Tuesday, June 2, 2020

ಹಸಿವು ಕಲಿಸಿದ ಪಾಠ

ಅಂದೊಂದು ಕಾಲದಲ್ಲಿ ಝಣ ಝಣ
ಹಣದ ಮದವೇರಿ ಅಜ್ಞಾನಿಯಾಗಿದ್ದೆ.
ರೈತನ ಕಷ್ಟ ಹಾಗು ಅನ್ನದ ಮಹಿಮೆ
ತಿಳಿಯದೆ ಅಹಂಕಾರದಿ ಮೆರೆಯುತ್ತಿದ್ದೆ.

ಇಂದೊಂದು ಕಾಲ ಬಂತು ಒಂಚೂರು
ಹಣವೇ ಇಲ್ಲದಂತೆ ಬದುಕಲು.
ತಿನ್ನಲು ಏನೂ ಸಿಗದೆ ಪರದಾಡುತ್ತಿರುವೆನು
ನೆನಸಿಕೊಂಡು ಮಾಡಿದ ತಪ್ಪುಗಳು.

ಜೇಬಿನಲ್ಲಿ ಬಿಡಿಗಾಸು ಇಲ್ಲದಂತಾಯಿತೀಗ
ಕೊಂಡು ತಿನ್ನಲು ಅನ್ನವನ್ನು.
ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿಯಾಯಿತೀಗ
ಉಳಿಸಿಕೊಳ್ಳಲು ಪ್ರಾಣವ‌ನ್ನು.

ಖಾಲಿ ಜೇಬು ಹಾಗು ಹಸಿದ ಹೊಟ್ಟೆ
ಕಲಿಸಿದವು ಜೀವನದ ಪಾಠವ.
ಅಜ್ಞಾನವ ಅಳಿಸಿ ಜ್ಞಾನವ ಗಳಿಸಿ
ಅರಿತೆನು ಅನ್ನದ ಋಣವ.

"ಅನ್ನಂ ಪರಬ್ರಹ್ಮ ಸ್ವರೂಪಂ"
             ----ಚಿನ್ಮಯಿ

No comments:

Post a Comment