮಯ

             ----ಚಿನ್ಮಯಿ

Tuesday, November 15, 2022

ಬಾ...

ಚಿತ್ರಕ್ಕೆ ಪದ್ಯ-೬೧

ಹಾರುವ ಹಕ್ಕಿಗಳ ನೋಡುವ ಬಾ

ಚಿಲಿಪಿಲಿ‌ ನಾದಕ್ಕೆ ಕುಣಿಯುವ ಬಾ

ಬಾನಂಗಳದಾಚೆಗೆ ಹೋಗುವ ಬಾ

ನಾವೇ ಹಕ್ಕಿಗಳಾಗಿ ಹಾರಾಡುವ ಬಾ


           ----ಚಿನ್ಮಯಿ

Saturday, November 5, 2022

ದೇವರೇ...

ದೇವರೇ ಈ ಬದುಕು ನಿನ್ನಯ ಭಿಕ್ಷೆ.

ತಪ್ಪಿಗೆ ಅನುಭವಿಸಲೇಬೇಕು ಶಿಕ್ಷೆ.

ಬಂದಂತೆ ಬದುಕುವುದೇ ಧರ್ಮ.

ಇಲ್ಲವೇ ಕಾದು ಕುಳಿತಿರುವುದು ಕರ್ಮ.


         ----ಚಿನ್ಮಯಿ

ಬದುಕಿನ ಸಾರ್ಥಕತೆ

ಬದುಕ- ಬಂದಂತೆ ಜೀವಿಸು.

ಎಲ್ಲರ ನಿಷ್ಕಲ್ಮಶದಿ ಪ್ರೀತಿಸು.

ಇಷ್ಟಿದ್ದರೆ ದ್ವೇಷ-ಆಕ್ರೋಷ ಇನ್ನೇತಕೆ?

ಖುಷಿಯಿಂದ ಜೀವಿಸಿದರೆ ಸಾರ್ಥಕವು ಬದುಕೇ..


        ----ಚಿನ್ಮಯಿ