Saturday, May 9, 2020

ನಾಲ್ಕನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸಾಗರದ ಅಲೆಗೂ ದಣಿವು.
ಚಿತ್ರ: ರಾಜಕುಮಾರ.
ಮೂಲ ಸಾಹಿತ್ಯ: ಗೌಸ್ ಪೀರ್.

ಭಾವನೆಯ ಮರೆತು ಸಾಗಿದೆ,
ಈ ಮನವು ಇಂದು ಸೋತಿದೆ!
ಸನಿಹ ಇರದೇ ನೀನು ಈಗ ಇಲ್ಲೇ,
ಕೊನೆಗೆ ಕನಸೆ ಆಯ್ತು ಮನದ ಆಸೆ.
ಮುದ್ದಾಡೋ ಆಸೆಯೊಂದು, ಕಣ್ಣುಗಳ ಸನಿಹವಿಂದು ಬೇಡಿದೆ ಸಂಗಾತಿ ನಿನ್ನನೇ
ಕುಂತಲ್ಲೆ ಅಳುವಂಥ ಅಭ್ಯಾಸ,
ನನಗದೇ ಯಾತನೆ.

ಭಾವನೆಯ ಮರೆತು ಸಾಗಿದೆ,
ನನ್ನ ಉಸಿರು ನೀನು ಆದ ಮೇಲೆ,
ನೀನು ನನ್ನ ತೊರೆದು ಹೋದೆ ಸರಿಯೇ?

ಬಯಸಿದೆನು ನಿನ್ನನು, ನಿನ್ನಲೆ ಬೆರೆತು.
ಮರೆತಿರುವೆ ಈಗ ನೀ, ಪ್ರೀತಿಯ ಗುರುತು.
ಮನಸಿನ ಒಳ ಭಾವನೆ, ನಿನ್ನನೇ ಕುರಿತು.
ಬೇಡಿದ ಕ್ಷಣ ಈಗಲೇ, ನೀನು ಮರೆತು.
ಮಂದಹಾಸ, ಇಲ್ಲೇ ಕಳೆದು.
ಹೋದೆ ನೀನು, ಪ್ರೀತಿ ಮುರಿದು.
ಮನಸಿಗೆ ನೀ ಈಗ ಸಾಗಿ,
ಸನಿಹವೇ ಬಾ ಎಂದು ಕೂಗಿ ಹೋದರೆ ಹೇಗೆ ದೂರ ನೀನೀಗ..!
ಪ್ರೀತಿಸು ಬಾ ನನ್ನನ್ನು ದಯವಿಟ್ಟು,
ಕೋರುವೆ ನಾನೀಗ.

ಭಾವನೆಯ ಮರೆತು ಸಾಗಿದೆ,

ನಿನ್ನ ಸೇರೊ ಭಾನು, ಭಾನು.
ಎಂದು ತಿಳಿದೇ ನಾನು.
ನನ್ನ ಆಸೆ ಇನ್ನು, ಇನ್ನು
ಮರೆತು ಹೋದೆ ನೀನು.
ಕಣ್ಣ ಒಳಗೆ, ನಿನ್ನದೆ ಜಾಡು
ಸಣ್ಣ ಆಸೆ, ಪೂರ್ತಿ ಮಾಡು.
ಮಾತಲ್ಲೆ ನನ್ನ ಕೋರಿ, ನಿಂತಲ್ಲೆ ನನ್ನ ಸೇರಿ.
ಮನಸಿನ ಕನ್ನಡಿಯ ನೀ ಜೋಡಿಸು.
ನಿನ್ನೊಳಗೆ ಬಂಧಿತನು ಆಗೆಂದು
ಈಗಲೇ ಪ್ರೇರಿಸು.

ಭಾವನೆಯ ಮರೆತು ಸಾಗಿದೆ.
ನನ್ನ ಉಸಿರು ನೀನು ಆದ ಮೇಲೆ,
ನೀನು ನನ್ನ ತೊರೆದು ಹೋದೆ ಸರಿಯೇ?
            ----ಚಿನ್ಮಯಿ

No comments:

Post a Comment