Sunday, May 31, 2020

ಪ್ರೀತಿಯ ನಿರೀಕ್ಷೆ

ಕನಸೊಳು ಕಾಡಿಸಿ ನಿದ್ದೆಗೆಡಿಸಿ ಎನ್ನ
ಪ್ರೇಮ ಕೈದಿಯಾಗಿಸಿದೆ ನೀ ಮನದನ್ನೆ.
ಪೂರ್ಣ ಚಂದಿರನಂತೆ ನೀ ನಕ್ಕಾಗ
ಆ ಚಂದಿರನ ಪ್ರತಿಬಿಂಬಿವೇ ನಿನ್ನ ಗುಳಿಕೆನ್ನೆ.

ಕನಸ ನನಸಾಗಿಸಲು, ನಿನ್ನ ನಾ ಓಲೈಸಲು
ಪ್ರೀತಿಯೇ ಸಾಕು ಮಾಡಬೇಕಿಲ್ಲ ತಗಾದೆ.
ಕನಸ ನನಸಾಗಿಸುತ, ಎನ್ನ ನೀ ಓಲೈಸುತ
ಒಂದಾಗಿಸುವೆಯ ನಮ್ಮಿಬ್ಬರ ಇರಾದೆ?
          ----ಚಿನ್ಮಯಿ

Saturday, May 30, 2020

ಮುಂದೆ ಸಾಗಲ? ಹಿಂದೆ ಸಾಗಲ?

ಮುಂದೆ ಸಾಗಲ? ಹಿಂದೆ ಸಾಗಲ?
ಎತ್ತ ಸಾಗಲಿ ಚೆನ್ನಕೇಶವ!
ದಾರಿ ತೋರಿಸಿ ಎನ್ನ ಸಾಗಿಸು
ಧರ್ಮದೆಡೆಗೆ ಓ ಮಾಧವ.

ಮುಂದೆ ಸಾಗಲ? ಹಿಂದೆ ಸಾಗಲ?
ನೀನೇ ಆಜ್ಞಾಪಿಸು ಮುಕುಂದನೆ.
ಎತ್ತ ಸಾಗಲು ನೀನೇ ಇರುವಾಗ
ದಿಟ್ಟ ನಡೆಯೊಳು ಮುನ್ನುಗ್ಗುವೆ ಪರನ್ಧಾಮನೆ.
        ----ಚಿನ್ಮಯಿ

Friday, May 29, 2020

ಎನ್ನೆದೆಯನು ತಂಪಾಗಿಸು

ಎನ್ನೆದೆಯನು ತಂಪಾಗಿಸು
ಬಾ ಮಳೆಯೇ ಬಾ.
ತಂಗಾಳಿಯ ಬೀಸುತಲಿ
ಬಾ ಮಳೆಯೇ ಬಾ.

ಮೋಡಗಳ ಸಮ್ಮಿಲನದಿಂದ
ಬಾ ಮಳೆಯೇ ಬಾ.
ಹನಿಗಳ ತೋರಣವಾಗಿ
ಬಾ ಮಳೆಯೇ ಬಾ.

ಭೂ ತಾಯಿಯ ಬಿಸಿ ನೀಗಿಸು
ಬಾ ಮಳೆಯೇ ಬಾ.
ಪ್ರಕೃತಿಯ ನಗಿಸಲು
ಬಾ ಮಳೆಯೇ ಬಾ.

ಗುಡುಗುತಲಿ ಮಿಂಚುತಲಿ
ಬಾ ಮಳೆಯೇ ಬಾ.
ಕಾಯುತಲಿ ನಿಂತಿಹೆನು
ಬಾ ಮಳೆಯೇ ಬಾ.
       ----ಚಿನ್ಮಯಿ

ಕನಸುಗಳನ್ನು ಹೊತ್ತು ಸಾಗುತ್ತಿರುವೆ

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಮನಸ್ಸಲ್ಲೂ, ಎದೆಯಲ್ಲೂ.
ಕನಸುಗಳನ್ನು ಬೆನ್ನು ಹತ್ತಿರುವೆ
ನಿದ್ರೆಯಲ್ಲೂ, ಎಚ್ಚರದಲ್ಲೂ.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಗುರಿಯನ್ನು ಮುಟ್ಟಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಶ್ರಮದಿಂದ ನನಸಾಗಿಸಲು.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಅವಮಾನಗಳಿಗೆ ಉತ್ತರಿಸಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಅಸಾಧ್ಯವನ್ನು ಸಾಧಿಸಲು.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಜೀವನವ ಸಾರ್ಥಕ ಪಡಿಸಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಸತ್ತ ಮೇಲೂ ಮತ್ತೆ ಬದುಕುವಂತಾಗಲು.
      ----ಚಿನ್ಮಯಿ

ಬದುಕಿನ ಶಿಖರವನೇರಲು ಶ್ರಮವಿರಬೇಕು

ಬದುಕಿನ ಶಿಖರವನೇರಲು ಶ್ರಮವಿರಬೇಕು,
ಏರುತಲಿ ನಮಗೆ ನಾವೇ ಸ್ಪೂರ್ತಿ ಆಗಬೇಕು.
ಬದುಕಿನ ಶಿಖರವನೇರಲು ತಾಳ್ಮೆಯಿರಬೇಕು,
ಏರಿದ ಮೇಲೆ ಬೀಳದೆ ಅಲ್ಲಿಯೇ ನಿಲ್ಲಬೇಕು.

ಬದುಕಿನ ಶಿಖರವನೇರಿದ ಮೇಲೆ ಸರಳತೆಯಿರಬೇಕು,
'ನಾನೇ' ಎಂಬ ಅಹಂಕಾರ ತೊರೆದು ಬಾಳಬೇಕು.
ಬದುಕಿನ ಶಿಖರವನೇರಿದ ಮೇಲೆ ನಡೆದ ಹಾದಿಯ ಜ್ಞಾಪಿಸಿಕೊಳ್ಳಬೇಕು,
ಮರೆತು ಬಾಳಿದರೆ, ಬೀಳುವುದು ಖಚಿತವೆಂದು ಅರಿಯಬೇಕು.
          ----ಚಿನ್ಮಯಿ

Tuesday, May 26, 2020

ಪ್ರತಿದಿನವೂ ಹೊಸ ಬದುಕು

ಪ್ರತಿದಿನವೂ ಹೊಸ ಬದುಕು,
ಹಳೆ ನೆನಪುಗಳ ಹಾದಿಯಲಿ.
ಪ್ರತಿದಿನವೂ ಹೊಸ ಹುರುಪು,
ಛಲ ತುಂಬಿರುವ ಹೃದಯದಲಿ.

ಪ್ರತಿಕ್ಷಣವೂ ಹೊಸ ಬೆಳಕು,
ಅದೇ ಕಣ್ಣಿನ ನೋಟದಲಿ.
ಪ್ರತಿಕ್ಷಣವೂ ಹೊಸ ಹೊಳಪು,
ನಗೆ ಬೀರುವ ಮೊಗದಲಿ.
           ----ಚಿನ್ಮಯಿ

ಎಲ್ಲೊ ಕೇಳಿದಂತಿದೆ ಧ್ವನಿ

ಎಲ್ಲೊ ಕೇಳಿದಂತಿದೆ ಧ್ವನಿ,
ಅದು,
'ಆಕಾಶವಾಣಿಯೋ!'
'ನನ್ನೊಳಗಿನ ದನಿಯೋ!'
ಇದ ಅರಿಯದೆ ಆದೆನು ನಾನು ಮೌನಿ.

ಎಲ್ಲೊ ಕೇಳಿದಂತಹ ಧ್ವನಿ,
ಹೇಳಿತು,
'ಒಳ್ಳೆಯವನಾಗೋ ಮನುಜನೆಂದು.'
'ಧರ್ಮದ ಹಾದಿಯೊಳು ನಡೆ ಮನುಜನೆಂದು.'
ಇದ ಅರಿಯಲು ಆಗಬೇಕು ನಾವು ಧ್ಯಾನಿ.
       ----ಚಿನ್ಮಯಿ

Saturday, May 23, 2020

ಏಕಾಂತ ಹಿತವೆನಿಸುತ್ತಿದೆ!

ಚಿತ್ರಕ್ಕೆ ಪದ್ಯ-೧೨


ಏಕಾಂತ ಹಿತವೆನಿಸುತ್ತಿದೆ
ಪ್ರಶಾಂತ ವಾತಾವರಣದಲ್ಲಿ ಕೂತಿರುವಾಗ.
ಏಕಾಂಗಿ ನಾನಾಗಿರಲು
ನಿನ್ನನ್ನೇ ನೆನೆದೆನು ನಿಸರ್ಗದ ಮಡಿಲಲ್ಲಿ ಈಗ.

ಏಕಾಂತ ಹಿತವೆನಿಸುತ್ತಿದೆ
ಕಾರ್ಮೋಡಗಳ ಕಂಡಾಗ.
ಏಕಾಂಗಿ ನಾನಾಗಿರಲು
ಮಳೆ ಹನಿಯೇ ಸ್ನೇಹಿತನೀಗ.

ಏಕಾಂತ ಹಿತವೆನಿಸುತ್ತಿದೆ
ಆ ಬೆಟ್ಟ ಗುಡ್ಡಗಳ ನೋಡುವಾಗ.
ಏಕಾಂಗಿ ನಾನಾಗಿರಲು
ಮಂಜು ಕವಿದು ಏನೂ ಕಾಣದಂತಾಗಿದೆ ಈಗ.

ಏಕಾಂತ ಹಿತವೆನಿಸುತ್ತಿದೆ
ನೀರಿನ ಶಬ್ಧವ ಕೇಳುವಾಗ.
ಏಕಾಂಗಿ ನಾನಾಗಿರಲು
ಕಣ್ಣೀರು ಜಾರಿ ಆವಿಯಾಯಿತೀಗ.
           ----ಚಿನ್ಮಯಿ

Friday, May 22, 2020

ಅತೀ ಸುಂದರವಾಗಿದೆ


ಚಿತ್ರಕ್ಕೆ ಪದ್ಯ-೧೧

ಅತೀ ಸುಂದರವಾಗಿದೆ ನೋಡಾ
ಬಾನ ಮುಗಿಲಿನ ಚಿತ್ರಣ.
ದಿನಕರ ತೆರಳಲು ಬಾನಂಗಳವು
ಕೆಂಪು-ಹಳದಿ-ಕೇಸರಿಯ ಮಿಶ್ರಣ.

ಅತೀ ಸುಂದರವಾಗಿದೆ ಕೇಳಾ
ಮರ ಗಿಡದೊಳು ಹಕ್ಕಿಗಳ ಇಂಚರ.
ಗಾಳಿಯ ನಾದಕ್ಕೆ ಪದ ಹಾಡುತ
ಬಂದನೋರ್ವ ಇಗ್ಗಾಲಿ ಸವಾರ.
               ----ಚಿನ್ಮಯಿ

ಬಾಂಧವ್ಯ

"ಸೂಚನೆ: ಸಾಹಿತ್ಯಲೋಕ ಹಾಗು ಪುರಾಣದ ಪ್ರಕಾರ ಭೂಮಿ, ಸೂರ್ಯ ಹಾಗು ಚಂದ್ರನ ಸಂಬಂಧ 'ಪ್ರಿಯಕರರ' ರೀತಿಯಲ್ಲಿರುತ್ತದೆ. ಆದ್ದರಿಂದ, ಈ ಕವನವನ್ನು ನನ್ನ ಸ್ವಂತ ಕಲ್ಪನೆ ಎಂದು ಭಾವಿಸಿ. ಇದೊಂದು ಕಾಲ್ಪನಿಕ ಕವಿತೆ (ಕವಿಸಮಯ)."

ಓರ್ವ ಧರಿತ್ರಿಗೆ ಇಬ್ಬರು ಸುತರು
ಅವರೇ ಅಹಸ್ಕರ ಹಾಗು ಶಶಧರ.
ಭೇದ ಭಾವ ತೋರದ ಹೆತ್ತ ಮಡಿಲೇ
ಸಹಬಾಳ್ವೆಯ ಪ್ರೀತಿಯ ಮಂದಿರ.

ಅಗ್ರಜನೇ ಶ್ರೇಷ್ಠನೆಂದು ಶಶಧರ ಹೇಳಿದನು.
ಅನುಜನೇ ಸಮರ್ಥನೆಂದು ಅಹಸ್ಕರ ಹೇಳಿದನು.
ಇಬ್ಬರ ಮಾತುಗಳ ಕೇಳಿ ಖುಷಿಪಟ್ಟಳು ಧರಿತ್ರಿಯು.
ಇಬ್ಬರ ಪ್ರೀತಿಯ ಕಂಡು ಜನನಿಯ ಜನುಮ ಸಾರ್ಥಕವು.
              ----ಚಿನ್ಮಯಿ

Wednesday, May 20, 2020

ಸ್ವರ್ಗ ಹಾಗು ನರಕ

ಸ್ವರ್ಗ:
ಪುಣ್ಯ ಕಾರ್ಯಗಳ ಪ್ರತಿಬಿಂಬವೇ ಸ್ವರ್ಗ.
ಧರ್ಮದ ಹಾದಿಯಲ್ಲಿ ನಡೆದರೆ ಸ್ವರ್ಗ ಪ್ರಾಪ್ತಿ.

ನರಕ:
ಪಾಪ ಕಾರ್ಯಗಳ ಪ್ರತಿಬಿಂಬವೇ ನರಕ.
ಅಧರ್ಮದ ಹಾದಿಯಲ್ಲಿ ನಡೆದರೆ ನರಕ ಪ್ರಾಪ್ತಿ.

ಸತ್ಯಯುಗ, ತ್ರೇತಾಯುಗ ಹಾಗು ದ್ವಾಪರಯುಗದಲ್ಲಿ ಮೇಲಿನ ಹಾಗೆ ನಡೆಯುತ್ತದೆ. ಆದರೆ, ಕಲಿಯುಗದಲ್ಲಿ ಸ್ವರ್ಗ ನರಕ ಎರಡೂ ಇಲ್ಲಿಯೇ.
              ----ಚಿನ್ಮಯಿ

ಕೃಷ್ಣಾರ್ಜುನರ ಸಂಭಾಷಣೆ


ಚಿತ್ರಕ್ಕೆ ಪದ್ಯ-೧೦

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣಾರ್ಜುನರ ನಡುವೆ ನಡೆಯುವ ಸಣ್ಣ ಸಂಭಾಷಣೆಯ ಕುರಿತಾಗಿ ಭಗವದ್ಗೀತೆಯಲ್ಲಿ ಸ್ವತಃ ಭಗವಂತ ಶ್ರೀ ಕೃಷ್ಣನೇ ಬರೆದಿದ್ದಾನೆ. ಇದರ ಅನುಸಾರವಾಗಿ ನನ್ನದೊಂದು ಸಣ್ಣ ಅರ್ಪಣೆ.

ನೀ ಹೇಳೋ ಮಾಧವ.
ನೀ ಹೇಳೋ ಮಾಧವ.
ಯಾಕೀ ಕ್ರೂರ ಕೃತ್ಯವು?
ಯಾಕೀ ಘೋರ ಅಂತ್ಯವು?
ನನಗಾಗದು ಯುದ್ಧ ಮಾಡಲು.
ಜೊತೆಗಾರರ ಮಟ್ಟ ಹಾಕಲು.

ನೀ ಕೇಳೋ ಮಾನವ.
ನೀ ಕೇಳೋ ಮಾನವ.
ಜಗದ ಪಾಲನೆಗೆ ಅನಿವಾರ್ಯ ಈ ಕೃತ್ಯವು.
ಆಗಲಿದೆ ಧರ್ಮದಿಂದ ಅಧರ್ಮದ ಅಂತ್ಯವು.
ನಿನ್ನ ತಪ್ಪೇನಿಲ್ಲ, ನಡೆ ಧರ್ಮದ ಯುದ್ಧಕ್ಕೆ ನೀ ಹೂಡು ಬಾಣವ.
ಎಲ್ಲವೂ ನನ್ನಿಂದಲೇ, ನೀ ಕ್ಷತ್ರಿಯನು ಮರೆಯದಿರು ನಿನ್ನ ಕಾಯಕವ.
              ----ಚಿನ್ಮಯಿ

Tuesday, May 19, 2020

ನಮ್ಮ ಭವ್ಯ ಭಾರತ

ಸನಾತನ ಧರ್ಮದ ಮೂಲಧಾತು ಇದೆ.
ನಮ್ಮ ಭರತವರ್ಷವೇ ಪ್ರಾಣಧಾತು ನಮಗೆ.
ವೇದ, ಪುರಾಣ, ಉಪನಿಷತ್ಗಳ ಜನ್ಮ ಭೂಮಿ ಇದೆ.
ಸಾಧು ಸಂತರಿಂದ ಜ್ಞಾನ ವಿಜ್ಞಾನದ ಏಳಿಗೆ.

ಭಗವಂತನು ಬರೆದ ಭಗವದ್ಗೀತೆಯ ಸ್ಥಾನ ಇದೆ.
ರಾಮಾಯಣದಿಂದ ಸಂಬಂಧಗಳಲ್ಲಿ ಒಳ್ಳೆತನ ಇರಬೇಕೆಂದು (ಹೆಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.
ಶರಣರು ಸಂತರು ಹುಟ್ಟಿದ ಪುಣ್ಯ ಭೂಮಿ ಇದೆ.
ಮಹಾಭಾರತದಿಂದ ಸಂಬಂಧಗಳಲ್ಲಿ ಹಗೆತನ ಇರಬಾರದೆಂದು (ಮಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.

ಸಾಹಿತ್ಯ, ಸಂಗೀತ, ನಾಟ್ಯದ ಮಡಿಲು ಇದೆ.
ಎಷ್ಟೋ ಮೊದಲುಗಳು ಶುರುವು ನಮ್ಮಿಂದಲೇ.
ಕಾವ್ಯ, ಕಲೆ, ಕ್ರೀಡೆಗಳ ಉತ್ಸಾಹದ ಬೇರು ಇದೆ.
ಮೊದಲ ವಿಶ್ವವಿದ್ಯಾಲಯ ಶಿಕ್ಷಣ ಶುರುವು ಇಲ್ಲಿಂದಲೇ.

ಮಾನವೀಯತೆಯ ಜಗಕ್ಕೆ ತಿಳಿಸಿದ ದೇಶ ಇದೆ.
ಆಚಾರ ವಿಚಾರಗಳ ಹೆಮ್ಮೆಯ ಭೂಮಿ ನಮ್ಮದು.
ನಮಗೆ ಯುಗ ಯುಗಗಳ ಇತಿಹಾಸವಿದೆ.
ವೀರ ಶೂರರು ಅಂಜದೆ ಹೋರಾಡಿದ ಭವ್ಯ ಭಾರತವಿದು.

ಕೇಳಿರಿ ಹೇಳುವೆ ಹಾಡುತ.
ಹಾಡಿರಿ ಜೊತೆ ಶೃತಿ ಸೇರಿಸುತ.
ಇದುವೇ ನಮ್ಮ ಭವ್ಯ ಭಾರತ.
ಇದುವೇ ನಮ್ಮ ಭವ್ಯ ಭಾರತ.
                ----ಚಿನ್ಮಯಿ

Saturday, May 16, 2020

ಪಂಚ ಮಹಾ ಭೂತಗಳು


ಚಿತ್ರಕ್ಕೆ ಪದ್ಯ-೯

''ಪೃಥ್ವಿ''ಯೇ ಮಾತೆಯಾಗಿ, ಮನೆಯಾಗಿ
ನಮಗೆ 'ಉಂಗುರದ ಬೆರಳೇ' ಸಂಕೇತ.
'ಮೂಗಿ'ನಿಂದಲೇ ವಾಸನೆಯನ್ನು ಹಿಡಿಯುವಂತೆ
ಪೃಥ್ವಿಯಲ್ಲಿ ಸಮನಾಗಿ ಜೀವಿಸುವುದೇ ನಿಮಿತ್ತ.

"ಜಲ"ವೇ ದೇವನಾಗಿ, ಪ್ರಾಣ ಧಾತುವಾಗಿ
ನಮಗೆ 'ಕಿರು ಬೆರಳೇ' ಸಂಕೇತ.
'ನಾಲಿಗೆ'ಯಿಂದಲೇ ರುಚಿ ಕಂಡು
ಜಲವು ನಮ್ಮೊಳಗೆ ಸೇರುವುದೇ ನಿಮಿತ್ತ.

"ಅಗ್ನಿ"ಯೇ ದೇವನಾಗಿ, ಬಾಳಿಗೆ ಬೆಳಕಾಗಿ
ನಮಗೆ 'ಹೆಬ್ಬೆರಳೇ' ಸಂಕೇತ.
'ನಯನ'ದಿಂದಲೇ ಅಗ್ನಿಯನ್ನು ವೀಕ್ಷಿಸಿ
ನಮ್ಮ ಬಾಳಿನ ದೀಪ ಉರಿಸುವುದೇ ನಿಮಿತ್ತ.

"ವಾಯು"ವೇ ದೇವನಾಗಿ, ಜೀವ ಧಾತುವಾಗಿ
ನಮಗೆ 'ತೋರು ಬೆರಳೇ' ಸಂಕೇತ.
'ಚರ್ಮ'ದಿಂದಲೇ ವಾಯುವನ್ನು ಸ್ಪರ್ಶಿಸಿ
ನಮ್ಮೊಳಗೆ ಸ್ವೀಕರಿಸುವುದೇ ನಿಮಿತ್ತ.

"ಆಕಾಶ"ವೇ ದೇವನಾಗಿ, ರಕ್ಷಣಾ ಕವಚವಾಗಿ
ನಮಗೆ 'ನಡು ಬೆರಳೇ' ಸಂಕೇತ.
'ಕರ್ಣ'ದಿಂದಲೇ ಶಬ್ದವನ್ನು ಗ್ರಹಿಸುವಂತೆ
ಆಕಾಶದಡಿ ಸುರಕ್ಷಿತವಾಗಿರುವುದೇ ನಿಮಿತ್ತ.
             ----ಚಿನ್ಮಯಿ

Wednesday, May 13, 2020

ಕಡಲು

ಅಳಿವೆಯನ್ನು ನೋಡಲು
ತವಕದಿ ನಾ ಕುಣಿ ಕುಣಿದು ಬಂದೆನು.
ಸಿಹಿನೀರು-ಉಪ್ಪುನೀರು ಸಂಗಮವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು‌.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಳಿವೆಯನ್ನು.

ಅಲೆಗಳ ಮಧುರ ನಾದದ
ಸೆಳೆತಕ್ಕೆ ನಾ ಓಡಿ ಓಡಿ ಬಂದೆನು.
ನಿಟ್ಟುಸಿರಿಂದ ಅಲೆಗಳು ನಿಶಬ್ದವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ನಿಶಬ್ದವನ್ನು.

ಮರಳಲ್ಲಿ ಪಾದದ ನಕ್ಷೆಯನ್ನು
ಬಿಡಿಸಲು ಕಾತರದಿ ನಾ ಬಂದೆನು.
ಬಿಡಿಸುವಾಗಲೇ ನಕ್ಷೆಯನ್ನು ಅಲೆಗಳು ಅಳಿಸಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಲೆಗಳನ್ನು.

ಸೂರ್ಯನು ನಾಚುತ ಕರೆದಾಗ
ಗಾಳಿಯಲ್ಲಿ ತೇಲುತ ನಾ ಬಂದೆನು.
ದೂರದಿ ಅಲ್ಲಿ ಎಲ್ಲೋ ಸೂರ್ಯನು ಮುಳುಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು‌.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಸೂರ್ಯನನ್ನು.
               ----ಚಿನ್ಮಯಿ

Sunday, May 10, 2020

ಅಮ್ಮನಿಗೊಂದು ಲಾಲಿ ಹಾಡು

ಜಠರದಲ್ಲೇ ಲಾಲಿ ನಾದವ ಕೇಳಿದೆನು ನಾ ಅಂದು.
ಮಮತೆಯ ಲಾಲಿ ನಾದವ ನಾ ಹಾಡುವೆ ನಿನಗಿಂದು.

ನಿಷ್ಕಲ್ಮಶ ಹೃದಯದ ತಾಯಿಯೇ
ಕಂದಮ್ಮನ ಆರೈಕೆಗೆ ವಾತ್ಸಲ್ಯದ ನೆರಳು.
ಕತ್ತಲಿಂದ ಬೆಳಕಿನ ಕಡೆಗೆ
''ಅ ಆ'' ಕಲಿಸಿ, ಜ್ಞಾನವ ಹೊದಿಸಿ ದೂಡಿದಳು.

ದಿನಕರನ ಪ್ರಕಾಶದಂತೆ ನಗುತ
ಸಂತಸದ ಮಳೆಯನ್ನು ಸುರಿಸಿದಳು.
ಚಂದಿರನ ಹತ್ತಿರ ಕರೆದೊಯ್ಯುವೆ
ಎಂದು ಸಿಹಿ ಸುಳ್ಳು ಹೇಳಿ ಅನ್ನವ ಉಣಿಸಿದಳು.

ಸಮಚಿತ್ತ ಯೋಚನೆ ಮಾಡುತಲಿ
ಸದ್ಭಾವನೆಯ ಮೂಲಧಾತು ಆಗಿದಳು.
ಔದಾರ್ಯವ ಧಾರೆ ಎರೆದು
ಪ್ರಾಜ್ಞವಂತಿಕೆಗೆ ದಾರಿಯ ತೋರಿದಳು.

ಇನ್ನೆಷ್ಟು ಲಾಲಿಯ ಹಾಡಲಿ ನಿನಗೆಂದು
ಹಾಡಲು ಸಾಕಾಗಿ ಬತ್ತಿ ಹೋಯಿತು ಕೊರಳು.
ಲಾಲಿಯ ಹಾಡ ಕೇಳುವ ಬಯಕೆಯಿಂದು
ಕೇಳುತ ನಲಿಯುತ ಸೇರುವೆ ಮಡಿಲು.
             ----ಚಿನ್ಮಯಿ

ನನ್ನ ಕಾಡಿದ ಕನ್ಯೆ

ಇವಳ ಪ್ರತಿ ಮಾತಿನಲ್ಲೂ ಸರಳತೆ,
ಏನಂತ ವರ್ಣಿಸಲಿ ಇವಳೆ ಸೌಂದರ್ಯ ರಾಶಿ.
ಇವಳ ಪ್ರತಿ ನೋಟದಲ್ಲೂ ಮುಗ್ಧತೆ,
ಆಹಾ! ಬಲು ಅಪರೂಪ ಇಂತಹ ರೂಪದರ್ಶಿ.

ನನ್ನ ನಗುವೇ ತಲೆಬಾಗಿತು ಇವಳ ಮುಗುಳು ನಗುವಿಗೆ,
ಇವಳೇ ನನಗೆ ಬಹಳ ಅಚ್ಚುಮೆಚ್ಚಿನ ಗೆಳತಿ.
ನನ್ನ ಹೃದಯ ಕರಗಿತು ಇವಳ ಸ್ನೇಹ ತುಂಬಿದ ಹಿತ ನುಡಿಗೆ,
ಕೇಳೇ ನೀ, ನನಗೆ ನೀನೆಂದರೆ ಬಹಳ ಪ್ರೀತಿ.

ಸಾಮಾಜಿಕ ಕಳಕಳಿಯುಳ್ಳ ಸೌಮ್ಯ ಹೆಣ್ಣು ನೀನು,
ಎಲ್ಲರ ಮೆಚ್ಚುಗೆ ಪಡೆದ ನೀನು ತುಂಟುತನದ ಜಾಣ್ಮೆ.
ಮುದ್ದು ಮುದ್ದಾದ ಗೊಂಬೆಯು ನೀ ನನ್ನ ಅಮ್ಮು,
ಐಶ್ವರ್ಯ ನಿನ್ನ ಹೆಸರು ಹಾಗು ನೀನು ನನ್ನ ಕಾಡಿದ ಕನ್ಯೆ.

           ----ಚಿನ್ಮಯಿ

Girl's beauty

The beauty of the beautiful girl consists of-
Silky hairs,
Dazzy eyes,
Naughty smile,
Hotty style,
Crazy lips,
Curvy hips.
Soulful heart,
Heartful love.
What a beauty😍
           ----chinmayi

Collab 2 with fellow mates

ಕಳೆದುಹೋದ ಹಳೆಯ ಲೇಖನಿಯೊಮ್ಮೆ ದೊರೆತರೆ,
ಪದಗಳ ಕಳೆಯದೆ ಲಿಪಿಯ ಲಿಖಿಸುವೆ.
      ----ಶರ್ಮಾದಿತ್ಯ

ನನ್ನ ಪ್ರೀತಿಯ ಅದರಲ್ಲಿ ಬಿಂಬಿಸುವೆ,
ಮನದಾಳದ ಮಾತನ್ನು ವರ್ಣಿಸುವೆ...!
            ----ಸೂರ್ಯ ಕಿರಣ್

ಖಾಲಿ ಹಾಳೆಯೊಂದು ಜೊತೆ ಸಿಕ್ಕರೆ,
ಕನ್ನಡ ನಿಘಂಟನ್ನು ಸಹ ಮುದ್ರಿಸುವೆ.
           ----ಚಿನ್ಮಯಿ

ಮುದ್ರಿಸುವಾಗ ಅರ್ಥಗಳೊಡನೆ ಭಾವನೆಯನ್ನು ಸೇರುಸುವೆ,
ಅವರಿವರೆಂಬ ಭೇದವಿಲ್ಲದೆ ಓದುಗರಿಗೆಲ್ಲ ಹಂಚುವೆ.
           ----ಕಿರಣ್
                 
ಹಿಂತಿರುಗುವಾಗ ಮನದೊಳಗೆ ಖುಷಿ ಪಟ್ಟು,
ಕನ್ನಡದ ಪ್ರೇಮವ ನಾ ಸಾರಿ ಹೇಳುವೆ.
          ----ರಘು

ಸಾರಿ ಹೇಳುವಾಗ ಓದುಗರ ಮನಃ ಮುಟ್ಟುವೆ,
ಕನ್ನಡದ ಪ್ರೇಮವ ನೆನಪಿಸಿ ಸಂತಸ ಪಡಿಸುವೆ.
           ----ಹೇಮ್

*ಶರ್ಮಾದಿತ್ಯ*🤝🏽 *ಸೂರ್ಯ ಕಿರಣ್* 🤝🏽 *ಚಿನ್ಮಯಿ* 🤝🏽 *ಕಿರಣ್* 🤝🏽 *ರಘು* 🤝🏽 *ಹೇಮ್*💛❤️

Collab 1 with fellow mates

Singing a song without feeling is of no meaning.
----chinmayi

Like wise,
Doing anything without feeling is of no meaning.
----manahshaayi

And also,
Living a life without feeling is of no meaning.
----Kiran

Then also,
Writing a quote without feeling is of no meaning
----RAgHU

Seeking excuses without trying for opportunities is of no meaning...
----Sharmaditya

Loving without any feeling is of no meaning...🖤
----Surya kiran

*Chinmayi* 🤝🏽 *manahshaayi* 🤝🏼 *Kiran* 🤝🏽 *RAgHU* 🤝🏽 *sharmaditya* 🤝🏽 *Surya kiran*💛❤️

Feelings of a song

Singing a song without feeling is of no meaning.
       ----chinmayi

ಸ್ನೇಹ ಹಾಗು ಪ್ರೀತಿ

ಸ್ನೇಹ ಎರಡಕ್ಷರದ ಪದ, ಎಲ್ಲಿ ನೋಡಿದರೂ ಉಲ್ಲಾಸಕರ,
ಪ್ರೀತಿ ಎರಡಕ್ಷರದ ಕಂಬನಿ, ಸ್ನೇಹಕ್ಕೆ ಪ್ರೀತಿಯೇ ಸಹಕಾರ.
             ----ಚಿನ್ಮಯಿ
ಸ್ನೇಹದ ಕಡಲಲ್ಲಿ ಯಾವಾಗಲೂ ನಾವು ತೇಲುತ್ತಲೇ ಇರಬೇಕು, ಯಾವತ್ತೂ ನಾವು ಅದರಲ್ಲಿ ಮುಳುಗಿ ಹೋಗಬಾರದು.
          ----ಚಿನ್ಮಯಿ

          ----ಚಿನ್ಮಯಿ

ಕೊರೊನ ಸಮಯದ ಯುಗಾದಿ

ಸದ್ಯದ ಪರಿಸ್ಥಿತಿಯಲ್ಲಿ, ಯುಗಾದಿಯೋ ಅಥವಾ ಯುಗಾಂತ್ಯವೋ ತಿಳಿಯುತ್ತಿಲ್ಲ.!
ಅದೇನೇ ಆದರೂ ಎಲ್ಲಾ ಒಳ್ಳೆಯದೇ ಆಗುತ್ತದೆಂದು ಅಪಾರ ನಂಬಿಕೆ ನಮಗೆ ಇದೆಯಲ್ಲ.

ದೈವದ ಕೃಪೆಯಿಂದ 'ಸರ್ವೇ ಜನಾಃ ಸುಖಿನೋ ಭವಂತು' ಎಂದು,
ಈ ಯುಗಾದಿಯಿಂದಾದರು ಜನರೆಲ್ಲರೂ ಒಳ್ಳೆಯ ಬುದ್ದಿ ಕಲಿಯಲೆಂದು,
ಆಶಿಸುತ್ತಾ,

ಎಲ್ಲರಿಗೂ ಚಂದ್ರಮಾನ ಯುಗಾದಿಯ ಶುಭಾಶಯಗಳನ್ನು ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುವೆ.

           ----ಚಿನ್ಮಯಿ

Social distancing for Corona Virus

Let's all join hands to create awareness for Corona Virus🤝🏽.
But shldn't join hands to spread Corona Virus😂🙏🏽.
                 ----chinmayi

Marks v/s Knowledge

Marks doesn't define anyone's ability.
Marks may prove who's intelligent, but doesn't prove who's intellectual which is actually needed.
Make up your mind. Knowledge is essence, marks is nonsense.
                   ----chinmayi

Collection of small kannaDa quotes

ನಗುತಾ ಇರುವೇ ಒಳಗು ಹೊರಗು,
ನಿನಗೆಂದೆಯೇ ಹಗಲು ಇರುಳು.
                     ----ಚಿನ್ಮಯಿ
ನಗು ಚೆಂದ ಮೊಗದಿಂದ,
ನುಡಿ ಚೆಂದ ಬಾಯಿಂದ,
ದನಿ ಚೆಂದ ಕರ್ಣದಿಂದ,
ಖುಷಿ ಕೊಡುವೆ ಪ್ರೀತಿಯಿಂದ.
                    ----ಚಿನ್ಮಯಿ😊
ಜೀವನದ ಅಲೆಗಳಲ್ಲಿ ಏರು-ಪೇರು.
ಒಮ್ಮೆ ಸುಖ, ಒಮ್ಮೆ ದುಃಖ.
ಸಾವಿನ ಆಚೆಯು ಬದುಕು!?
ಜೀವನ ಬಹಳ ನಿಗೂಡ.!
                  ----ಚಿನ್ಮಯಿ
ಮರೆಯಲಾಗದ ಅನುಭವದ ಜೊತೆಯಲ್ಲಿ ಸ್ವಲ್ಪ ಮಸ್ತಿ-ಕುಸ್ತಿ.
ಈ ಕಣ್ಣಂಚಿನಲ್ಲಿ (ಬಿಂಬಗ್ರಾಹಿಯಲ್ಲಿ) ಸೆರೆಯಾದ ನೆನಪುಗಳ ಚಿತ್ರವೇ ನಮ್ಮೀ ಸ್ನೇಹದ ಸೃಷ್ಟಿ-ದೃಷ್ಟಿ.
                 ----ಚಿನ್ಮಯಿ

               ----ಚಿನ್ಮಯಿ

Collection of small English quotes

Temperature goes high when I enter,
Cuz Am an Hot Guy and an Hunter...🔥🔥
                 ----chinmayi
Life is Awesome, but, I'm a BESHARAM,
Go around the World to seek, the knowledge upto the Peak...!😁
               ---chinmayi
Stay Stylish,
Stay Youngest,
Stay Happy,
Stay Bold,
Stay On.
         ----chinmayi
Natural healing in Nature for heart's beneath feeling...!‌
                    ----chinmayi
Smile so that your inner sickness gets cured,
Laugh so that your outer sickness gets cured.
                    ----chinmayi
Smiling always is the only Key to Happiness I'm blessed with😀❤️
                      ----chinmayi
Adventure is something that makes me to get everything💓.
               ----chinmayi
When sun kisses us, our smile makes applause.
                     ----chinmayi
Smiling reduces Sickness, so i always keep a smile on my face 😊
             ----chinmayi
Sometimes,
Inner smile bestows happiness😊,
Outer smile bestows pain...!🙂
              ----chinmayi
Deal everything in one Smile😁
             ----chinmayi
Just smile and keep smiling always😄😀✌️
             ----chinmayi
Smiling is the only thing ik to survive amongst the fake people around me😀.
                ----chinmayi
Peaceful Mind + Happy Mood = Pleasant Day😀
            ----chinmayi
Styling is my work.
Focusing is photographer's work.
Watching, Liking and Commenting is their work.
            ----chinmayi
When you smile, it is like performing Magic with some Logic, because our smile could be the main reason for someone else's happiness...
So always keep a smile😃😉
                ----chinmayi
Feel the weather like you feel yourself 😁
               ----chinmayi
Laughter is the best Medicine but laughing in the midst of fog at Nandi Hills is the best Feeling 😁😊
             ----chinmayi
Slayers nd Stalkers are my Body Guards😎
             ----chinmayi
MATHS is such an amazing subject because, It explains that "TEEN" or "TEENAGE" starts from THIR'TEEN1⃣3⃣ and ends with NINE'TEEN1️⃣9⃣.
Logically accepted👍🏽😉.
          ----chinmayi
Born with CLASS 😁,
Blessed with MASS 😎,
Now with GLASS 🤓.
             ----chinmayi
Behind me Nature 😍
Beside me Teacher.
Henceforth bright is my Future.
                  ----chinmayi

          ----chinmayi

Old life and Present life

I feel, life was much better and happier when we were in our childhood days.
There existed zero- ego, sadness, wickedness and only innocence and happiness were surrounded between all of us.

We have lost those golden days and now those are only the remains of our golden memories.
The old footprints doesn't erase so easily and will remain always as our life's happiest moments.

I personally miss the old me and I wish I could go back and live the old life which I love the most.
But, this doesn't happen and this is how life is and we have to just go with the flow and live the present life to our best.

The least we can do is to live the life happily further on by remembering and learning from our beautiful old days.
Let's make our lives even more beautiful and meaningful by not living as human being rather let's try to live as being human always.
           
                  ----chinmayi

Never ever give up and don't loose hopes

Every successful person was once nobody.
Calm down if you fail, learn from the mistakes, but don't repeat the same mistakes.
Don't worry and just give an another try and if u fail again, just try again until u succeed.
Never ever give up and never ever loose hopes.
                   ----chinmayi

The Power of Music

One song and one music can change anything in this world and can even manipulate any mood of any person either into positive or negative.

Music has that power.

----chinmayi

Stop complaining

Live the life with what you have got to the fullest. Be happy with what you have.
Don't over think, don't expect anything, don't worry at all.
Stop complaining.
Just smile and just be happy always.
                  ----chinmayi

Life's fulfilment

Live your life for the fullest for these four beautiful souls-
1) Yourself.
2) The one and only, Almighty.
3) Your Father.
4) Your Mother.
               ----chinmayi

ನಾ ಕಂಡ ೨೦೧೯

ಆಗ ತಾನೇ ಶುರುವಾಗಿತ್ತು ಇಸವಿ ಎರಡು ಸಾವಿರ ಹತ್ತೊಂಬತ್ತು (೨೦೧೯).
ಹೊಸ ಹುಮ್ಮಸ್ಸಿನಿಂದ ಆಸೆ ಪಟ್ಟಂತೆ ಮಾಡುವ ಕೆಲಸಗಳು ತುಂಬಾ ಇತ್ತು.

ದಾರಿಯುದ್ದಕ್ಕೂ ಸತತ ವೈಫಲ್ಯ, ಅವಮಾನದ ಸುರಿಮಾಲೆ.
ಏನು ಆಗುತ್ತಿಲ್ಲವೆಂದೆನಿಸಿ ಸುರಿಸಿದೆನಾ ಕಣ್ಣೀರಿನ ಮಳೆ.

ತುಂಬಾ ಪ್ರಯತ್ನಿಸಿದರೂ ಆಗುತ್ತಿರಲ್ಲಿಲ್ಲ ಸಾಧಿಸೋ ಕೆಲಸಗಳು.
ಆದರೆ ಅನಿಸಿತು, ಹೀಗೇ ಕೊರಗಿದರೆ ನೆರವೇರಲ್ಲ ನಾ ಕಂಡ ಕನಸುಗಳು.

ಸತತ ಪ್ರಯತ್ನ ಬಿಡದ ನಾನು ಮುನ್ನುಗ್ಗಿದೆ ದೇವರನ್ನ ನಂಬಿ.
ಕೊನೆಗೆ, ಒಂದು ದಿನ ಎನ್ನ ಪ್ರಯತ್ನಕ್ಕೆ ಖುಷಿಯ ಕಣ್ಣೀರು ಬಂತು ಕಣ್ಣ್ತುಂಬಿ.

ನಾ ಕಂಡ ೨೦೧೯, ನೋವು-ನಲಿವು ತೋರಿಸಿ, ಕಷ್ಟವ ಎದುರಿಸಿ ಸಾಧನೆಯ ದಾರಿ ಸೇರಲು ಹೇಳಿಕೊಟ್ಟು ಕಣ್ಮರೆಯಾಯಿತು.
ನಾ ಕಾಣುವ ೨೦೨೦, ಮುಂಬರುವ ಮತ್ತಷ್ಟು ಕಷ್ಟವ ಎದುರಿಸಿ ಸಾಧನೆಯ ತುದಿಗೆ ಸಾಗಲು ನೆರವಾಗುತ್ತದೆಂದು ಆಶಿಸುವೆನು.

ಆಂಗ್ಲ ಹೊಸ ವರ್ಷದ (೨೦೨೦) ಶುಭಾಶಯಗಳು.
             
                  ----ಚಿನ್ಮಯಿ

Over expectation hurts

Over expectation hurts more than anything in reality😔
             ----chinmayi

ಹರ್ಷಿತ💛❤

ಸೊಗಸಿಗು ನಾಚಿಕೆ ಮೂಡಿಸುವಂತಹ ಸೊಗಸು ನೀ.
ಮನಸಿಗೆ ಹತ್ತಿರ ನೀನ್ನೊಬ್ಬಳ್ಳೆ ಇನ್ಯಾರಿಲ್ಲ ಕೇಳೆ ನೀ.

ಅಂದದ ಅರಸಿಯೇ ಬೆಳಕಾಗು ನನ್ನಯ ಬಾಳಿಗೆ ಹರ್ಷದಿಂದ,
ಇರುವೆನು ಸಾವಿರಾರು ವರುಷ ಹೀಗೆಯೇ ಕಾಯುತ ಕಣ್ಣಿನಿಂದ.

ಸದಾಕಾಲ ಖುಷಿಯಿಂದ ಬಾಳುವೆವು ಚಿಂತೆ ಬೇಡ ಬಾರೇ ಹರ್ಷಿತ,
ಕೊನೆವರೆಗೂ ಕಾಪಾಡುವೆನು ಭಯ ಬೇಡ ನಂಬು ನಾ ನಿನ್ನ ಸ್ನೇಹಿತ.
                    ----ಚಿನ್ಮಯಿ

Failure is a must for achieving success

You have to FAIL to learn.
You have to FAIL to earn.
You have to FAIL to believe.
You have to FAIL to achieve.
            ----chinmayi

ಎಣ್ಣೆ ಸಹವಾಸ

ಅಭ್ಯಾಸ ಇದೆಲ್ಲಾ ಎಣ್ಣೆ ಸಹವಾಸ.
                    ----ಚಿನ್ಮಯಿ

Don't get excited for praises

I've seen many people praise when we do some works, it's ok let dem praise but the person who finds out mistake in that good work which u have done also is the person who is really true for u and is helping u to become better person. Don't believe those people who praise u always, Dey might be telling lies to u also
                 ----chinmayi🙏🏼

ದೀಪಾವಳಿ

ಬೆಳಕಿನ ಸ್ಪರ್ಶವು ನಿಮ್ಮ ಮನೆಯಲ್ಲಿ,
ಖುಷಿಯ ಅಮಲು ನಿಮ್ಮ ಮನದಲ್ಲಿ ವಾಸವಾಗಲಿ ಎಂದು ಆಶಿಸುತ್ತಾ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕೋರುವೆ.
          ----ಚಿನ್ಮಯಿ

Knowledge of asking

It's better to ask the best person about the best things to do.
                      ----chinmayi

ಮೋದಿಜಿ

ಎಲ್ಲೆಲ್ಲಿಯೂ ಕೇಸರಿಯ ಸೊಬಗು,
ನೋಡಿರಿ ಮೋದಿಯವರ ಸಾಮರ್ಥ್ಯದ ಹುರುಪು.
              ----ಚಿನ್ಮಯಿ🧡

ಪೋಲಿ ಕವಿತೆ

ಚೆಲುವೆ ನಿನ್ನದು ಉದ್ದನೆಯ ಜಡೆ,
ಸ್ವಲ್ಪ ಅಗಲಿಸಬಾರದೇ ನಿನ್ನ ತೊಡೆ,
ನಾನು ಸಮೀಪಿಸುವೆ ನನ್ನಯ ತೊಡೆ,
ಕೊಂಚವು ಅಲುಗಾಡದಿರು ಆಕಡೆ-ಈಕಡೆ,
ಕೊನೆಗೆ ನಾ ಕೊಡುವೆ ಶಕ್ತಿಶಾಲಿಯ ಪಡೆ....
                 ----ಚಿನ್ಮಯಿ

ಅಮ್ಮ

ನನ್ನ ಜೀವ ನೀನೇ ಅಮ್ಮ,
ಈ ಜೀವಕ್ಕೆ ಸ್ಪೂರ್ತಿ ನಿನ್ನ ನಡೆ-ನುಡಿ.
ಹುಣ್ಣಿಮೆ ಚಂದಿರ ತೋರಿಸಮ್ಮ,
ನಿನ್ನ ಕಂಕುಳಲ್ಲಿ ಕೂರುವೆ- ಇದೇ ನನ್ನ ವರದಿ.
ನಿನ್ನ ಮಗ-ಸ್ನೇಹಿತ ಎರಡೂ ನಾನಮ್ಮ,
ಜೋಗುಳದ ಶಬ್ದವೇ ಹಿತವಾದ ನಾಣ್ಣುಡಿ.
                 ----ಚಿನ್ಮಯಿ

Saturday, May 9, 2020

ಎರಡನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ದೇವನೊಲಿಸುವ ಮಾರ್ಗ (ಭಕ್ತಿ ಗೀತೆ).
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).

ದೇವನೊಲಿಸುವ ಮಾರ್ಗವೂ ಸರಳ
ಅದಕ್ಕೇತಕೆ ತಕರಾರು ಗೆಳೆಯ!
ಮಾಡಬೇಕಿರುವ ಕೆಲಸವೂ ಬಹಳ
ಅದರಲ್ಲಿಯೇ ದೈವದ ನಿಲಯ. ||ಪ||

ಕಾಣದ ದೇವರಿಗಾಗಿ ಹುಡುಕಾಟ
ಕಾಣದಿದ್ದರೂ ಸುಮ್ಮನೆ ಪರದಾಟ.
ಬಿಡು ಇವೆಲ್ಲವ, ಕೇಳೊಮ್ಮೆ ಮನುಜ.
ನಮ್ಮೆಲ್ಲರ ಅಣು ಅಣುವೂ ಅವನೆ
ನಮ್ಮೊಳಗಿನ ಆತ್ಮವೂ ಪರಮಾತ್ಮನೆ
ಎಲ್ಲಾ ಜೀವರಾಶಿಯೂ ಮಾಧವನೆ. ||೧||

ಕಾಣದ ದೇವರಿಗಾಗಿ ನರಳಾಟ
ಕಂಡರೂ ಗುರುತಿಸದೆ ಒದ್ದಾಟ.
ಬಿಡು ಇವೆಲ್ಲವ, ಕೇಳೊಮ್ಮೆ ಮನುಜ.
ರೈತನ ಬೆವರಿನ ಹನಿಯೇ ಅವನು
ಬಡವನ ಹಸಿದ ಜಠರವೇ ಶಿವನು
ಬಾಯಾರಿದವನ ನಾಲಿಗೆಯೇ ಹರನು. ||೨||

ದೇವಸ್ಥಾನವೊಂದು ನೆಮ್ಮದಿಯ ಗೂಡು
ಗುಡಿಯಲ್ಲಷ್ಟೇ ದೇವರ ಹುಡುಕಿ ಆಗಬೇಡ ಕುರುಡು.
ಇದ ಅರಿತು, ಕೇಳೊಮ್ಮೆ ಮನುಜ.
ಮನೆಯೇ ದೇವಾಲಯದ ಸಂಕೇತವೋ
ಮನಸ್ಸಳೊಗೆ ದೈವದ ನಿವಾಸವೋ
ಅವನಿರದ ಜಾಗವೇ ಇಲ್ಲವೋ. ||೩||

ಪೂಜೆ ಪುನಸ್ಕಾರಗಳಷ್ಟೇ ಸಾಲದು
ಇರಬೇಕು ಅಂತರಂಗ ಶುದ್ಧತೆಗೆ ಒಲವು.
ಇದ ಅರಿತು, ಕೇಳೊಮ್ಮೆ ಮನುಜ.
ಭಿಕ್ಷುಕನ ಕೂಗಲ್ಲಿ ಇರುವರು ಹರಿಹರ
ಅಂತರಂಗ ಶುದ್ಧತೆಯೇ ಈಶ್ವರ
ಬಹಿರಂಗ ಶುದ್ಧತೆಯೇ ಪರಮೇಶ್ವರ. ||೪||
              ----ಚಿನ್ಮಯಿ

ಮೊದಲನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಮೋಸಗಾರ.
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).

ಗಮನ ಸೆಳೆವ ಅಂದಗಾರ, ಕನಸ ಕದಿಯೋ ಜಾದುಗಾರ ನನ್ನೀ ರಾಜಕುಮಾರ.
ಕುಣಿತ ನೋಡಿ ಸೋತೇ ಈಗ, ಸನಿಹ ಒಮ್ಮೆ ಬಾರೋ ಬೇಗ ನನ್ನೀ ಜೋಕುಮಾರ. ||ಪ||

ಕನಸು ನನಸಾಯಿತು ಬೇಗನೆ, ಎದೆಯಲ್ಲಿ ಶುರುವು ನಿವೇದನೆ.
ನೀನೇ ನನ್ನ ಕುಣಿತದ ಜೊತೆಗಾರ,ಜೊತೆ-ಜೊತೆಗೆ ಮನಸ್ಸಿನ ರಾಯಭಾರ. ||೧||

ಸುಂದರ ಭಾವನೆ ನೀನೇ, ಹಾಡಿನ ಭಾವವು ನೀನೇ.
ಕೊಂಚ ನಾಚಿಕೆಯ ತೋರೆ, ಸಂಗೀತ ನಾದಕ್ಕೆ ಹೆಜ್ಜೆ ಹಾಕುವ ಬಾರೇ. ||೨||

ಗಮನ ಸೆಳೆವ ಅಂದಗಾರ, ಕನಸ ಕದಿಯೋ ಜಾದುಗಾರ ನನ್ನೀ ರಾಜಕುಮಾರ.
ಕುಣಿತ ನೋಡಿ ಸೋತೇ ಈಗ, ಸನಿಹ ಒಮ್ಮೆ ಬಾರೋ ಬೇಗ ನನ್ನೀ ಜೋಕುಮಾರ. ||ಪ||

ಸಲಿಗೆಯ ನೀಡೆಂದು ಕೇಳುವೆ ಏಕೇ?
ಪ್ರೀತಿಗೆ ಮೋಸವ ಮಾಡಿದೆ ಏಕೇ?
ಕಾಮದ ಆಸೆಯು ಬಂದಿತೆ ನಿನಗೆ?
ನನ್ನಯ ಪ್ರೀತಿಗೆ ಇದುವೆಯಾ ಕೊಡುಗೆ? ||೩||

ತಪ್ಪು ಮಾಡಿದೆ ನಾ ಪ್ರೀತಿಸಿ ನಿನ್ನ,ಮೋಸ ಮಾಡಿತು ಈ ಕನಸ್ಸು ನನ್ನ.
ಕಾಮದ ವಸ್ತುವಲ್ಲ ಹೆಣ್ಣು ಎಂದು,ತೋರಿಸಿದೆ ನಾ ಎಲ್ಲರಿಗು ಇಂದು. ||೪||

ಕನಸ ಸರಿಸಿ ಮುಂದೆ ಹೋದೆ, ಮನಸ ನೋವನು ಮರೆತುಹೋದೆ ನಾನೇ ರಾಜಕುಮಾರಿ.
ಹೆಣ್ಣಿನ ಶಕ್ತಿ ಏನು ಎಂದು, ತೋರಿಸಿಕೊಟ್ಟ ನಾನು ಇಂದು ಆದೆನು ಮಾದರಿ.||ಪ||
                  ----ಚಿನ್ಮಯಿ

ಹನ್ನೊಂದನೆ ಮರು ಸಾಹಿತ್ಯ ಬರವಣಿಗೆ

ಹಾಡು: ನಿನ್ನಿಂದಲೇ ನಿನ್ನಿಂದಲೇ.
ಚಿತ್ರ: ಮಿಲನ.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

ಸದ್ದಿಲ್ಲದೆ ಸದ್ದಿಲ್ಲದೆ ಸಿಹಿಯಾದ ಸ್ವರ ಕೇಳಿತು,
ಸದ್ದಿಲ್ಲದೆ ಸದ್ದಿಲ್ಲದೆ ಖುಷಿಯಾದ ಮೊಗ ಕಂಡಿತು.
ನೀ ಕನಸಲ್ಲಿ ಕರೆಮಾಡಿ ಹಾಡಾಡಲು ಮೈಮರೆತಂತೆ ಈ ರಾಗ ಇಂಪಾಗಿದೆ,
ಒಮ್ಮೆ ಎದುರಾಗಿ ಎದೆಯಾಳವ ಸೇರಲು ಈ ಹಾಡಿಂದು ಜೀವಂತ ಸದ್ದಿಲ್ಲದೆ.
ಸದ್ದಿಲ್ಲದೆ ಸದ್ದಿಲ್ಲದೆ ಸಿಹಿಯಾದ ಸ್ವರ ಕೇಳಿತು,
ಸದ್ದಿಲ್ಲದೆ ಸದ್ದಿಲ್ಲದೆ ಖುಷಿಯಾದ ಮೊಗ ಕಂಡಿತು.

ಸೊಗಸಾದ ಮನಸ್ಸುಳ್ಳ ಮಾಯೇ ನೀನು ನೋವಲ್ಲು ನಗುವಲ್ಲು ಸಮ ಪಾಲು,
ನಿನ್ನಂತೆಹೆ ಯಾರು ಇಲ್ಲ ಎಂದು ಕಣ್ಣಿಂದು ಗೀಚಿತು ಪದ ಸಾಲು.
ಓ ಜೀವವೇ ಬಾ ಸನಿಹವೆ ಸೇರೆಂದು ಮನಃ ಹೇಳಿತು,
ಸದ್ದಿಲ್ಲದೆ ಸದ್ದಿಲ್ಲದೆ ಸಿಹಿಯಾದ ಸ್ವರ ಕೇಳಿತು.

ಏನಂಥ ಹೇಳಲಿ ನಾನು ಈಗ ಜೇನಂತ ಅಧರದ ಕುರಿತಾಗಿ,
ಬಾನಿನ ರವಿ ಕೂಡ ಸೋತು ಹೋದ ಹಲವೊಮ್ಮೆ ನಾಚುತ ನಿನಗಾಗಿ.
ಹದ್ದಿಲ್ಲದೆ ಗುದ್ದಾಡಲು ಮತ್ತೊಮ್ಮೆ ಮಜ ಮೂಡಿತು.
ಸದ್ದಿಲ್ಲದೆ ಸದ್ದಿಲ್ಲದೆ ಸಿಹಿಯಾದ ಸ್ವರ ಕೇಳಿತು.

ನೀ ಕನಸಲ್ಲಿ ಕರೆಮಾಡಿ ಹಾಡಾಡಲು ಮೈಮರೆತಂತೆ ಈ ರಾಗ ಇಂಪಾಗಿದೆ,
ಒಮ್ಮೆ ಎದುರಾಗಿ ಎದೆಯಾಳವ ಸೇರಲು ಈ ಹಾಡಿಂದು ಜೀವಂತ ಸದ್ದಿಲ್ಲದೆ.
ಸದ್ದಿಲ್ಲದೆ ಸದ್ದಿಲ್ಲದೆ ಸಿಹಿಯಾದ ಸ್ವರ ಕೇಳಿತು,
ಸದ್ದಿಲ್ಲದೆ ಸದ್ದಿಲ್ಲದೆ ಖುಷಿಯಾದ ಮೊಗ ಕಂಡಿತು.
             
                  ----ಚಿನ್ಮಯಿ

ಹತ್ತನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸಾಮಜವರಗಮನ (ತೆಲುಗು).
ಚಿತ್ರ: ಅಲಾ ವೈಕುಂಠಪುರಂಲೋ.
ಮೂಲ ಸಾಹಿತ್ಯ: ಸಿರಿವೆನ್ನೆಲಾ ಸೀತಾರಾಮಶಾಸ್ತ್ರೀ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಬಾ ಬೇಗನೇ ಬಳಿಗೆ ಸಾಗೋಣ ಜೊತೆಜೊತೆಗೆ ಇರಲು.
ಕಣ್ಣ ಹೊಳಪಿನಿಂದ ಸರಿಸೆ ಹಾಗೆ ಮುಖದ ಮುಂಗುರುಳು.
ಓ ಮನಸೇ ಕಾಯಲು ನಾನಿರುವಾಗ ಏಕೇ ಈ ಕೊರಗು!
ಸದಾ ಕಾಯುತ ಜೊತೆ ಕನಸಿನಲ್ಲೂ ಇರುವೆನು ಕೊನೆವರೆಗು.

ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.
ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಪ್ರೇಮವೆ ಹೂರಣ ಕೇಳದು ಕಾರಣ ಗತಿ ಬದಲಿಸುವಾ
ಸಮಯ ಸ್ವಂತ ಎಂದಿಗೂ ನಮದೆ.
ಹಾಡಿನ ಮೂಲಕ ನಿನ್ನಯ ಮೋಹಕ ಏನಂತ ಬಣ್ಣಿಸಿದರು ಕೂಡ ಭಾಷೆಗೆ ಸಿಗದೆ!
ಸರಿ ತಪ್ಪೇನೆ ಇದ್ದರು, ನಾ ನೀನು ಇಬ್ಬರು ಜೊತೆಯಲೇ ಇರುವೆವು ಬಾರೇ.
ಯಾರೇನೇ ಅಂದರು, ನೀನೆಲ್ಲೇ ಇದ್ದರೂ ಬರುವೆ ನಾನು ಬಿಡೆನು ನಿನ್ನ ಸೇರುವೇ ಕೇಳೇ.

ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.
ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..
ಬಾ ಬೇಗನೇ ಬಳಿಗೆ ಸಾಗೋಣ ಜೊತೆಜೊತೆಗೆ ಇರಲು.
ಕಣ್ಣ ಹೊಳಪಿನಿಂದ ಸರಿಸೆ ಹಾಗೆ ಮುಖದ ಮುಂಗುರುಳು.

             ----ಚಿನ್ಮಯಿ

ಒಂಭತ್ತನೆ ಮರು ಸಾಹಿತ್ಯ ಬರವಣಿಗೆ

ಹಾಡು: ಮಾಟೇ ವಿನದುಗ (ತೆಲುಗು).
ಚಿತ್ರ: ಟ್ಯಾಕ್ಸಿವಾಲ.
ಮೂಲ ಸಾಹಿತ್ಯ: ಕೃಷ್ಣ ಕಾಂತ್.

ನನ್ನ ಸನಿಹವೇ (ನನ್ನ ಸನಿಹವೇ),
ನನ್ನ ಸನಿಹವೇ (ನನ್ನ ಸನಿಹವೇ).

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ನೀ ಕದ್ದೆಯ ಕನಸ ಕನವರಿಕೆ ಈಗ...?
ನಾ ಎದ್ದೆನು ನೆನೆದು ನಿನ್ನ ಕಣ್ಣಾಗ.

ನನ್ನ ಸನಿಹವೆ ಸನಿಹವೆ ಸನಿಹವೆ, ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ನೀ ಕದ್ದೆಯ ಕನಸ ಕನವರಿಕೆ ಈಗ...?
ನಾ ಎದ್ದೆನು ನೆನೆದು ನಿನ್ನ ಕಣ್ಣಾಗ.

ಸಣ್ಣ ಸಣ್ಣ ಸಣ್ಣ ಬವಣೆ ಸರಿಸುವೆ ನಾ ನಿನಗೆಂದೇ,
ಸಾಕು ತೋರಿಸೆಯ ಅಂದದ ಮೊಗ ಇಂದೇ?
ಆಆಆಆ...
ಗಾಯಕ ಆಗುವೆ ನೀ ಬರೆದ ಹಾಡಿಗೆ,
ಹಾಡಿನ ಭಾವಕ್ಕೆ ಸಂಗೀತ ನೀಡೆಲೆ.

ಕಣ್ಣ ಮುಂದೆ ನೀನು, ಹಾದು ಹೋಗು ಇನ್ನು, ಮರೆಯದೆಲೇ ಕೊಂಚ ಮರೆಯದೆಲೇ.
ಏನೇ ಆದರೂನು, ಯಾರೇ ಬಂದರೂನು ಪ್ರೀತಿಸುವೆ ಸದಾ ಜೊತೆಯಿರುವೆ.
ಎದೆಯಲ್ಲಿರೊ ಹೆಸರ ಉಸಿರಲ್ಲಿ ತುಂಬಿ, ಖುಷಿಯಿಂದ ಕುಣಿದಾಡೋ ಕ್ಷಣವದುವೇ ಬಂತು.

ನನ್ನ ಸನಿಹವೆ ಸನಿಹವೆ ಸನಿಹವೆ, ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ಅಪರೂಪದ ವಿನಿಮಯ, ಇಂದಿಗೂ ಸವಿನಯ.
ಎಂದೂ ಕೊರಗದೆ ನನ್ನನೇ ಸೇರು ನೀ....
                         ----ಚಿನ್ಮಯಿ

ಎಂಟನೆ ಮರು ಸಾಹಿತ್ಯ ಬರವಣಿಗೆ

ಹಾಡು: ಯಾರೋ ನಾನು.
ಚಿತ್ರ: ನಟಸಾರ್ವಭೌಮ.
ಮೂಲ ಸಾಹಿತ್ಯ: ಕವಿರಾಜ್.

ಆರಂಭ ಇಂದೆ ಆರಂಭ, ಸಣ್ಣ ನಗವು ಹರಿದು ಕಾಂತಿ ಹಾಗೇ ಆರಂಭ.
ಮಾತಲ್ಲೇ ನಿನ್ನ ಮಾತಲ್ಲೇ ಸಿಹಿಯ ಸಮತೆ ಕಂಡೆ ಈಗ ನಾನು ಮಾತಲ್ಲೇ.

ಮರೆತೆನು ನನ್ನೇ ನಾನು ಗಮನಿಸಿ ನಿನ್ನ,
ಉಸಿರಿನ ಧಾವಂತ ಅಳೆಯುವ ಮುನ್ನ.
ಅಮಲಿನ ಕಾತುರವು ಚೆನ್ನ.
ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.
ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.
ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.

ಸಲಿಗೆಗೆ ಮಂಜೂರಾತಿ ಕೊಡುವೆಯ ನೀನು?
ಸುಲಿಗೆಯ ಮಾಡೋ ನಿನ್ನ ಸಹಚರಿ ನಾನು..
ಎಲ್ಲಿಗೋ ಓಡಿದೆ ಮನಸಿನ ಭಾವನೆ ಈ ದಿನ,
ಮಾತು ಮಾತಲ್ಲಿಯೇ ಮಾಡು ನೀ ಪ್ರೇಮ ಸಲ್ಲಾಪ ವನ್ನ.
ಅರೆ ಗಳಿಗೆ ಇರು ಇರು ನಲುಮೆಯ  ಪ್ರೇಯಸಿ ನೀನೆ,
ಜೊತೆ ಇರಲು ಸದಾ ಸದಾ ಬದುಕಿಗೆ ಪ್ರೇರಣೆ ತಾನೆ?

ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.
ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.
ಒಮ್ಮೆ ಹೇಳು, ಮತ್ತೆ ಹೇಳು, ನೀನೆ ನನ್ನ ಜೀವ ಎಂದು.

ಮತ್ತೆ ಹೇಳೂ.....
                           ----ಚಿನ್ಮಯಿ

ಏಳನೆ ಮರು ಸಾಹಿತ್ಯ ಬರವಣಿಗೆ

ಹಾಡು: ಬೆಳಗೆದ್ದು ಯಾರ ಮುಖವ ನಾನು ನೋಡಿದೆ?
ಚಿತ್ರ: ಕಿರಿಕ್ ಪಾರ್ಟಿ.
ಮೂಲ ಸಾಹಿತ್ಯ: ಧನಂಜಯ್  ರಂಜನ್.

ಬೆರಗಾಗೋ ನಿನ್ನ ನಡೆಗೆ ಸೋತು ಸುಮ್ಮನೇ,
ಸುಳಿದಾಡೊ ಕನಸ ಲಹರಿ ಕಾಡಿ ಮೆಲ್ಲನೇ.

ಸಣ್ಣದೊಂದು ಗುರುತು ಈಗ ನೆನಪು ಆದ ಭಾಸ ವಾಗಿದೆ,
ಕಣ್ಣಲ್ಲೊಂದು ಸೊಗಸು ಮತ್ತು ಹುರುಪು ನಿನ್ನೇ ಕೋರಿ ಕುಂತಿದೆ.
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ
ಮತ್ತೊಮ್ಮೆ,
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ.

ನಿನ್ನ ಹಾಡು ಸವಿಯಾದ
ಸದ್ದಿನ ರುವಾರಿ,
ಮತ್ತೆ ಕೇಳೋ ಅವಕಾಶ ನೀಡು ನೀ.
ಮನ್ನ ಮಾಡು ನಂದೊಂದು ಮುತ್ತಿನ ಋಣಾನ,
ದೂರ ನಿಂತು ನೀಡೋದು ಸರೀನಾ?

ಮರುಳಾಗುವಾ ಕ್ಷಣವು  ನಿನ್ನಲ್ಲಿಯೇ ಮನವು.

ನಿನ್ನ ಬಳಿ ಬರಲು ನನ್ನ ಸ್ಪರ್ಶ ಅದುವೆ ನಿನಗೆ ಕಾಡಿಗೆ,
ನನ್ನ ಸುತ್ತ ಇರಲು ನಿನ್ನ ಹರ್ಷ ಜಾಗ ಎಲ್ಲಿ ಚಿಂತೆಗೆ.
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ
ಮತ್ತೊಮ್ಮೆ,
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ.

ಬೆರಗಾಗೋ ನಿನ್ನ ನಡೆಗೆ ಸೋತು ಸುಮ್ಮನೇ,
ಸುಳಿದಾಡೊ ಕನಸ ಲಹರಿ ಕಾಡಿ ಮೆಲ್ಲನೇ.

ಸಣ್ಣದೊಂದು ಗುರುತು ಈಗ ನೆನಪು ಆದ ಭಾಸ ವಾಗಿದೆ,
ಕಣ್ಣಲ್ಲೊಂದು ಸೊಗಸು ಮತ್ತು ಹುರುಪು ನಿನ್ನೇ ಕೋರಿ ಕುಂತಿದೆ.
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ
ಮತ್ತೊಮ್ಮೆ,
ಲವ್ವಲ್ಲಿ ಅರೇರೆರೇ ಹಾಗೊಮ್ಮೆ ಅಲೇಲೆಲೇ ಬಿದ್ದಾಗ ಅಯ್ಯ ಅಯ್ಯೋ ಸರಿಗಮಪದನೀಸ.
             ----ಚಿನ್ಮಯಿ

ಆರನೆ ಮರು ಸಾಹಿತ್ಯ ಬರವಣಿಗೆ

ಹಾಡು: ಕತೆಯೊಂದ ಹೇಳಿದೇ.
ಚಿತ್ರ: ಕಿರಿಕ್ ಪಾರ್ಟಿ.
ಮೂಲ ಸಾಹಿತ್ಯ: ರಕ್ಷಿತ್ ಶೆಟ್ಟಿ.

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ಸರಿಯಾದ ಹಾದಿಯ
ಕ್ಷಣ ಕ್ಷಣದಲು ನಮಗೆ ತೋರುತ
ಜೊತೆಗೆ ನಗೆ ಬೀರುತ
ಜೊತೆಗೆ ಮಜಾ ಮಾಡುತ
Seniors...
ನಿಮಗೆಂದೆಯೇ ಈ ಹಾಡನು
ಅರ್ಪಿಸಲು ಬರೆದೆನು

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

BDA ಅಲ್ಲಿ ಓಡಾಡುವುದು ನಮಗೆ ರೂಡಿ ಆಗಿದೆ
Ground ಅಲ್ಲಿ ತರಲೆ-ಹಾವಳಿಯು ನಮದೇ ಆಗಿದೆ

Hostel ಅಲ್ಲಿ IPL matchu ನೋಡೋ ಖುಷಿಯು ಮೂಡಿದೆ
Campus ಅಲ್ಲಿ ಅಲೆದಾಡೋ ನಮಗೆ attendanceu ಈಗ ಎಲ್ಲಿದೇ?

BDA ಅಲ್ಲಿ ಓಡಾಡುವುದು ನಮಗೆ ರೂಡಿ ಆಗಿದೆ
Ground ಅಲ್ಲಿ ತರಲೆ-ಹಾವಳಿಯು ನಮದೇ ಆಗಿದೆ

Hostel ಅಲ್ಲಿ IPL matchu ನೋಡೋ ಖುಷಿಯು ಮೂಡಿದೆ
Campus ಅಲ್ಲಿ ಅಲೆದಾಡೋ ನಮಗೆ attendanceu ಈಗ ಎಲ್ಲಿದೇ?

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್

ಸರಿಯಾದ ಹಾದಿಯ
ಕ್ಷಣ ಕ್ಷಣದಲು ನಮಗೆ ತೋರುತ
ಜೊತೆಗೆ ನಗೆ ಬೀರುತ
ಜೊತೆಗೆ ಮಜಾ ಮಾಡುತ
Lectures...
ನಿಮ್ಮಿಂದಲೇ ನಾವೆಲ್ಲರೂ ಉದ್ದಾರ ಆದೆವು.

Average ಇಲ್ಲ ನಾವ್ internalsu ಎಷ್ಟೇ ಬರೆದರು,
ಅಲ್ಲೋ ಇಲ್ಲೋ ಒಂದೆರೆಡು marksu ಕೊಡದೇ ಇದ್ದರೆ,

ನಾವ್ ಇಲ್ಲಿ ಇಂದು ನಿಮ್ಮ ಮುಂದೆ ಕೂರಲು ಆಗುತ್ತಿತ್ತೆ!

ನಾಲ್ಕು ವರ್ಷದ ನಿಮ್ಮ ಬಯ್ಗುಳ ಈ ಕಿವಿಯಲಿ ಇಂದು ನೆನಪಾಗ್ ಉಳಿದಿದೆ.

ದಮ್ ದರೆ
ದಮ್ ದರೆ
ದಮ್ ದರೆ ದಮ್ ದರೆ
ದಮ್ ದಾ

ದಮ್ ದರೆ ದಮ್
ದಮ್ ದರೆ
ದರೆ ದಮ್ ದಮ್ ದಮ್
                 ----ಚಿನ್ಮಯಿ

ಐದನೆ ಮರು ಸಾಹಿತ್ಯ ಬರವಣಿಗೆ

ಹಾಡು: ನೀ ನನ್ನ ಒಲವು.
ಚಿತ್ರ: ಚಮಕ್.
ಮೂಲ ಸಾಹಿತ್ಯ: ಅರ್ಜುನ್ ಲೂಯಿಸ್.

(Male Version)

ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೇ,
ವಿನಿಮಯ ಮನಸಿನ ಪರಿ ಕೇಳು ನೀನು ಸಖಿ.
ಇರುಳಲಿ ಅರಳಿತು ನನ್ನ ಪ್ರೀತಿ ಎದೆಯಲಿ ನೀ ಕೂರೇ,
ಮೊಗದಲಿ ಅರಳಿದ ನಗು ನೋಡಿ ನಾನು ಸುಖಿ.
ಮಂಜಿನ ಈ ಹಂದರ ಸಲಿಗೆಯಾ ಸಾಗರ ಮರೆತೆನು ಅಂತರ,
ಪದೆ ಪದೆ ಕಾಡಿತು ಅದೇ ಮಾತು.

ನೀ ನನ್ನ ಮನಸ್ಸು, ನೀ ನನ್ನ ಕನಸು, ನೀ ನನ್ನ ಹೆಸರು, ನೀ ನನ್ನ ಉಸಿರು.

ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೇ,
ನೆನೆಯುತ ಅಧರದ ಹಳೆಚಾಳಿ ನೀಡು ವರ.
ನೀ ನನ್ನ ಮನಸ್ಸು, ನೀ ನನ್ನ ಕನಸು, ನೀ ನನ್ನ ಹೆಸರು, ನೀ ನನ್ನ ಉಸಿರು.

ಸಂಜೆಯ ಮಾತು, ಇಲ್ಲಿಯೇ ಕೂತು ವಿವರಿಸು ಈಗ ನೀ
ಹರೆ ಕಣ್ಣಿಂದ ಸಂಗೀತ ನುಡಿಸೋದಿದೆ,
ಮಾತಿನ ಕಂಪು ಸಿಗ್ಗಿಗೆ ಛಾಪು ನುಡಿದರೆ ನೀನು ನಾ ಕುಳಿತೆನು ಬಾ ಸೇರು....
ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೇ,
ವಿನಿಮಯ ಮನಸಿನ ಪರಿ ಕೇಳು ನೀನು ಸಖಿ.
ಇರುಳಲಿ ಅರಳಿತು ನನ್ನ ಪ್ರೀತಿ ಎದೆಯಲಿ ನೀ ಕೂರೇ,
ಮೊಗದಲಿ ಅರಳಿದ ನಗು ನೋಡಿ ಮ್ಮ್ ಆಆ..

ಸನ್ನೆಯ ಇಂಚರ ನೋಡಲು ಸಡಗರ ಮನಸಿಗೆ ಕಾತುರ.
ಪದೆ ಪದೆ ಕಾಡಿತು ಅದೇ ಮಾತು.
ನೀ ನನ್ನ ಮನಸ್ಸು (ಮನಸ್ಸು), ನೀ ನನ್ನ ಕನಸು (ಕನಸು), ನೀ ನನ್ನ ಹೆಸರು (ಹೆಸರು), ನೀ ನನ್ನ ಉಸಿರು (ಉಸಿರು).
                         ----ಚಿನ್ಮಯಿ

(Female Version)

ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೋ,
ವಿನಿಮಯ ಮನಸಿನ ಪರಿ ಕೇಳು ನೀನು ಸಖ.
ಇರುಳಲಿ ಅರಳಿತು ನನ್ನ ಪ್ರೀತಿ ಎದೆಯಲಿ ನೀ ಕೂರೋ,
ಮೊಗದಲಿ ಅರಳಿದ ನಗು ನೋಡಿ ಏನೋ ಸುಖ.
ಮಂಜಿನ ಈ ಹಂದರ ಸಲಿಗೆಯಾ ಸಾಗರ ಮರೆತೆನು ಅಂತರ,
ಪದೆ ಪದೆ ಕಾಡಿತು ಅದೇ ಮಾತು.

ನೀ ನನ್ನ ಮನಸ್ಸು, ನೀ ನನ್ನ ಕನಸು, ನೀ ನನ್ನ ಹೆಸರು, ನೀ ನನ್ನ ಉಸಿರು.

ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೋ,
ನೆನೆಯುತ ಅಧರದ ಹಳೆಚಾಳಿ ನೀಡು ವರ.
ನೀ ನನ್ನ ಮನಸ್ಸು, ನೀ ನನ್ನ ಕನಸು, ನೀ ನನ್ನ ಹೆಸರು, ನೀ ನನ್ನ ಉಸಿರು.

ಸಂಜೆಯ ಮಾತು, ಇಲ್ಲಿಯೇ ಕೂತು ವಿವರಿಸು ಈಗ ನೀ
ಹರೆ ಕಣ್ಣಿಂದ ಸಂಗೀತ ನುಡಿಸೋದಿದೆ,
ಮಾತಿನ ಕಂಪು ಸಿಗ್ಗಿಗೆ ಛಾಪು ನುಡಿದರೆ ನೀನು ನಾ ಕುಳಿತೆನು ಬಾ ಸೇರು.... 
ಪದೆ ಪದೆ ಕಾಡಿತು ಅದೇ ಮಾತು ಸನಿಹವೆ ಬಾ ಬಾರೋ,
ವಿನಿಮಯ ಮನಸಿನ ಪರಿ ಕೇಳು ನೀನು ಸಖ.
ಇರುಳಲಿ ಅರಳಿತು ನನ್ನ ಪ್ರೀತಿ ಎದೆಯಲಿ ನೀ ಕೂರೋ,
ಮೊಗದಲಿ ಅರಳಿದ ನಗು ನೋಡಿ  ಮ್ಮ್ ಆಆ..

ಸನ್ನೆಯ ಇಂಚರ ನೋಡಲು ಸಡಗರ ಮನಸಿಗೆ ಕಾತುರ.
ಪದೆ ಪದೆ ಕಾಡಿತು ಅದೇ ಮಾತು.
ನೀ ನನ್ನ ಮನಸ್ಸು (ಮನಸ್ಸು), ನೀ ನನ್ನ ಕನಸು (ಕನಸು), ನೀ ನನ್ನ ಹೆಸರು (ಹೆಸರು), ನೀ ನನ್ನ ಉಸಿರು (ಉಸಿರು).
                     ----ಚಿನ್ಮಯಿ

ನಾಲ್ಕನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸಾಗರದ ಅಲೆಗೂ ದಣಿವು.
ಚಿತ್ರ: ರಾಜಕುಮಾರ.
ಮೂಲ ಸಾಹಿತ್ಯ: ಗೌಸ್ ಪೀರ್.

ಭಾವನೆಯ ಮರೆತು ಸಾಗಿದೆ,
ಈ ಮನವು ಇಂದು ಸೋತಿದೆ!
ಸನಿಹ ಇರದೇ ನೀನು ಈಗ ಇಲ್ಲೇ,
ಕೊನೆಗೆ ಕನಸೆ ಆಯ್ತು ಮನದ ಆಸೆ.
ಮುದ್ದಾಡೋ ಆಸೆಯೊಂದು, ಕಣ್ಣುಗಳ ಸನಿಹವಿಂದು ಬೇಡಿದೆ ಸಂಗಾತಿ ನಿನ್ನನೇ
ಕುಂತಲ್ಲೆ ಅಳುವಂಥ ಅಭ್ಯಾಸ,
ನನಗದೇ ಯಾತನೆ.

ಭಾವನೆಯ ಮರೆತು ಸಾಗಿದೆ,
ನನ್ನ ಉಸಿರು ನೀನು ಆದ ಮೇಲೆ,
ನೀನು ನನ್ನ ತೊರೆದು ಹೋದೆ ಸರಿಯೇ?

ಬಯಸಿದೆನು ನಿನ್ನನು, ನಿನ್ನಲೆ ಬೆರೆತು.
ಮರೆತಿರುವೆ ಈಗ ನೀ, ಪ್ರೀತಿಯ ಗುರುತು.
ಮನಸಿನ ಒಳ ಭಾವನೆ, ನಿನ್ನನೇ ಕುರಿತು.
ಬೇಡಿದ ಕ್ಷಣ ಈಗಲೇ, ನೀನು ಮರೆತು.
ಮಂದಹಾಸ, ಇಲ್ಲೇ ಕಳೆದು.
ಹೋದೆ ನೀನು, ಪ್ರೀತಿ ಮುರಿದು.
ಮನಸಿಗೆ ನೀ ಈಗ ಸಾಗಿ,
ಸನಿಹವೇ ಬಾ ಎಂದು ಕೂಗಿ ಹೋದರೆ ಹೇಗೆ ದೂರ ನೀನೀಗ..!
ಪ್ರೀತಿಸು ಬಾ ನನ್ನನ್ನು ದಯವಿಟ್ಟು,
ಕೋರುವೆ ನಾನೀಗ.

ಭಾವನೆಯ ಮರೆತು ಸಾಗಿದೆ,

ನಿನ್ನ ಸೇರೊ ಭಾನು, ಭಾನು.
ಎಂದು ತಿಳಿದೇ ನಾನು.
ನನ್ನ ಆಸೆ ಇನ್ನು, ಇನ್ನು
ಮರೆತು ಹೋದೆ ನೀನು.
ಕಣ್ಣ ಒಳಗೆ, ನಿನ್ನದೆ ಜಾಡು
ಸಣ್ಣ ಆಸೆ, ಪೂರ್ತಿ ಮಾಡು.
ಮಾತಲ್ಲೆ ನನ್ನ ಕೋರಿ, ನಿಂತಲ್ಲೆ ನನ್ನ ಸೇರಿ.
ಮನಸಿನ ಕನ್ನಡಿಯ ನೀ ಜೋಡಿಸು.
ನಿನ್ನೊಳಗೆ ಬಂಧಿತನು ಆಗೆಂದು
ಈಗಲೇ ಪ್ರೇರಿಸು.

ಭಾವನೆಯ ಮರೆತು ಸಾಗಿದೆ.
ನನ್ನ ಉಸಿರು ನೀನು ಆದ ಮೇಲೆ,
ನೀನು ನನ್ನ ತೊರೆದು ಹೋದೆ ಸರಿಯೇ?
            ----ಚಿನ್ಮಯಿ

ಮೂರನೆ ಮರು ಸಾಹಿತ್ಯ ಬರವಣಿಗೆ

ಹಾಡು: ರೂಪಸಿ ಸುಮ್ಮನೆ ಹೇಗಿರಲಿ?
ಚಿತ್ರ: ಮುಗುಳು ನಗೆ.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

ಪ್ರೇಯಸಿ ಮೆಲ್ಲನೆ ಸಾಗಿದಲೀ
ಧರೆಯನೆ ನೋಡಿತು ಭಾನು ,
ಕಾರಣವಿಲ್ಲದೆ ಪ್ರೀತಿಸು ನೀ
ಇನಿಯನೆ ಆಗುವೇ ನಾನೂ.
ಸದಾ ನಿನ್ನಲೇ ನಾನು ಉಸಿರಾಗುವೇ, ಮನದಾಳದ ಮಾತೆಲ್ಲವೂ ಇದೇ ರೀತಿಯೆ.

ಪ್ರೇಯಸಿ ಮೆಲ್ಲನೆ ಸಾಗಿದಲೀ
ಧರೆಯನೆ ನೋಡಿತು ಭಾನು
ಕಾರಣವಿಲ್ಲದೆ ಪ್ರೀತಿಸು ನೀ
ಇನಿಯನೆ ಆಗುವೇ ನಾನೂ.

ದೋಚಿದೆ ನನ್ನನು ನೀಡಿ ಪ್ರೀತಿಯ ಅಂಕಿತ,
ಸೋಕಿದೆ ನಿನ್ನನು ನಾನು
ನಿನ್ನನೇ ಸೇರುತ.
ಕಂಡ ಕೂಡಲೇ ನಿನ್ನ ಸ್ಮರಣೆಯು ನನ್ನ ಬಂದು ಸೇರು.
ಸಕಾರಣ ಈ ಪ್ರೀತಿ ಜೊತೆಸೇರುವೆ,
ಮನದಾಸೆಯ ಒಳಭಾವನೆ ಇದೇ ರೀತಿಯೆ.

ಪ್ರೇಯಸಿ ಮೆಲ್ಲನೆ ಸಾಗಿದಲೀ
ಧರೆಯನೆ ನೋಡಿತು ಭಾನು ,
ಕಾರಣವಿಲ್ಲದೆ ಪ್ರೀತಿಸು ನೀ
ಇನಿಯನೆ ಆಗುವೇ ನಾನೂ.

ನಿನ್ನನು ಸೇರುವ ಜಾಗ ಈಗಲೇ ಜ್ಞಾಪಕ,
ಅಲ್ಲಿಗೇ ಹೋಗಲು ನಾನು ಆಗುವೇ ನಾವಿಕ.
ನನ್ನ ವರಿಸುವ ನಿನ್ನ ಕಲ್ಪನೆ ಕಸಿದುಕೊಳ್ಳುವಾಸೆ.
ಸದಾ ಭಾವದಲ್ಲೀಗ ಸೆರೆಯಾಗುವೆ,
ನನ್ನ ಮೈತ್ರಿಯ ಸೂರ್ಯೋದಯ ಇದೇ ರೀತಿಯೆ.


ಪ್ರೇಯಸಿ ಮೆಲ್ಲನೆ ಸಾಗಿದಲೀ
ಧರೆಯನೆ ನೋಡಿತು ಭಾನು, ಕಾರಣವಿಲ್ಲದೆ ಪ್ರೀತಿಸು ನೀ
ಇನಿಯನೆ ಆಗುವೇ ನಾನೂ
         ----ಚಿನ್ಮಯಿ

ಎರಡನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸರಿಯಾಗಿ ನೆನಪಿದೆ ನನಗೆ.
ಚಿತ್ರ: ಮುಂಗಾರು ಮಳೆ-೨.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ಎದೆಯ ಪ್ರತಿ ಬಡಿತದಲ್ಲೂ ನಿನದೇ ಚಡಪಡಿಕೆ,
ಮನಸಿನ ನಲುಮೆಗೆ ಸಿಹಿಯನೂ ಹಂಚುತಾ ಮೈಮರೆಯುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ನಿನ್ನಲ್ಲೇ ಇದೆ ಎಲ್ಲಾ ಉತ್ತರ ನೀಡು ಈಗಲೇ ನಿನ್ನ ಹಾಜರಿ,
ಮಾತೇ ಆಡದೆ ಚಂದ ಕಾಡುವ ನೀನೇ ನನ್ನಯ ಬಾಳ ಕಿನ್ನರಿ.
ಕನಸಲ್ಲೂನು ಹಿತವಾದ ಸಂಧಾನ,
ಮುದ್ದಾಡೋಕೆ ನೀಡು ನೀ ಅನುದಾನ
ನನ್ನಯಾ ತನು-ಮನ ನಿನ್ನನೇ ರಮಿಸುತಾ ಸೆರೆಯಾಗುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ನನ್ನ ಮೈಮನ ಶುದ್ಧವಾಗಿದೆ ಪ್ರೀತಿಯೆನ್ನುವ ಸ್ಪರ್ಶದಿಂದಲೇ,
ಪ್ರೀತಿ ವೈಭವ ವೃದ್ಧಿಯಾಗಿದೆ ನಿನ್ನ ಸೇರುವ ಹರ್ಷದಿಂದಲೇ.
ಕಣ್ಣ ಅಂಚಲ್ಲಿ ಮೂಡೋಂತ ಸಂಚು ನೀ,
ಪ್ರೀತಿ-ಗೀತಿಗೆ ನಾವೇನೇ ಮುಂಚೂಣಿ.
ಪ್ರೀತಿಯಾ ಕಡಲಲಿ ಭಾವನೆ ಬೆಸೆಯುತಾ ಮರುಳಾಗುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ
                  ----ಚಿನ್ಮಯಿ

ಮೊದಲನೆ ಮರು ಸಾಹಿತ್ಯ ಬರವಣಿಗೆ

ಹಾಡು: ಕುಣಿದು ಕುಣಿದು ಬಾರೇ.
ಚಿತ್ರ: ಮುಂಗಾರು ಮಳೆ.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

Male
ಚಿನ್ನ-ರನ್ನ ಎಂಬ
ಪದಗಳು ಎದೆಯ ತುಂಬಾ,
ತುಂಬಿಕೊಂಡು ನಾನು
ಬಾಳೊ ಆಸೆಯಿನ್ನು
ಮನಸಿಗೆ ಸಮೀಪವಾದವಳೇ
ಮನಸ್ಸಿನಲ್ಲಿ ಕೂರು ಬಾರೇ
ದೂಡು ಚಿಂತೆಯಾ, ದೂಡು ಚಿಂತೆಯಾ
ನಿನ್ನ ಆ ನಗುವಲ್ಲಿ ನನಗೆ ಇಲ್ಲ ಸಂಶಯ..

Female
ನನಗೆ ಗೆಳೆಯ ನೀನು
ನಿನಗೆ ಗೆಳತಿ ನಾನು,
ಪ್ರೀತಿಯ ಆಳ ತಿಳಿದವನೇ
ಮುತ್ತಿನ ತೇರು ಏರುವ ಬಾರೋ
ದೂಡು ಚಿಂತೆಯಾ......ಆ..ಓ..

Female
ಹಣೆಯಲ್ಲಿ ತಿಲಕವಾಗಿದೇ ನಿನ್ನಯ,
ಹಗುರವಾದ ಮುದ್ದಾದ ಸಿಹಿ ಚುಂಬನ.

Male
ಕಣ್ಣಲ್ಲಿ ಸೆರೆಯಾsಗಿದೆ ಆ ನಿನ್ನಯ,
ಮಧುರವಾದ ನಗುವೆಂಬ ಸಿರಿ ಸಿಂಚನ.

Female
ನನಗೇ ಇನ್ನು ಆಸರೆ, ಅದುವೆ ನಿನ್ನ ಉಸಿರೇ.
ನನ್ನೊಳಗೆ ಇರುವವನೇ,
ಬಾನಿಗೇಣಿ ಹಾಕುವ ಬಾರೋ
ದೂಡು ಚಿಂತೆಯಾ..... ಆಆಆ

Male
ನಲುಮೆ, ಭಾನಿರೋತನಕ ಜೊತೆಗಿರುವೆನು,
ನೀನ್ನಿಲ್ಲದೆ ಏನಿಲ್ಲ ನನಗೆ ಚೆಲುವೆ

Female
ಮನಸನ್ನು ಕದ್ದಿರುವೇ ಇನ್ನೇನು,
ನೀನೇ ನನಗೆ ಎಲ್ಲಾ ಓ  ನನ್ನೊಲವೆ.

Male
ಚಿನ್ನ-ರನ್ನ ಎಂಬ
ಪದಗಳು ಎದೆಯ ತುಂಬಾ,
ಮನಸಿಗೆ ಸಮೀಪವಾದವಳೇ
ಮನಸ್ಸಿನಲ್ಲಿ ಕೂರು ಬಾರೇ
ದೂಡು ಚಿಂತೆಯಾ, ದೂಡು ಚಿಂತೆಯಾ
ನಿನ್ನ ಆ ನಗುವಲ್ಲಿ ನನಗೆ ಇಲ್ಲ ಸಂಶಯ..

Female
ನನಗೆ ಗೆಳೆಯ ನೀನು
ನಿನಗೆ ಗೆಳತಿ ನಾನು,
ಪ್ರೀತಿಯ ಆಳ ತಿಳಿದವನೇ
ಮುತ್ತಿನ ತೇರು ಏರುವ ಬಾರೋ
ದೂಡು ಚಿಂತೆಯಾ......ಆ..ಓ..
                   ----ಚಿನ್ಮಯಿ

Friday, May 8, 2020

ಮನದಲ್ಲಿ ಅಡಗಿ ಕುಳಿತಿದೆ

ಮನದಲ್ಲಿ ಅಡಗಿ ಕುಳಿತಿದೆ
ಪ್ರೀತಿಯ ಧ್ವನಿ ಮುದ್ರಣ.
ಅದ ಹೇಳಲು ಹೃದಯ ಬಯಸಿದೆ
ಕೊಡುವೆಯಾ ಒಪ್ಪಿಗೆ ಆಹ್ವಾನ?

            ಮನದಲ್ಲಿ ಅಡಗಿ ಕುಳಿತಿದೆ
            ನಿನ್ನದೇ ಭಾವಚಿತ್ರ ನಲ್ಲೆ.
            ಅದ ಕದಿಯಲು ಹೃದಯ ಬಯಸಿದೆ
            ನೀಡುವೆಯಾ ಅನುಮತಿ ಈಗಲೇ?

ಮನದಲ್ಲಿ ಅಡಗಿ ಕುಳಿತಿದೆ
ಅಧರದ ನಗುವಿನ ಸಿಂಚನ.
ಅದ ನೋಡಲು ಹೃದಯ ಬಯಸಿದೆ
ಕೊಡುವೆಯಾ ಒಪ್ಪಿಗೆ ಅಂಕಣ?

            ಮನದಲ್ಲಿ ಅಡಗಿ ಕುಳಿತಿದೆ
            ಸುಂದರ ಕಣ್ಣ ಛಾವಣಿ (ರೆಪ್ಪೆಗಳು).
            ಅದ ತೆರೆಯಲು ಹೃದಯ ಬಯಸಿದೆ
            ನೀಡುವೆಯಾ ಅನುಮತಿ ಮೇದಿನಿ?
              ----ಚಿನ್ಮಯಿ

ಧ್ಯಾನದಿಂದ ದಕ್ಕಿದ್ದು

ಧ್ಯಾನದಿಂದ ದಕ್ಕಿದ್ದು,
ಶಾಂತಿಯ ಆಗರ.
ಶಾಚಿತಿಯ ಸಾಗರ.

ಧ್ಯಾನದಿಂದ ದಕ್ಕಿದ್ದು,
ಮನಕ್ಕೆ ಸಂಸ್ಕಾರ.
ನಾಲಿಗೆಗೆ ಆಚಾರ.

ಧ್ಯಾನದಿಂದ ದಕ್ಕಿದ್ದು,
ಜ್ಞಾನದ ಆಧಾರ.
ಮೌನದ ವಿಸ್ತಾರ.

ಧ್ಯಾನದಿಂದ ದಕ್ಕಿದ್ದು,
ಭಕ್ತಿಯ ಅಂಕುರ.
ದೈವದ ಇಂಚರ.
          ----ಚಿನ್ಮಯಿ

ಜೋಗಿ ಹಾಗು ಯೋಗಿ

ವೈರಾಗಿಯಾಗಿ ಪಂಚೇದ್ರಿಯ ಹಿಡಿತ ಸಾಧಿಸುವವನೇ ಜೋಗಿ.
ಗೃಹಸ್ಥನಾಗಿ ಪಂಚೇದ್ರಿಯ ಹಿಡಿತ ಸಾಧಿಸುವವನೇ ಯೋಗಿ.

ಜೋಗಿ ಪಡೆದದ್ದು ಜೋಗಿಗೆ.
ಯೋಗಿ ಪಡೆದದ್ದು ಯೋಗಿಗೆ.
                ----ಚಿನ್ಮಯಿ

Thursday, May 7, 2020

ಅಂತರಂಗವನ್ನು ಕಂಡುಕೊಂಡಾಗ

ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ಕೋಪವನ್ನು ತೊರೆಯುತ್ತೀಯ.
ನೀನೊಬ್ಬ ಶಾಂತ ಮೂರುತಿ ಆಗುತ್ತಿಯ.

ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ದ್ವೇಷವು ಸಾಯುತ್ತದೆ.
ನಿನ್ನಲ್ಲಿರೋ ಪ್ರೀತಿಯು ಜನಿಸುತ್ತದೆ.

ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ಚಿಂತೆಯನ್ನು ತೊರೆಯುತ್ತೀಯ.
ನೀನೊಬ್ಬ ನೆಮ್ಮದಿಯ ಸಾರಥಿ ಆಗುತ್ತಿಯ.

ಅಂತರಂಗವನ್ನು ಕಂಡುಕೊಂಡಾಗ,
ನಿನ್ನಲ್ಲಿರೋ ರಾಕ್ಷಸತ್ವ ಸಾಯುತ್ತದೆ.
ನಿನ್ನಲ್ಲಿರೋ ಮಾನವತ್ವ (ದೈವತ್ವ) ಜನಿಸುತ್ತದೆ.

ಅಂತರಂಗವನ್ನು ಕಂಡುಕೊಂಡಾಗ ಮಾತ್ರ ಬದುಕಿನ ಅರಿವು ನಿನಗಾಗುವುದು.
             ----ಚಿನ್ಮಯಿ

ನಾ ಕಾಣೆ!

ಎಲ್ರಿಗೂ ಎಲ್ಲವೂ ಅರ್ಥವಾಗುವುದಾದರೆ ಭಗವಂತನೇ ಭಗವದ್ಗೀತ ಬರೆಯುತ್ತಿದ್ದನೇ!
ಭಗವಂತನ ಮಾತುಗಳೇ ಲೆಕ್ಕವಿಲ್ಲದಾಗ ಇನ್ನೇನೂ ತಾನೆ ಉಪದೇಶ ಮಾಡಲಿ ನಾ ಕಾಣೆ!
            ----ಚಿನ್ಮಯಿ

ಜೀವನದಿ ಕಾವೇರಿ

ತವರೂರು ಕರುನಾಡು
ಗಂಡನೂರು ತಮಿಳುನಾಡು.
         ತವರಿನಲ್ಲಿ ಹುಟ್ಟಿ ಬೆಳೆದು
         ಗಂಡನನ್ನ ಸೇರುವಳು ಹರಿದು.
ಸಮನಾಗಿ ಪ್ರೀತಿ ಹಂಚುವಳು
ದಾಹ ನೀಗಿಸಿ ನಗಿಸುವಳು.
         ನೀ ಮಾತೆಯು ಕಾವೇರಿ
         ನೀ ಜೀವನದಿ ಕಾವೇರಿ.
        ----ಚಿನ್ಮಯಿ

ಪವಿತ್ರ ಪ್ರೀತಿಯ ಬಲಿದಾನ

ಎಷ್ಟೋ ಸಂತರು, ಶರಣರು
ನೀಡಿದ ಜ್ಞಾನ ಸಾವಿರಾರು.
ಅವರ ನುಡಿಗಳನ್ನೇ ಲೆಕ್ಕಿಸರಯ್ಯಾ!
ಇನ್ನೂ ನನ್ನ ಮಾತು ಲೆಕ್ಕವೇನಯ್ಯಾ!

ಎಲ್ಲರೂ ಜ್ಞಾನಿಗಳೇ, ಮೇಧಾವಿಗಳೇ
ಎಲ್ಲವನ್ನೂ ಅರಿತ ಬುದ್ಧಿಜೀವಿಗಳೇ.
ಇವರಿಗೆ ಬುದ್ಧಿ ಹೇಳಲು ಸಾಧ್ಯವೇ!
ದೈವದ ಮಾತೂ ಲೆಕ್ಕವಿಲ್ಲ ಅಲ್ಲವೇ!

ಜಾತಿ, ಮತವೇ ಇವರಿಗೆ ಮುಖ್ಯ
ಮಾನವೀಯತೆ, ಪ್ರೀತಿಗೆ ಅಂತ್ಯ.
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ!
ನಿಮಗೆ ಬಿಟ್ಟಿದು ಯೋಚಿಸಿ ಇದು ಸರಿಯೇನಾ?
                ----ಚಿನ್ಮಯಿ

Monday, May 4, 2020

ಕಣ್ಣುಗಳೆರೆಡು ಒಂದಾಯಿತು


ಚಿತ್ರಕ್ಕೆ ಪದ್ಯ-೮

ಕಿರುಬೆರಳುಗಳ ಬೇಟಿಯಿಂದ,
ಎದೆಬಡಿತ ಹೆಚ್ಚಾಯಿತು.
           ಹೆಬ್ಬೆರಳುಗಳ ಸಲಿಗೆಯಿಂದ,
           ಬಡಿತವಿನ್ನೂ ಜೋರಾಯಿತು.
ಪ್ರಶ್ನೆಯೊಂದ ಉತ್ತರಿಸಲು,
ಕಣ್ಣುಗಳೆರೆಡು ಒಂದಾಯಿತು.
           ಮೌನವೇ ಉತ್ತರವಾಗಿರಲು,
           ಪ್ರೀತಿಯು ಜನಿಸಿತು.
             
              ----ಚಿನ್ಮಯಿ

ಬದುಕಿಗೆ ಸಾರ್ಥಕತೆ ಸಾಕಲ್ಲ...!

ಬುದ್ದಿಗೆ ಏಳಿಗೆ ಆದರೂನು,
ಬದುಕಿನ ಜೋಳಿಗೆ ತುಂಬಲು
ವಿನಯದ ಮಳಿಗೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ಕೋಪದ ಬಾಯಿಗೆ ಸಿಲುಕಿದರೂನು,
ಬದುಕಿನ ಬಾಡಿಗೆ ತುಂಬಲು
ತಾಳ್ಮೆಯ ದೇಣಿಗೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ತಪ್ಪಿನ ದಾರಿಯು ಹಿಡಿದರೂನು,
ಬದುಕಿನ ದೋಣಿಯು ಸಾಗಲು
ನಿಜದ ಪಾಲನೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ಚಿಂತೆಗೆ ಜಾಗವು ಕೊಟ್ಟರೂನು,
ಬದುಕಿನ ಯೋಗವು ಸಾಗಲು
ಶಾಚಿತಿ ಸ್ಥಾಪನೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.
                 ----ಚಿನ್ಮಯಿ

Sunday, May 3, 2020

ನಮಗಾಸರೆಯೇ ಮೇದಿನಿ

ಹುಟ್ಟುವರೆಷ್ಟೋ ಸಾಯುವರೆಷ್ಟೋ!
ಹುಟ್ಟು ಸಾವಿನ ಮಧ್ಯೆ ಪ್ರಕೃತಿಯ ಸುಟ್ಟವರೆಷ್ಟೋ!
ಸುಡುವಂತಹ ಬಾಳು ಬೇಡ ಮನುಜ ಕೇಳು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.

ಅರಿತವರೆಷ್ಟೋ ಅರಿಯದವರೆಷ್ಟೋ!
ಅರಿತು ಅರಿಯದೆ ಮಾಡುವ ಪಾಪವೆಷ್ಟೋ!
ಈಗಲಾದರೂ ಪಾಪವ ತೊರೆದು ಪುಣ್ಯದ ಬೆನ್ನು ಹತ್ತು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.

ಸರಿ ಎಷ್ಟೋ ತಪ್ಪುಗಳೆಷ್ಟೋ!
ಸರಿ ತಪ್ಪುಗಳ ತಿಳಿದವರೆಷ್ಟೋ!
ಇನ್ನಾದರೂ ತಪ್ಪನ್ನು ತಿದ್ದಿ ಸರಿಯಾಗಿ ಬದುಕು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.

ಧನಿಕರೆಷ್ಟೋ ಬಡವರೆಷ್ಟೋ!
ಧನಿಕ ಬಡವರ ನಡುವೆ ಭೇದವೆಷ್ಟೋ!
ಭೇದ ನೋಡದ ವೈರಾಣುವಿಗೆ ಹೆದರಿ ಬುದ್ದಿ ಕಲಿತೆ ಮನುಜ ನೀ,
ಕೊನೆಗೂ ತಿಳಿದೆ ಸತ್ಯವ ನೀ ನಮಗಾಸರೆಯೇ ಮೇದಿನಿ.
              ----ಚಿನ್ಮಯಿ

Friday, May 1, 2020

ತಾಳ್ಮೆಗೆ ಹಾಗು ಕೋಪಕ್ಕಿರುವ ವ್ಯತ್ಯಾಸ

ತಾಳ್ಮೆ:

ತಾಳ್ಮೆಯಿಂದಲೇ ತಾನೆ ಜಗವ ಗೆಲ್ಲಲು ಸಾಧ್ಯ,
'ತಾಳಿದವನು ಬಾಳಿಯಾನು' ಎಂಬುದೇ ಸತ್ಯ.

ಕೋಪ:

ಕೋಪದಿಂದ ಏನು ತಾನೆ ಮಾಡಲು ಸಾಧ್ಯ,
'ಕೋಪಮ್ ಸರ್ವನಾಶ ಪ್ರೇರಿತಮ್' ಎಂಬುದೇ ಸತ್ಯ.

            ----ಚಿನ್ಮಯಿ

ಗಂಗೆ ಭಾಸ್ಕರನ ಸ್ನೇಹ ಪ್ರಸಂಗ


ಚಿತ್ರಕ್ಕೆ ಪದ್ಯ-೭

ಅಗೋ ಅಲ್ಲಿ ದಿನಕರನು ಇಣುಕಿ ನೋಡುತಿಹನು ನದಿಯ ಮೋಡಗಳ ಮರೆಯಿಂದ,
ಸಪ್ಪೆಗೊಂಡ ನದಿಗೆ ಹೇಳಿದನು ಹೀಗೆಂದು- "ನಾ ಹೋದರೇನು ಗೆಳತಿ, ಚಂದ್ರನು ಬರುವನು ನಿನ್ನ ನಗಿಸುವನು."
ಹಾಗೆಯೇ- "ನಾ ಮರಳಿ ಬರುವೆನು ಗೆಳತಿ, ನಿನ್ನ ನೋಡಲು ಖಾತರಿ" ಎಂದು ಹೇಳಿ ಮುಳುಗಿದನು ಬೆಟ್ಟದ ಮರೆಯಿಂದ.
ಇವರಿಬ್ಬರ ಸ್ನೇಹದ ದೃಶ್ಯ ನೋಡುತ ಎಲೆಗಳು ನಾಚಿತು, ನನ್ನ ನಯನಗಳು ಕರಗಿತು.
               ----ಚಿನ್ಮಯಿ

ಅಪ್ಪ ಮಗನ ಅಂತರಾಳ ಮಾತುಕತೆ ದಿನಕರಣ ಜೊತೆ


ಚಿತ್ರಕ್ಕೆ ಪದ್ಯ-೬

ಅತ್ತ ಇತ್ತ ಎತ್ತ ನೋಡಲೂ ಹಸಿರು ದೃಶ್ಯ ವೀಕ್ಷಣೆ,
ಮೇಲೆ ಭಾನು ಮೋಡ ಮರೆಯಲ್ಲಿ ನಾಚಿಕೊಂಡಿಹನು ಸುಮ್ಮನೆ.
ನನ್ನ ಮಗ ಕೇಳಿಹನು "ಅಪ್ಪ ಎಲ್ಲಿಗೆಂದು?" ಬಯಸಿ ವಿವರಣೆ,
"ಹಾಗೆ ಮರ ಗಿಡ ಪ್ರಕೃತಿಯ ನೋಡಿ ಆಟವಾಡಲು ಮಗನೆ" ಎಂದೆ ಮೆಲ್ಲನೆ.
               ----ಚಿನ್ಮಯಿ