Work is a part of Life and Work is not Life completely.
If work is becoming a complete Life, then that's not a Real Life...
----Chinmayi
ಸಾಹಿತ್ಯ ಲೋಕದಲ್ಲಿ ಅಂಬೆಗಾಲು
Work is a part of Life and Work is not Life completely.
If work is becoming a complete Life, then that's not a Real Life...
----Chinmayi
ನನ್ನ ಇಡೀ ಜೀವನ ಪದೆ ಪದೆ ಕಾಡಿರುವ ಅತ್ಯದ್ಭುತವಾದ, ಅಮೋಘವಾದ ಹಾಗೂ ಅವಿಸ್ಮರಣೀಯವಾದ ಯಕ್ಷ ಪ್ರಶ್ನೆಯೊಂದನ್ನು ಒಮ್ಮೆ ನಾನು ನನ್ನ ಪರಮ ಸ್ನೇಹಿತನಾದ ನನ್ನಾತ್ಮವನ್ನು ಕೇಳಿದೆ—
"ನಿಜವಾದ ಜೀವನ ಅಂದರೇನು...!?"
ಅದಕ್ಕೆ ನನ್ನಾತ್ಮವು ತುಸು ಮುಗುಳುನಗುತ ಹೀಗೆಂದು ಉತ್ತರಿಸಿತು—
"ನನ್ನ ಹಾಗೆಯೇ ಸದಾಕಾಲವೂ ಏನೇ ಆದರೂ ಮುಗುಳುನಗುತ, ಇರುವುದರಲ್ಲಿಯೇ ತೃಪ್ತಿಯಿಂದ, ಈ ಕ್ಷಣದಲ್ಲಿ ನೆಮ್ಮದಿಯಿಂದ ಜೀವಿಸುವುದೇ ನಿಜವಾದ ಜೀವನ" ಎಂದು...
ಈ ಒಂದು ಉತ್ತರ ನನ್ನ ಇಡೀ ಜೀವನದ ದಿಕ್ಕನ್ನೇ ಬದಲಿಸಿದೆ. ಈ ಒಂದು ಮರೆಯಲಾಗದ ಉಡುಗೊರೆ ನೀಡಿದ ನನ್ನಾತ್ಮದೊಳು ನೆಲೆಸಿರುವ ಪರಮಾತ್ಮನಿಗೆ ಅನಂತ ಅನಂತ ಶತಕೋಟಿ ನಮನಗಳು...
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೯ |
ನವಗ್ರಹಗಳು, ನವಧಾನ್ಯಗಳು ಹಾಗೂ ಅಷ್ಟದಿಕ್ಕುಗಳು ಹೇಗೆ ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂಬುದನ್ನು ಇಲ್ಲಿ ವೈಜ್ಞಾನಿಕ ದೃಷ್ಟಿಕೋನದಿಂದ ವಿವರಿಸುವೆನು—
ಒಂದೆಡೆ ನವಗ್ರಹಗಳ ಪ್ರಭಾವ ಜೀವರಾಶಿಗಳ ಮೇಲೆ ಅಷ್ಟದಿಕ್ಕುಗಳಲ್ಲಿಯೂ ಪಸರಿಸುತ್ತ ಅತೀವ ಅಥವಾ ಕಡಿಮೆ ಪ್ರಮಾಣದಲ್ಲಿ ಬೀರುವುದು.
ಮತ್ತೊಂದೆಡೆ ನವಧಾನ್ಯಗಳು ಜೀವರಾಶಿಗಳ ಆರೋಗ್ಯ ರಕ್ಷಣೆಯ ಸುಭಕ್ಷ ಕವಚವಾಗಿ ಕಾಪಾಡುವುದು.
ಬದುಕಿನ ನೈಜತೆ ಹೀಗಿರುವಾಗ, ಪಂಚಭೂತಗಳ ಮಿಶ್ರಿತವಾದ ಜೀವರಾಶಿಗಳ ಬದುಕಿನ ಸಮತೋಲನಕ್ಕೆಂದೆ ಈ ಕೆಳಗಿನ ವಿಧಿ ವಿಧಾನಗಳನುಸಾರವಾಗಿ ನವಧಾನ್ಯಗಳನ್ನು ಅಷ್ಟದಿಕ್ಕುಗಳಲ್ಲಿಯೂ ಹೋಮ ಕುಂಡದ ಸುತ್ತಲು ಇರಿಸಿ ನವಗ್ರಹ ಶಾಂತಿ ಹೋಮ-ಹವನಗಳನ್ನು, ಪೂಜೆ-ಪುನಸ್ಕಾರಗಳನ್ನು ನಡೆಸುವೆವು—
೧) ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಲ್ಲಿ ಗೋಧಿಯು ರವಿಗೆ/ಸೂರ್ಯನಿಗೆ ಸೀಮಿತ.
೨) ಆಗ್ನೇಯ ದಿಕ್ಕಿನಲ್ಲಿ ಅಕ್ಕಿಯು ಸೋಮನಿಗೆ/ಚಂದ್ರನಿಗೆ ಸೀಮಿತ.
೩) ದಕ್ಷಿಣ ದಿಕ್ಕಿನಲ್ಲಿ ತೊಗರಿಬೇಳೆಯು ಮಂಗಳ ಗ್ರಹಕ್ಕೆ/ಕುಜ ಗ್ರಹಕ್ಕೆ ಸೀಮಿತ.
೪) ಈಶಾನ್ಯ ದಿಕ್ಕಿನಲ್ಲಿ ಹೆಸರುಕಾಳು ಬುಧ ಗ್ರಹಕ್ಕೆ ಸೀಮಿತ.
೫) ಉತ್ತರ ದಿಕ್ಕಿನಲ್ಲಿ ಕಡಲೆಕಾಳು ಗುರು ಗ್ರಹಕ್ಕೆ ಸೀಮಿತ.
೬) ಪೂರ್ವ ದಿಕ್ಕಿನಲ್ಲಿ ಅವರೆಕಾಳು ಶುಕ್ರ ಗ್ರಹಕ್ಕೆ ಸೀಮಿತ.
೭) ಪಶ್ಚಿಮ ದಿಕ್ಕಿನಲ್ಲಿ ಎಳ್ಳು ಶನಿ ಗ್ರಹಕ್ಕೆ ಸೀಮಿತ.
೮) ನೈರುತ್ಯ ದಿಕ್ಕಿನಲ್ಲಿ ಉದ್ದಿನಬೇಳೆಯು ರಾಹು ಗ್ರಹಕ್ಕೆ ಸೀಮಿತ.
೯) ವಾಯುವ್ಯ ದಿಕ್ಕಿನಲ್ಲಿ ಹುರುಳಿಕಾಳು ಕೇತು ಗ್ರಹಕ್ಕೆ ಸೀಮಿತ.
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೮ |
ಈ ಅದ್ಭುತ ಪ್ರಪಂಚದೊಳು ಇಬ್ಬರು ಅತ್ಯುನ್ನತ ವ್ಯಕ್ತಿತ್ವದ ವ್ಯಕ್ತಿಗಳು ಜೀವಿಸಿದ್ದಾರೆ ಹಾಗೂ ನನ್ನೊಳು ಸದಾ ಜೀವಿಸುತ್ತಿರುವರು. ನಾನು ಓರ್ವ ಮನುಷ್ಯನಾಗಿ ಬದುಕುತ್ತಿರುವುದಕ್ಕೆ ಅವರಿಬ್ಬರೇ ಸಂಪೂರ್ಣ ಕಾರಣ.
ಅವರೇ—
ಓರ್ವರು, "ಪರಮಾತ್ಮ ಗುರುದೈವ ಶ್ರೀ ಕೃಷ್ಣನು."
ಇನ್ನೋರ್ವರು, "ಪರಮಾತ್ಮ ಮಹಾಗುರು ಡಾ|| ಪುನೀತ್ ರಾಜ್‍ಕುಮಾರ್."
----ಚಿನ್ಮಯಿ
ಯಾರಾದ್ರೂ "ಹೇಗಿದೆ ಜೀವನ" ಅಂತ ಕೇಳಿದ್ರೆ, ನನ್ನ ಉತ್ತರ ಕೆಳಗಿನ ಸಾಲುಗಳು—
ಕ್ಷಣವೂ ಕದನ,
ನಗುವೇ ಮೃಷ್ಟಾನ್ನ.
ದಿನವೂ ಹೊಸತನ,
ನವ ನವೀನ.
ಇದುವೇ ಜೀವನ.
ಅಮೋಘ ಸಂಜೀವನ.
----ಚಿನ್ಮಯಿ
ಜೀವನದಲ್ಲಿ ಒಳ್ಳೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ವ್ಯಕ್ತಿಯ ಅನುಸರಣೆ ಇರಬೇಕೇ ಹೊರತು ಅನುಕರಣೆ ಅಲ್ಲ.
----ಚಿನ್ಮಯಿ
One should never judge or jump to conclusions about many things in life. True understanding comes only through research, reflection, and rediscovering the facts.
----Chinmayi
ಹಾಡು: ನನ್ನೊಳು ನಿನ್ನೊಳು
ಸಾಹಿತ್ಯ: ಚಿನ್ಮಯಿ
=============================
ಮೇಘರಾಜನ ದನಿಯಿಂದ ರಾಗಹನಿಗಳು ಉದುರಿವೆ.
ಧರೆಯೊಳೆಲ್ಲಾ ಜೀವರಾಶಿ ತಾಳಮೇಳದಿ ಹಾಡಿವೆ.
ನನ್ನಂತರಂಗ ದನಿಯು ಮೆಲ್ಲ ಮೆಲ್ಲನೆ ಏರಿದೆ.
ನಿನ್ನಂತರಂಗ ತಾಳಕ್ಕೆ ಬೆಸೆಯಲು ಕಾದಿದೆ.
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. ||ಪ||
ಹೂವು ಹಣ್ಣು ಸಸ್ಯ ಕಾಶಿ ಸಕಲ ಜೀವರಾಶಿ
ಹರುಷದಿ ನಲಿದು ಕುಣಿದು ಮಣ್ಣಾಗಿದೆ ಜೀವಾಮೃತ.
ನಿನ್ನ ಕಣ್ಣು ನನ್ನ ನೋಟ ಎರಡು ಸೇರಲು
ಹೃದಯವು ಮನದಿ ಮನವು ಹೃದಯದಿ ಅಂಕಿತ. ||೧||
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||
ಕೊಳ ಕೆರೆ ನದಿ ಸಾಗರ ಒಂದೊಂದಾಗಿ ಸೇರಲು
ನಯವಾದ ಲಯದಿ ಧರೆಯೇ ನಾಟ್ಯಮಂಜರಿಯ ವೇದಿಕೆ.
ನಿನ್ನ ಕರೆ ನನ್ನ ದನಿ ಜೊತೆಜೊತೆಗೂಡಿಸಿ
ಹಾಡುತಲೆ ನನದು ನಿನದು ಶುರುವು ಪ್ರೇಮ ಸಂಚಿಕೆ. ||೨||
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||
----ಚಿನ್ಮಯಿ
Even after nurturing a hundred positive thoughts and doing a hundred good deeds, a few negative thoughts and a few wrong actions can still steal our peace of mind. It mirrors a simple truth:
"100 multiplied by 0 becomes 0."
So, to protect our inner peace, we must consciously choose to dwell only on those hundred positive thoughts and hundred good deeds, gently ignoring what is negative and harmful. Because when the mind chooses positivity:
"100 multiplied by 1 remains 100."
----Chinmayi
The Places and Photographs are the Gateway for Memories—
some Miserable and some Memorable.
----Chinmayi
ಹಾಡು: ನೀನೇ ಮುಗಿಲು ನಾನೇ ಕಡಲು
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ.
ನಾ ನೀನು, ನೀ ನಾನು ಇಬ್ಬರೊಂದೇ..
ದೇಹವೆರಡಾದರೂ ಆತ್ಮವೊಂದೇ.. ||ಪ||
ಎನ್ನಂತರಂಗ ತೋಟದಲ್ಲಿ ಕುಸುಮವು ನೀನು ದುಂಬಿಯು ನಾನು.
ಮನ್ಮಥನ ಬಾಣದಿ ನಿನ್ನಂತರಂಗಕ್ಕೆ ಹರಿಯಲಿ ಪ್ರೇಮ ಜೇನು.
ರತಿರೂಪಿಭಗವತಿಗೇ ಮುಡಿಪಾಗುವ ಬಾ.
ಪ್ರೇಮಜ್ಯೋತಿ ಶಾಖದಿ ಒಂದಾಗುವ ಬಾ. ||೧||
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ. ||ಅನು ಪ||
ಮರಗಿಡದಿ ಸಿಹಿಯಾದ ಫಲಾಮೃತ ನಾನು ಬೇರುಗಳೇ ನೀನು.
ನಿನ್ನೊಳಗೆ ಜೀವಿಸಿ ಪ್ರೇಮಾಮೃತವುಣುವೆ ನೀನಾದರೆ ಧೇನು...!
ಪ್ರಕೃತಿಯೇ ನಾಚುವಂತೆ ಸರಸವಾಡುವ ಬಾ.
ಪ್ರೇಮಯೋಗಕ್ಕೆ ನಾಂದಿಯಾಗುವ ಬಾ. ||೨||
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ.
ನಾ ನೀನು, ನೀ ನಾನು ಇಬ್ಬರೊಂದೇ..
ದೇಹವೆರಡಾದರೂ ಆತ್ಮವೊಂದೇ.. ||ಪ||
----ಚಿನ್ಮಯಿ
Miracles are nothing but Science which are beyond Human Imagination, Intelligence and Perception—
Until one experiences it, it's just a hypothesis which is called Superstitious in the world of Atheists.
----Chinmayi
ಹಾಡು: ಹೃದಯ-ಮನಗಳೊಡನೆ ಆತ್ಮ ಸಂಭಾಷಣೆ...
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನಿನ್ನೂರು ತೊರೆದರೇನಂತೆ.
ಊರೂರು ಕರೆದರೇನಂತೆ.
ಹೋದೂರು ನಿನ್ನದಿದ್ದಂತೆ.
ಹೊಂದಿಕೊಂಡು ಬಾಳು ಮನವೆ..
ಬಾಳ ನಿತ್ಯ ರಾಗ ಮೊಳಗಲು.
ಬಾಳ ದಿವ್ಯ ಜ್ಯೋತಿ ಬೆಳಗಲು.
ಇದು ಅನಿವಾರ್ಯವಂತೆ.
ಒಳಗೊಳಗೆ ದುಃಖವಂತೆ.
ದಿನವಿಡೀ ಬರೀ ಚಿಂತೆ.
ಬಾಳೆಂದರೆ ಇದೇ ಸಂತೆ.
ಓಡಿಹೋದರೆ ತರವೇ ಮನವೆ...!?
ಜಗವು ಸಾಗೋ ರೀತಿ ಇದುವೆ.
ಜಗವ ಗೆಲ್ಲೋ ನೀತಿ ಇದುವೆ.
ಮತ್ತೆ ದಿನಕರನುಟ್ಟುವಂತೆ.
ದಿನಗಳುಚ್ಚು ಕುದುರೆಯಂತೆ.
ಗುರಿಯಾಗಬೇಕು ಕರ್ಮವಷ್ಟೇ.
ಆಗು ನೀ ಕಡಲಲೆಗಳಂತೆ.
ಮತ್ತೆ ಮರಳುವೆ ತೀರಕೆ ಮನವೆ..
ಪ್ರತಿ ಕ್ಷಣಗಳ ಹೋರಾಟ.
ಕೆಲವು ದಿನಗಳ ಒದ್ದಾಟ.
ಎಲ್ಲವೂ ಮೃಷ್ಟ ಭೋಜನಕ್ಕಂತೆ.
ಬಾಳ ಚಕ್ರ ತಿರುಗಿದಂತೆ.
ಎಲ್ಲಾ ಸವೆದೋಗುವುದಂತೆ.
ಬದುಕಿಬಿಡು ಈ ಕ್ಷಣದ ಜೊತೆ.
ಜಂಜಾಟಕಷ್ಟೇ ಸಿಲುಕಬೇಡ ಮನವೆ..
ಖಗ-ಮೃಗ, ಸಸ್ಯಕಾಶಿ, ವೃಕ್ಷಗಳು ನಲಿಯುವಂತೆ.
ಪ್ರಕೃತಿಯೊಡನೆ ಸಾಂಗತ್ಯವು ನೃತ್ಯ ನಾಕವಂತೆ.
ಅದುವೇ ನಿಜ ಜೀವನವಂತೆ..
----ಚಿನ್ಮಯಿ
ಹಾಡು: ನಾ ನಿನ್ನನ್ನು ಸೇರಲು...
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
ಮಾಯದ ಗಾಯವೇ ಪ್ರೇಮವು ಅಲ್ಲವೇ!
ಸಾವಿಗೂ ಅಂಜಿಕೆ ಕಾಯುವ ಕೋರಿಕೆ.
ಬೀಸುವ ಗಾಳಿಯು ವೃಕ್ಷವ ಅಪ್ಪಿದೆ.
ಸಾಗರ ಆಳವು ಆಗಸ ಮೋಡವು ಸೇರಿದೆ... |ಅನು ಪ|
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
ಬಾ ಕೇಳು ಬಾ ಈ ಬಡಿತವ.
ನನ್ನೆದೆಯ ಭಾವ ಲಹರಿಯ.
ಗಾಢ ಪ್ರೇಮಕ್ಕೂ ಕಾಯೋ ಬೇಗುದಿ!
ಈ ಖಾಯಿಲೇಗೆ ನೀನೆ ಔಷಧಿ. ||Verse||
ಭಾವದ ಗಾಳಕೆ ಸಿಲುಕಿದೆ ರಾಗವು.
ಜೀವನ ಸಾಥಿಯೇ ಬೇಕಿದೆ ಸನಿಹವು.
ಸೋಲುವೆ ಈಗಲೇ ನಿನ್ನನ್ನು ಗೆಲ್ಲಲು.
ಕನಸಲೂ ನಿನ್ನನೇ ಹೃದಯವು ಬೇಡಿದೆ ಸೇರು ಬಾ... |ಅನು ಪ|
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
----ಚಿನ್ಮಯಿ
"मेरा दिल चुरा के छुपा दो आपने दिल में"— यह ही मेरी मन्नत।
आपके खूबसूरती चेहरे का नज़र चुराने दो, तब धरती ही जन्नत।
----चिन्मयी
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೭ |
"To Others:"
'One must grasp different perspectives to see good and accordingly live well.'
"To Ourselves:"
'We must see good in others even with different perspectives for living well.'
Both emphasize the same message and when we focus more on becoming ourselves better day by day, the whole world looks beautiful and ultimately life will be colorful and beautiful.
----Chinmayi
See Good. Think Good. Understand Good. Be Good. Do Good. Eat Good. Sleep Good.
Totally, Live Good.
----Chinmayi
When I had no money, I was satisfied.
When I have money, I am satisfied.
Whether I will have money or not, I will remain satisfied.
For me, happiness was, is, and will never be measured by money—
because happiness was, is, and will always be a state of mind,
never a dependency on wealth.
----Chinmayi
ಹಣವಿರಲಿಲ್ಲದ ದಿನಗಳಲ್ಲೂ ತೃಪ್ತಿ ನನ್ನ ಜೊತೆಯಾಗಿತ್ತು.
ಹಣವಿರುವ ಇಂದಿನ ದಿನಗಳಲ್ಲೂ ತೃಪ್ತಿ ನನ್ನಲ್ಲೇ ಇದೆ.
ನಾಳೆ ಹಣ ಇರಲಿ, ಇರದಿರಲಿ ನನ್ನೊಳಗಿನ ತೃಪ್ತಿಗೆ ಅದರಿಂದ ಯಾವ ಬದಲಾವಣೆಯೂ ಇಲ್ಲ—
ಏಕೆಂದರೆ ನನ್ನ ಪ್ರಕಾರ ಸಂತೋಷವೆಂದರೆ ಹಣದಿಂದ ಅಳೆಯುವ ಅಳತೆ ಅಲ್ಲ; ಅದು ಮನಸ್ಸಿನ ಮೌನದಲ್ಲೇ ಹುಟ್ಟುವ ಶಾಶ್ವತ ಸ್ಥಿತಿ.
----ಚಿನ್ಮಯಿ
ಮಾತಿಗೂ ಸಿಗಲಾರದ ಭಾವನೆಯೇ ನಿಂತಿದೆ ನನ್ನೆದುರಿಗೆ.
ಮಾತಿಗೂ ಮಿಗಿಲಾದ ಮೌನವೂ ಶರಣು ನಿನ್ನೆದುರಿಗೆ.
ಕಣ್ಣಂಚಲ್ಲೇ ಕೋಲ್ಮಿಂಚಿರಲು ನರನಾಡಿಗೆ ವಿದ್ಯುತ್ ಸಂಚಲನ.
ಕುಡಿನೋಟದಲ್ಲೇ ಕಣ್ಸನ್ನೆಯಿಂ ಸಂಗೀತ-ಸಾಹಿತ್ಯ ಸಂಕಲನ.
ನಾದ ನಿನಾದದ ಜೊತೆಜೊತೆಗೆ ಶುರುವೂ ಗಟ್ಟಿಮೇಳ.
ಮನದಾಳದಿ-ಹೃದಯದಾಳದಿ ಪ್ರೇಮದುಂದುಭಿಯೇ ಜೀವಾಳ.
----ಚಿನ್ಮಯಿ
Eliminate Ignorance, create Blissfulness, and then Mindfulness becomes the natural state of life.
----Chinmayi
Those who carry knowledge in the mind but lack wisdom, and whose hearts and souls are empty of love, and this misalignment of mind, heart and soul has to be addressed and rectified, else it becomes the greatest danger to human civilization, for such beings are the true and real educated idiots and illiterates of this universe.
----Chinmayi
ಹಾಡು: ವಸೀಗರ (ಜ಼ರಾ ಜ಼ರಾ)
ಚಿತ್ರ: ಮಿನ್ನಲೆ (ರೆಹನಾ ಹೈ ತೆರೆ ದಿಲ್ ಮೇಂ)
ಮೂಲ ಸಾಹಿತ್ಯ: ತಮರೈ (ಸಮೀರ್)
ಮೂಲ ಗಾಯನ: ಬಾಂಬೆ ಜಯಶ್ರೀ
ಸಂಗೀತ: ಹ್ಯಾರಿಸ್ ಜಯರಾಜ್
ಮರುಸಾಹಿತ್ಯ ಹಾಡು: ದಿನ ದಿನ
------------------------------------------------------
------------------------------------------------------
(Female Version)
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.
ನೇಸರನ ಸಹವಾಸ ಶಾಖವದೇ ಸಂಪ್ರೀತಿ. ||ಪ||
ಚಂದ ಕವಿತೆ ಬರೆವ ರೂಡಿ ನಂಗೆ ಶುರುವು
ಉಸಿರಾಗೊ ಸಾಂಗತ್ಯಕ್ಕೆ ಅಣಿಯಾಗುವ ಕಾತುರತೆ.
ಅಂದ ಕಾಣೊ ಖುಷಿ ನಿನ್ನ ಕಂಗಳಲ್ಲಿ
ಬೆಳದಿಂಗ್ಳ ತಾರೆಗಳಂತೆ ಹೊಳಪೊಂದಿಗೆ ಮೈಮರೆತೆ.
ಸೋಜಿಗಕು ಸೋಜಿಗವು ಕಣ್ಣ್ ಸನ್ನೆಯಲ್ಲೆ ಪ್ರೀತಿ ಕಾಗುಣಿತ.
ನಾನ್ ನೀನು ಒಂದಾಗೋ ಆ ಮಿಲನವೊಂದು ಸಂಪ್ರೀತ. ||೧||
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ? ||ಅನು ಪ||
ಸಂಪ್ರೀತಿ ಪ್ರೀತಿ..
ಸಂಜೆ ವೇಳೆ ಹೀಗೆ ಒಂದು ಪಿಸುಗುಟ್ಟು
ಕೇಳುವಾಸೆಯು ನನ್ನಲ್ಲಿ ಈಡೇರಿಸು ಪ್ರಿಯಕರನೇ!
ಆ ಸಂತೆಯಲ್ಲೂ ಸಿಹಿ ದನಿಯೊಂದ
ಆಲಾಪನೆ ಮಜಲಿಗೆ ಪ್ರೇರೇಪಿತ ಓ ನಿನ್ನ್ ಲಯವೇ.
ಸಂಗೀತ ಸಂಜಾತ ಎದೆಯಾಳದಲ್ಲೇ ಸಾಕಾರ.
ರಾಗದಲೇ ಅನುರಾಗ ಇದೇ ಪ್ರೀತಿ ಪ್ರೇಮ ಝೇಂಕಾರ. ||೨||
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.
ನೇಸರನ ಸಹವಾಸ ಶಾಖವದೇ ಸಂಪ್ರೀತಿ.
ಸಂಪ್ರೀತಿ. ಸಂಪ್ರೀತಿ. ಸಂಪ್ರೀತಿ... ||ಅನು ಪ||
----ಚಿನ್ಮಯಿ
------------------------------------------------------
------------------------------------------------------
(Male Version)
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.
ನೇಸರನ ಸಹವಾಸ ಶಾಖವದೇ ಸಂಪ್ರೀತಿ. ||ಪ||
ಚಂದ ಕವಿತೆ ಬರೆವ ರೂಡಿ ನಂಗೆ ಶುರುವು
ಉಸಿರಾಗೊ ಸಾಂಗತ್ಯಕ್ಕೆ ಅಣಿಯಾಗುವ ಕಾತುರತೆ.
ಅಂದ ಕಾಣೊ ಖುಷಿ ನನ್ನ ಕಂಗಳಲ್ಲಿ
ಬೆಳದಿಂಗ್ಳ ತಾರೆಗಳಂತೆ ಹೊಳಪೊಂದಿಗೆ ಮೈಮರೆತೆ.
ಸೋಜಿಗಕು ಸೋಜಿಗವು ಕಣ್ಣ್ ಸನ್ನೆಯಲ್ಲೆ ಪ್ರೀತಿ ಕಾಗುಣಿತ.
ನಾನ್ ನೀನು ಒಂದಾಗೋ ಆ ಮಿಲನವೊಂದು ಸಂಪ್ರೀತ. ||೧||
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ? ||ಅನು ಪ||
ಸಂಪ್ರೀತಿ ಪ್ರೀತಿ..
ಸಂಜೆ ವೇಳೆ ಹೀಗೆ ಒಂದು ಪಿಸುಗುಟ್ಟು
ಕೇಳುವಾಸೆಯು ನನ್ನಲ್ಲಿ ಈಡೇರಿಸು ಓ ಪ್ರೇಯಸಿಯೇ!
ಆ ಸಂತೆಯಲ್ಲೂ ಸಿಹಿ ದನಿಯೊಂದ
ಆಲಾಪನೆ ಮಜಲಿಗೆ ಪ್ರೇರೇಪಿತ ಓ ನಿನ್ನ್ ಲಯವೇ.
ಸಂಗೀತ ಸಂಜಾತ ಎದೆಯಾಳದಲ್ಲೇ ಸಾಕಾರ.
ರಾಗದಲೇ ಅನುರಾಗ ಇದೇ ಪ್ರೀತಿ ಪ್ರೇಮ ಝೇಂಕಾರ. ||೨||
ದಿನ ದಿನ ನಿದಿರೆಯೊಳು ಮದಿರೆಯಂಥ ನಶೆಯು ನೀನೆ.
ಅಗೋಚರ ಸಲುಗೆಯ ಪಯಣವೇ ಪ್ರೇಮವು ತಾನೆ?
ಈ ಅಂತರದ ಬೇಗುದಿಗೆ ಚಂದಿರನೇ ಕಾಂತಿ.
ನೇಸರನ ಸಹವಾಸ ಶಾಖವದೇ ಸಂಪ್ರೀತಿ.
ಸಂಪ್ರೀತಿ. ಸಂಪ್ರೀತಿ. ಸಂಪ್ರೀತಿ... ||ಅನು ಪ||
----ಚಿನ್ಮಯಿ
ಎರಡೂ ಜಡೆಯನ್ನೂ ಎಳೆದೆನು ನಾನು,
ಸಿಹಿ ಕಿರುಚಾಟ ಕೇಳೋ ಚಟದಿಂದಲೇ..
ಇರುಸುಮುರುಸೆಲ್ಲಾ ಬದಿಗಿಡು ಇನ್ನೂ,
ಹಾಗೆ ಬಿಗಿದಪ್ಪಿಕೊಳ್ಳೋ ಹಠದಿಂದಲೇ..
ಎರಡೂ ಕಣ್ಣೊಡನೆ ಇನ್ನೆರಡೂ ಕಣ್ಣ,
ಸಹಿ ಸಂಭಾಷಣೆ ಬಲು ಹಿತವಲ್ಲವೇ...!
ಹೃದಯ ಹೃದಯಗಳ ಮಿಲನದ ಬಣ್ಣ,
ಸದಾ ಕಡುಗೆಂಪಿಗೆ ಸ್ವಂತವಲ್ಲವೇ...!
ಎರಡೂ ಕಿವಿಗಳ ಕಿವಿಯೋಲೆ ಒಂದೆ,
ಪ್ರೇಮ ಧ್ವನಿ ಭಾವ ಸಹ ಒಂದಲ್ಲವೇ...!
ಪಿಸುಗುಡುತಲೇ ಬಳಿಯಲಿ ನಿಂದೆ,
ಬಿಸಿಯುಸಿರಿನ ನಿರುತ್ತರ ನಿಂದಲ್ಲವೇ...!
ಎರಡೂ ಕೆನ್ನೆಗಳು ಗುಳಿಕೆನ್ನೆಗಳು,
ನಾಚಿ ನೀರಾಗೋ ಪ್ರೇಮ ಮದ್ದಿನಿಂದಲೇ..
ಎದೆಯಬಡಿತದಲಿ ಏರಿಳಿತಗಳು,
ಪ್ರೇಮ ದುಂದುಭಿಯ ಸದ್ದಿನಿಂದಲೇ..
----ಚಿನ್ಮಯಿ
If one starts and practices "Being Good, Doing Good and Seeing Good" , then automatically the Whole Universe, even Multiverses looks Beautiful.
----Chinmayi
ಈಗೆಲ್ಲಾ ಖುಷಿ, ನೆಮ್ಮದಿ ಬಿಟ್ಟು ಬೇರೆಲ್ಲದರ ಹಿಂದೆ ಓಡುತಿಹರು.
ಬದುಕಿನ ಮೂಲ ಅರ್ಥವನ್ನೇ ಮರೆತೋಗಿ ಬದುಕುತಿಹರು.
----ಚಿನ್ಮಯಿ
Somewhere in the chaos of this pressurizing world,
I’ve lost myself.
This isn’t me anymore — my heart, mind, and soul have drifted apart,
Each speaking a different language I can no longer understand.
Now I must re-search myself,
Piece by piece, shadow by shadow.
The greatest irony?
I don’t even know if I’ll ever find the real me again.
There’s only one way out —
To step outside this trapped maze I built,
But will that ever be possible?
Or is that the biggest question life leaves unanswered?
I don’t want to die like this.
But what if I do?
That thought haunts me,
Again and again.
Period.
----Chinmayi
Planning too much and pressurising ourselves for the unknown or never seen future will only put our health (both mental and physical) at stake and most importantly ruin our present happiness. Finally one day, we will die without living life to its fullest.
Is this really the way of living the life...!?
I'm Damn Sure, It's Not...
----Chinmayi
ನಯನಮನೋಹರ ಕೆಸರ್ಮಲ್ಲಿಗೆ,
ನೋಡುತಲೇ ಬಿದ್ದೆ ಪ್ರೀತಿಗೆ.
ದುಂಬಿಯ ಕಾತರ ಪುಷ್ಪಧೂಳಿಗೆ,
ಸಿಹಿ ಜೇನೇ ಮುತ್ತಿನ ಗುಳಿಗೆ.
ಕೇಶಘಮಲು ದುಂಡು ಮಲ್ಲಿಗೆ,
ಕೆದರಿಸು ಹಾಗೆ ಮೆಲ್ಲಗೆ.
ಮೊಗಸಿರಿಯು ಕೆಂಡಸಂಪಿಗೆ,
ತಾಗಿಸು ಎನ್ನ ಮೆಯಿಗೆ.
ಸೌಗಂಧಿಕೆಯ ಸ್ಪರ್ಶ ಕೊರಳಿಗೆ,
ಪರಾಗಸ್ಪರ್ಶ ಮೂಗಿಗೆ.
ಬೆರಳುಗಳೇ ಮಧುರ ಸೇವಂತಿಗೆ,
ಸಲುಗೆ ಸುಖ ಹೊಕ್ಕಳಿಗೆ.
ಸರಸ ಸಲ್ಲಾಪ ಗಿಡ ಮರ ಲತೆಗೆ,
ಸೋಕಲು ನಡು ಕೈಯಿಗೆ.
ನಾಟ್ಯ ಸುಮ ಹರುಷವು ತಂಗಾಳಿಗೆ,
ಸೇರಲು ಉಸಿರು ಉಸಿರಿಗೆ.
ಪ್ರೇಮದೇವತೆಗೆ,
ಪ್ರೇಮ ಭಾವದಿ ಪುಷ್ಪಾಂಜಲಿ.
ಬಾಳಸಾಥಿಗೆ,
ಪುಷ್ಪಾಲಂಕಾರದ ಪ್ರೇಮಾಂಜಲಿ.
----ಚಿನ್ಮಯಿ
ನಾವುಗಳೆಲ್ಲರೂ ಸಹ ನಮ್ಮ ನಮ್ಮ ಬಾಲ್ಯವನ್ನು ಪರಿಪೂರ್ಣತೆಯಿಂದ ಬದುಕಿದರಿಂದಲೇ ತಾನೆ ಎಲ್ಲಾ ನೆನಪುಗಳು ಸಾಯುವ ತನಕ ಮಧುರವು...
ಹಾಗಿದ್ದ ಮೇಲೆ, ನಮ್ಮ ಮಕ್ಕಳಿಗೇಕೆ ಸದಾ ಓದಬೇಕು, ಹೀಗೆಯೇ ಬೆಳೆದು ಬದುಕಬೇಕೆಂದು ಹೇರಿಕೆಯ ಮೂಟೆಯನ್ನು ತಲೆಯ ಮೇಲೆ ಹೊರಿಸುತ್ತೇವೆ...!?
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೩ |
Even though Sri Krishna was/is a Supreme Godhead, he bowed and did service as he cleaned his beloved best friend and a mere mortal Sudaama's feet irrespective of who's watching when the latter visited his palace.
This is what greatest people— have done, have been doing and will do. This is what is called "Greatest Personality."
One must know where to bow down which will make them the greatest personalities.
----Chinmayi
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೨ |
ಬಾಂದಳದಡಿ ಪುಟ್ಟ ಗೂಡೊಂದಿತ್ತು.
ನಾಲ್ಕು ಜನರ ನಲಿವು ಮನೆಮಾಡಿತ್ತು.
ಪಕ್ಕನೇ ಗಿಡ ಮರ ಸಸ್ಯಕಾಶಿ ಕುಣಿದಾಡಿತ್ತು.
ಗುನು ಗುನುಗುತ ಹಕ್ಕಿಯು ಹಾಡುತಲ್ಲಿತ್ತು.
ಜಳಜಳನೆ ಜರಿಯೊಂದು ಹರಿಯುತಲ್ಲಿತ್ತು.
ಮೆಲ್ಲಮೆಲ್ಲನೆ ಮೀನೊಂದು ಪುಟಿಯುತಲ್ಲಿತ್ತು.
ಜಿನುಜಿನುಗೋ ಹನಿಗಳು ಸರಸವಾಡಿತ್ತು.
ಇದ ತಾ ಕಂಡು ಬೆಳದಿಂಗ್ಳು ನಾಚಿಕೊಂಡಿತ್ತು.
ಈಗ ಎಲ್ಲವೂ ಎಲ್ಲಿ ಮಾಯವಾಯ್ತು...?
ಬದುಕು ಬಹಳ ಬದಲಾಗಿ ಬಿಡ್ತು...
----ಚಿನ್ಮಯಿ
ಹೇ ನಲ್ಲೆ, ಆಗೊಮ್ಮೆ ಕಂಡೆ ನೀ ನನಗೆ.
ಆಗಿಂದಲೂ ಏನೋ ಒಂಥರ ಒಳಗೆ—
ಗೆಜ್ಜೆನಾದದ ಹಂಬಲಿಕೆಯು ಹುಬ್ಬೆರಡಿಗೆ.
ಕುಣಿಸುತ ತಣಿಸುವ ಅಮಲು ಹಣೆಗೆ.
ನಿನ್ನೇ ನೋಡೋ ತವಕವು ಕಣ್ಣಿಗೆ.
ಸಿಹಿ ಸ್ಪರ್ಶಿಸೋ ಬಯಕೆಯು ತುಟಿಗೆ.
ಸಾಹಿತ್ಯ ಬರೆಯುವೆ ನಿನ್ನ ಮಧುರ ದನಿಗೆ.
ಸಂಗೀತದ ಜನನವು ನಿನ್ನೊಂದು ಕರೆಗೆ.
ಆ ಹಾಡ ಕೇಳುವ ಭಾಗ್ಯವೀ ಕಿವಿಗೆ.
ಕೆದರಿದ ಕೇಶ ತಾಕಿಸೊಮ್ಮೆ ಬೆರಳುಗಳಿಗೆ.
ಸುವಾಸನೆಯೇ ಅಮೃತವು ಮೂಗಿಗೆ.
ನೀ ಆಗಾಗ ಬರಬಾರದೇ ಬಳಿಗೆ...!?
ನಾ ಆಗಾಗ ಅನುಭವಿಸುವೇ ಈ ಘಳಿಗೆ.
ಬಲು ಮಜಮಯವೀ ಸಲುಗೆ.
ಇದುವೆ ಇರಬಹುದೇನೋ ಒಲವ ನಗೆ...!
ಜ್ವರವೀಗ ನೆಂದು ನೆಂದು ಭಾವ ಮಳೆಗೆ.
ಬಂದು ನೋಡೇನಾಗಿದೆ ನನ್ನೆದೆಗೆ.
ಪ್ರೇಮದಿಷಾರೆಯ ನೀಡಿ ಉಸಿರಾಗು ಉಸಿರಿಗೆ...
ಹೇ ನಲ್ಲೆ, ಬದುಕಾಗು ಬದುಕಿಗೆ...!
----ಚಿನ್ಮಯಿ
ಅನಿರೀಕ್ಷಿತ ಬದುಕಿನಲ್ಲಿ, ಜವಾಬ್ದಾರಿಗಳ ಸ್ಪೋಟದಲ್ಲಿ—
ಹೆಗಲು ಭಾರ, ಮನಸ್ಸು ಭಾರ, ಹೃದಯವು ಭಾರ ಕೊನೆಗೆ ಆತ್ಮವು ಭಾರ.
ಬಾಲ್ಯದ ಮುಗ್ಧತೆ ಕಣ್ಮರೆ.
ಹಮ್ಮು ಬಿಮ್ಮಿನ ಕೈಸೆರೆ.
ಸರಳ ಜೀವನದ ಕೊನೆಯಾತ್ರೆ.
ಹಗುರವಾಗಿಸುವುದು ಕಣ್ಣೀರೇ...
ಮನಸ್ಸು ನಾಳೆಗಳ್ಹಿಂದೆಯೇ ಓಡಿದೆ.
ಹೃದಯ ಒಳ-ಒಳಗೇ ಅತ್ತಿದೆ.
ಆತ್ಮವು 'ಈ ಕ್ಷಣದಲ್ಲಿ' ಸೋತಿದೆ.
ಸಮಾಜದ ಹೇರಿಕೆ ಏರಿದೆ.
ಜವಾಬ್ದಾರಿಗಳೇ ಗೆದ್ದಿದೆ...
ಜವಾಬ್ದಾರಿಗಳೇ ಗೆದ್ದಿದೆ...
ಇಂತಹ ಎಡೆಬಿಡದ 'ನಿನ್ನೆ-ನಾಳೆಗಳ' ಚಿಂತೆಯೆಂ ಭಾರಗಳ ನಡುವೆ;
'ಇಂದಿನ' ಆತ್ಮಘಾತ ಸರಿಯೇ...!?
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೧ |
According to the Srimaad Bhagavad Gita and Sri Bhaagavatham of Supreme Being Godhead 'Sri Krishna', in the current dark age of Kaliyuga, these below three forms of Yogic practices must be followed sequentially and rightly for achieving the highest meditative state—
"Hatha Yoga":
The first practice speaks about "how to sit— Upright Posture" and "where to sit— Sacred Places like Temples."
"Sankhya Yoga":
The second practice speaks about "what and how to visualise— Visualise God, Start from the Lotus Feet and End at the Crown" and "how not to get distracted— Focus upon only His Image until Meditation is Finished." Apart from this, parallelly one has to live their life and perform all their duties by visualising God in everything in this existence irrespective of living and non-living beings.
"Bhakthi Yoga":
The third practice speaks about "what to chant— Chant 'Hare Krishna Hare Krishna, Krishna Krishna Hare Hare. Hare Raama Hare Raama, Raama Raama Hare Hare' until Meditation is completed." Apart from this, parallelly one has to live at the present state, enjoying and loving everything that exists in this existence irrespective of living and non-living beings and finally at the time of death, one must remember His Name.
One must practice these above three forms of yogic practices daily by slowly getting hold upon senses and then achieving Praanayama state and it must be continued until achieving the "Highest State of Meditation called Moksha."
Written, by obtaining an inspiration from "His Divine Grace A.C. Bhaktivedanta Swami Prabhupada."
----Chinmayi
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೧೦ |
ಅವನೋ ಶ್ರೀ ರಾಮಚಂದ್ರನು,
ನಾನು ಅವನ ದಾಸನುಜನು.
ಅವನೋ ಮರ್ಯಾದ ಪುರುಷೋತ್ತಮನು,
ನಾನು ಪರಮ ಭಕ್ತ ಆಂಜನೇಯನು.
ಅವನೋ ಶ್ರೀ ಕೃಷ್ಣ ಪರಮಾತ್ಮನು,
ನಾನು ಅವನ ಅಗ್ರಜನುಜನು.
ಅವನೋ ಯುಗ ಯುಗಗಳ ಮಹಾಪುರುಷನು,
ನಾನು ಪರಮ ಸ್ನೇಹಿತ ಸುದಾಮರ್ಜುನನು.
ಅವನೋ ಶ್ರೀ ಅಚ್ಯುತನು,
ನಾನು ಶೇಷನಾಗ್ಗರುಡನು.
ಅವನೋ ಅತ್ಯುನ್ನತನು
ನಾನು ಹೆದ್ದಾರಿ ಹಿಂಬಾಲಕನು.
----ಚಿನ್ಮಯಿ
I'll explain the ultimate truth of life poetically using few of the basic mathematical expressions, since mathematics is the language in which the universe and the multiverses speak.
"1+0=1:-" When Singularity adds up with Nothingness, there exists "Nothingness inside Singularity."
"1-0=1:-" When Nothingness differs from Singularity, there exists "Singularity inside Nothingness."
"1*0=0:-" When Singularity is multiplied by Nothingness, there exists "Complete Nothingness."
"1÷0= Undefined:-" When Singularity is divided away from Nothingness, there exists "Complete Undefined Chaos."
"1<10<100<1000:-" When Singularity keeps on increasing with Nothingness, there exists "Infinite Singularity and Infinite Nothingness."
"1=01=001=0001:-" When Nothingness keeps on increasing with Singularity, there exists "Complete Singularity."
Hence by the interpretation of these above mathematical expressions, both Singularity and Nothingness coexist with each other irrespective of anything and makes both as "One Entity ('1(0)' '0(1)')" of this very Natural Existence of the Universe and the Multiverses.
Hence, if at all we Human Beings achieve Nothingness by always being at the Singularity state by interconnecting Mind, Heart and Soul, then as per mathematics proves, we can achieve the highest state of meditation and that's called as "Liberation."
----Chinmayi
It never hurts deeply at the moments when we realise and remember- we are growing older and older. But, it really hurts very deeply at the moments when we realise and remember- our parents are getting older and older and all those beautiful past remains only as an infinite treasure.
So, always "Be Kind to everyone especially to your parents", "Give Abundance of Love to them", "Take Care of them", "Live and Spend Time with them as much as possible" no matter what Life Situations are because once the past is gone, it's gone forever.
🤍❤️
----Chinmayi
![]() |
| ಚಿತ್ರಕ್ಕೆ ಪದ್ಯ / ಉಲ್ಲೇಖ- ೧೦೫ |
ಮೂರು ಹೊತ್ತು ಊಟಕ್ಕಾಗಿ.
ರಾತ್ರಿಯ ನೆಮ್ಮದಿ ನಿದ್ರೆಗಾಗಿ.
ದುಡಿಯೋ 'ನಾವು.'
ಕೊನೆಗೆ ಊಟ, ನಿದ್ರೆಯನ್ನೇ ಮರೆತ್ತಿದ್ದೇವೆ.
ಬದುಕಿ ಸಾಯುತ್ತಾ ನಗುತ್ತಿದ್ದೇವೆ.
ನುಂಗುತ್ತಾ 'ನೋವು.'—
ಇದು ಎಲ್ಲಾ ಮಿಡ್ಲ್ ಕ್ಲಾಸ್ ಜನರ ಪಾಡು.
ಆರೋಗ್ಯದ ಕಡೆ ಗಮನವಿಲ್ಲದೇ ತಮ್ಮವರಿಗಾಗಿ, ಕುಟುಂಬಕ್ಕಾಗಿ—
ದುಡಿಯೋ, ಎಲ್ಲಾ ಮಿಡ್ಲ್ ಕ್ಲಾಸ್ ಜನರ ಹಾಡು.
🤍💔
----ಚಿನ್ಮಯಿ
When one who thinks he has achieved, then he probably wouldn't have achieved.
But, the one who thinks he hasn't achieved, then he probably would have achieved.
----Chinmayi