Wednesday, June 9, 2021

ನಾಲ್ಕನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೇ ಯೋಧನೆ
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||


ಶತ್ರುಗೆ ಯಮನಿವ ಸರದಾರ,

ವಜ್ರದ ಕವಚವು ಭಾರತಿಗೆ.

ತಲೆಯೇ ಬಾಗದೀ ಯುವಶೂರ,

ಸ್ಪೂರ್ತಿಯ ಧಾತ ತಾಯ್ನಾಡಿಗೆ.

ಹೇ ಬಿಸಿಲು ಚಳಿಗೆ ನಡುಗದೀ,

ರೋಷ-ಆವೇಷದ ಗುಂಡಿಗೆ.

ಕೊಂಚವು ಅಂಜದ ಯೋಧನ,

ಭಿಕ್ಷೆಯೇ ಈ ಉಸಿರು ನಮಗೆ‌.||೧||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ನಿನ್ನ ನಂಬಿದ್ದ ಬಾಳಿಗೆಲ್ಲಾ,

ನೀನೇ ಧೈರ್ಯದ ಹೊಂಗಿರಣ.

ನಮ್ಮ ದೇಶದ ಬಾವುಟವು,

ಹಾರಲು ನೀನೊರ್ವ ಕಾರಣ.

ಕೋಟಿ ಕಾಲಕೂ ಮರೆವೆವು,

ಇಂತಹ ಪವಿತ್ರ ಬಲಿದಾನ.

ದೇಶದ ಜನರ ಕೂಗಿದು,

ನಿನಗೆ ಇದುವೇ ಗುಣಗಾನ. ||೨||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ದೇಶವ ಕಾಯುವ ಸೈನಿಕನಲ್ಲಿ,

ದೇಶಾಭಿಮಾನವು ಅಳಿಯದು.

ಎಷ್ಟೋ ಆಯುದ್ಧ ಇದ್ದರು,

ಧೈರ್ಯವೇ ಆಯುದ್ಧ ಅವನದು.

ವೀರತ್ವ ಮೆರೆದ ಓ ವೀರನೇ,

ನಿನಗಿದು ಅರ್ಪಣೆ ಈ ಹಾಡು‌.

ನಮ್ಮಯ ಸೌಭಾಗ್ಯವು ಇದು,

ನಿನ್ನ ನಿವಾಸ ಎದೆ-ಗೂಡು. ||೩||


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು.


ಹೇ ಯೋಧನೆ ಹೇ ಯೋಧನೆ

ನೀ ನಮ್ಮಯ ಕಣ್ಗಾವಲು.

ಹೇ ವೀರನೆ ಹೇ ವೀರನೆ

ನಿನ್ನಿಂದಲೇ ಹಗಲ್-ಇರುಳು.


ನಮ್ಮ ಹೆಮ್ಮೆ ನೀವು,

ನಮ್ಮ ಹೆಮ್ಮೆss ನೀವು. ||ಪ||

          ----ಚಿನ್ಮಯಿ

No comments:

Post a Comment