Saturday, May 9, 2020

ಎರಡನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸರಿಯಾಗಿ ನೆನಪಿದೆ ನನಗೆ.
ಚಿತ್ರ: ಮುಂಗಾರು ಮಳೆ-೨.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ಎದೆಯ ಪ್ರತಿ ಬಡಿತದಲ್ಲೂ ನಿನದೇ ಚಡಪಡಿಕೆ,
ಮನಸಿನ ನಲುಮೆಗೆ ಸಿಹಿಯನೂ ಹಂಚುತಾ ಮೈಮರೆಯುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ನಿನ್ನಲ್ಲೇ ಇದೆ ಎಲ್ಲಾ ಉತ್ತರ ನೀಡು ಈಗಲೇ ನಿನ್ನ ಹಾಜರಿ,
ಮಾತೇ ಆಡದೆ ಚಂದ ಕಾಡುವ ನೀನೇ ನನ್ನಯ ಬಾಳ ಕಿನ್ನರಿ.
ಕನಸಲ್ಲೂನು ಹಿತವಾದ ಸಂಧಾನ,
ಮುದ್ದಾಡೋಕೆ ನೀಡು ನೀ ಅನುದಾನ
ನನ್ನಯಾ ತನು-ಮನ ನಿನ್ನನೇ ರಮಿಸುತಾ ಸೆರೆಯಾಗುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ

ನನ್ನ ಮೈಮನ ಶುದ್ಧವಾಗಿದೆ ಪ್ರೀತಿಯೆನ್ನುವ ಸ್ಪರ್ಶದಿಂದಲೇ,
ಪ್ರೀತಿ ವೈಭವ ವೃದ್ಧಿಯಾಗಿದೆ ನಿನ್ನ ಸೇರುವ ಹರ್ಷದಿಂದಲೇ.
ಕಣ್ಣ ಅಂಚಲ್ಲಿ ಮೂಡೋಂತ ಸಂಚು ನೀ,
ಪ್ರೀತಿ-ಗೀತಿಗೆ ನಾವೇನೇ ಮುಂಚೂಣಿ.
ಪ್ರೀತಿಯಾ ಕಡಲಲಿ ಭಾವನೆ ಬೆಸೆಯುತಾ ಮರುಳಾಗುವುದು ಇನ್ನು ಸಹಜ.

ಸೊಗಸಾಗಿ ಸಾಗಿದೆ ಪಯಣ
ಜೊತೆಯಾಗಿ ಸಾಗಲು ತಲ್ಲಣ
                  ----ಚಿನ್ಮಯಿ

No comments:

Post a Comment