Tuesday, May 19, 2020

ನಮ್ಮ ಭವ್ಯ ಭಾರತ

ಸನಾತನ ಧರ್ಮದ ಮೂಲಧಾತು ಇದೆ.
ನಮ್ಮ ಭರತವರ್ಷವೇ ಪ್ರಾಣಧಾತು ನಮಗೆ.
ವೇದ, ಪುರಾಣ, ಉಪನಿಷತ್ಗಳ ಜನ್ಮ ಭೂಮಿ ಇದೆ.
ಸಾಧು ಸಂತರಿಂದ ಜ್ಞಾನ ವಿಜ್ಞಾನದ ಏಳಿಗೆ.

ಭಗವಂತನು ಬರೆದ ಭಗವದ್ಗೀತೆಯ ಸ್ಥಾನ ಇದೆ.
ರಾಮಾಯಣದಿಂದ ಸಂಬಂಧಗಳಲ್ಲಿ ಒಳ್ಳೆತನ ಇರಬೇಕೆಂದು (ಹೆಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.
ಶರಣರು ಸಂತರು ಹುಟ್ಟಿದ ಪುಣ್ಯ ಭೂಮಿ ಇದೆ.
ಮಹಾಭಾರತದಿಂದ ಸಂಬಂಧಗಳಲ್ಲಿ ಹಗೆತನ ಇರಬಾರದೆಂದು (ಮಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.

ಸಾಹಿತ್ಯ, ಸಂಗೀತ, ನಾಟ್ಯದ ಮಡಿಲು ಇದೆ.
ಎಷ್ಟೋ ಮೊದಲುಗಳು ಶುರುವು ನಮ್ಮಿಂದಲೇ.
ಕಾವ್ಯ, ಕಲೆ, ಕ್ರೀಡೆಗಳ ಉತ್ಸಾಹದ ಬೇರು ಇದೆ.
ಮೊದಲ ವಿಶ್ವವಿದ್ಯಾಲಯ ಶಿಕ್ಷಣ ಶುರುವು ಇಲ್ಲಿಂದಲೇ.

ಮಾನವೀಯತೆಯ ಜಗಕ್ಕೆ ತಿಳಿಸಿದ ದೇಶ ಇದೆ.
ಆಚಾರ ವಿಚಾರಗಳ ಹೆಮ್ಮೆಯ ಭೂಮಿ ನಮ್ಮದು.
ನಮಗೆ ಯುಗ ಯುಗಗಳ ಇತಿಹಾಸವಿದೆ.
ವೀರ ಶೂರರು ಅಂಜದೆ ಹೋರಾಡಿದ ಭವ್ಯ ಭಾರತವಿದು.

ಕೇಳಿರಿ ಹೇಳುವೆ ಹಾಡುತ.
ಹಾಡಿರಿ ಜೊತೆ ಶೃತಿ ಸೇರಿಸುತ.
ಇದುವೇ ನಮ್ಮ ಭವ್ಯ ಭಾರತ.
ಇದುವೇ ನಮ್ಮ ಭವ್ಯ ಭಾರತ.
                ----ಚಿನ್ಮಯಿ

No comments:

Post a Comment