Sunday, November 26, 2023

Beautiful Phase of Life- Childhood

"Then:"

For each and everyone, childhood is so special. Our back in the old days when we were young were just amazing. If we just rewind it and think, those days were the golden days of our lives—

So much innocence.

So much fun and cute fights.

So much playful nature.

So many games (both outdoor and indoor) we used to play.

So many wounds and smiles and pains behind them.

So many heartful friendships.

At last, yeah we used to study sometimes when we felt like.

See, this was the life which we can remember always and wish to rewind and live it yet again during our adulthood and older ages. Indeed, our parents were supportive and strict back then.


"Now:"

But parents nowadays, probably have forgotten how they grew up and making their kids live a "Machine Life" rather than "Human Life". The sad part is they are only strict and not supportive at all. There's also studying and it's a part of it I agree but only studying is not good at all. However, most importantly there is adulthood to struggle hard in life to build a so-called "Good Life." 

If this is the case of true life, then why snatch that beautiful phase of life from your kids. A humble request from my side is that please allow your kids to live the most beautiful phase of their life to the fullest and please don't make them regret in their adulthood and older ages that they didn't enjoy their life at all because that's the only phase of life where kids laugh, smile, cry, shout, play, enjoy and do N number of things.


"Heartfelt Conclusion:"

The only phase of life to enjoy the most with a true heart along with nature and true people and learn as much as we can is the "Childhood" and that's the beautiful phase of everyone's life.


                    ----Chinmayi

Wednesday, November 15, 2023

ಗೆಲುವು ಒಳ್ಳೆಯತನಕ್ಕೇ

ಹಿಂದೆ ಮೋಸ ಮಾಡಿ ಮುಂದೆ ಬುದ್ಧಿವಂತ ಎಂದು ಕರೆಸಿಕೊಂಡು ನೂರು ಕಾಲ ಬದುಕುವುದಕ್ಕಿಂತ,

ಹಿಂದೆ-ಮುಂದೆ ಎರಡೂ ಕಡೆಯಲ್ಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಕೋರುತ ದಡ್ಡ ಎಂದು ಕರೆಸಿಕೊಂಡು ಕೊಂಚ ಕಾಲ ಬದುಕುವುದೇ ಲೇಸು...


                   ----ಚಿನ್ಮಯಿ

Tuesday, November 14, 2023

The Perfection in The Imperfection

Always wanting to be perfect in life is not necessary, because sometimes, imperfections are way too good that they alone become perfection.

             ----Chinmayi

ದೀಪಾವಳಿ ಹಬ್ಬದಿಂದಿರೋ ಪ್ರಮುಖ ಕಥೆಗಳು-ವಿಶೇಷತೆಗಳು.

ದೀಪಾವಳಿಯು ಬೆಳಕಿನ ಹಬ್ಬ— ಎಲ್ಲಾ ಕಾಲಘಟ್ಟದಲ್ಲೂ ಸುಮಾರು ಕಥೆಗಳಿವೆ. "ಧರ್ಮ-ಅಧರ್ಮ", "ಸತ್ಯ-ಅಸತ್ಯ" ಗಳ ನಡುವಿನ ಮಹಾ ಸಂಘರ್ಷಗಳಿವೆ. ಇಷ್ಟೇಲ್ಲದರಲ್ಲೂ ಗೆದ್ದಿರುವುದು "ಧರ್ಮ-ಸತ್ಯ" ಗಳೇ ಎಂಬುದನ್ನು ನಾವುಗಳೆಲ್ಲರೂ ಅರಿತು ಕೆಳಗಿನ ಪ್ರಮುಖ ಕಥೆಗಳ ಉದಾಹರಣೆಯಂತೆಯೇ ಜೀವಿಸುತ್ತ ನಮ್ಮೊಳಗಿನ ಅಂಧಕಾರವು ನಶಿಸಿ ಬೆಳಕಿನ ಉಗಮದಿಂದ ಬಾಳು ಬೆಳಕಿನೋತ್ಸವವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತ ಹಬ್ಬದಾಚರಣೆಯ ಸಂಭ್ರಮಿಸೋಣ...


"ಸತ್ಯ ಯುಗ (ಚಿನ್ನದ ಯುಗ):"

ಸಮುದ್ರ ಮಂಥನ— ಅಮೃತ-ಮಹಾಲಕ್ಷ್ಮೀಯ ಉಗಮ.

ಬಲಿಯು ಪಾತಾಳದೆಡೆಗೆ— ವಾಮನನ ಪವಿತ್ರ ಪಾದ ಸ್ಪರ್ಶದಿಂದ.


"ತ್ರೇತಾ ಯುಗ:"

ರಾವಣನ ಅಂತ್ಯ— ರಾಮ-ಸೀತೆ-ಲಕ್ಷ್ಮಣರ ಅಯೋಧ್ಯೆಯ ಆಗಮನ.


"ದ್ವಾಪರ ಯುಗ:"

ನರಕಾಸುರನ ವಧೆ— ಕೃಷ್ಣ-ಸತ್ಯಭಾಮೆಯರ ಸಂಗಮದಿಂದ.

ದ್ರೌಪದಿ-ಪಾಂಡವರು— ವನವಾಸ-ಅಜ್ಞಾತವಾಸಗಳಿಂದ ಮುಕ್ತ.


"ಕಲಿ ಯುಗ (ಅಂಧಕಾರ ಯುಗ):"

ಮಹಾಕಾಳಿಯ ರಕ್ಕಸ ರಕ್ತದೋಕುಳಿ— ಮಹಾದೇವನಿಂದಲೇ ಶಾಂತಿಯು ಕೊನೆಗೆ.

ಮಹಾವೀರನ ನಿರ್ವಾಣ— ಜ್ಞಾನೋದಯದಿಂದ ಸರ್ವ ಮುಕ್ತ.

ಮೊಘಲರ ಸೆರೆಯಿಂದ— ಗುರು ಹರಗೋಬಿಂದರ ಬಿಡುಗಡೆಯ ಸಂಭ್ರಮ.


             ----ಚಿನ್ಮಯಿ

Wednesday, November 1, 2023

ನಾ ಕನ್ನಡಿಗನು

ನನ್ನ ಮಾತೃ ಭಾಷೆ 'ತೆಲುಗು' ಆದರೇ ನಾ ಹುಟ್ಟಿದ್ದು-ಬೆಳದದ್ದು ಹೊನ್ನಿನ ನಾಡಾದ ಕರುನಾಡಲ್ಲಿ, ಪ್ರೇಮದಿಂದ ಕಲಿತದ್ದು ಕನ್ನಡವನ್ನು. 

ನಾ ಅನುದಿನ ಅನುಕ್ಷಣ ಸವಿಯೋದು-ಆನಂದಿಸೋದು-ಆರಾಧಿಸೋದು-ಅನುಭವಿಸೋದು-ಜೀವಿಸೋದು ಜೇನಿನಂತಿರೋ ಬಾನೆತ್ತರದ "ಕನ್ನಡ"ವನ್ನೇ

— ಇದು ನನ್ನ ಆರಾಧ್ಯ ಕವಿಯಾದ ರಾಷ್ಟ್ರ ಕವಿ 'ಕುವೆಂಪು' ರವರ ಸಾಕ್ಷಿಯಾಗಿ ಸತ್ಯವು.

 

                   ----ಚಿನ್ಮಯಿ