Friday, June 12, 2020

ಬಾಲ ಕಾರ್ಮಿಕ ಪದ್ಧತಿಯು ಭೂತದಂತೆ


ಚಿತ್ರಕ್ಕೆ ಪದ್ಯ-೨೧

ಖುಷಿಯಿಂದ ನಲಿದು, ಆಟವಾಡುತ
ಬೆಳೆಯಬೇಕಾದ ಮಕ್ಕಳನ್ನು ದುಡಿಯಲು ಕಳುಹಿಸುವುದು ಸರಿಯೇನು?
ಓದಲು ಇಚ್ಛೆ ಇರುವ, ಏನನ್ನೂ ಅರಿಯದ
ಪುಟಾಣಿಗಳಿಂದ ದುಡಿಸಿಕೊಳ್ಳಲು ಮನಸ್ಸಾದರೂ ಹೇಗೆ ಬರುವುದೆಂದು ನಾ ಅರಿಯೆನು!

ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಿ ಮಕ್ಕಳ
ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ.
ಇದೆಲ್ಲವನ್ನು ತಡೆಯಲೆಂದೇ "ಒಕ್ಕೂಟ ರಾಷ್ಟ್ರಗಳ
ಅಂಗವಾಗಿ" "ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು" ಸ್ಥಾಪನೆಯಾಗಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಈ ದಿನವನ್ನು
"ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನವೆಂದು" ಕರೆಯುತ್ತದೆ.
ಇದು ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಿದರೂ
ಮುಖ್ಯವಾಗಿ "ಬಾಲ ಕಾರ್ಮಿಕ ಪದ್ಧತಿಯ" ವಿರುದ್ಧವಾಗಿದೆ.
         ----ಚಿನ್ಮಯಿ

No comments:

Post a Comment