Thursday, June 24, 2021

ಮದುವೆಯ ನಂತರದ ಫಜೀತಿ

"ಏನ್ರೀ, ಸ್ವಲ್ಪ ಅಂಗ್ಡೀಗ್ ಹೋಗಿ ಮನೆ ಸಾಮಾನ್ ತರ್ಬಾರ್ದೇ, ಯಾವಾಗ್ಲೂ ಆ ಹಾಳಾದ್ ನ್ಯೂಸ್ ನೋಡ್ಕೊಂಡೇ ಇರ್ತೀರಲ್ಲ" ಎಂದು ಹೆಂಡ್ತಿ ಹೇಳಲು,

ದಿಢೀರನೆ ಹೆಂಡ್ತಿಯ ಕಾಟ ತಡೆಯದೇ ಗಂಡ ಒಮ್ಮೆಲೆ ಎದ್ದು ಹೋದನು ಅಂಗ್ಡಿಯ ಕಡೆಗೆ, ಆ ಅಂಗ್ಡಿಯವ ಬಾಗಿಲ ಮುಚ್ಚುವ ಒಳಗೆ.

ನಿಟ್ಟುಸಿರ ಬಿಡುತ್ತ ಅಂಗ್ಡಿಯವನಿಗೆ ಗಂಡ ಹೇಳಿದ- "ಹೇ ಸ್ವಲ್ಪ ತಡಿಯೋ ಮಾರಾಯ, ತಿಂಗಳಿನ ಸಾಮಾನು ಕೊಟ್ಟು ಬಾಗಿಲಾಕಯ್ಯ",

ಹಳೆಯ ಗಿರಾಕಿ ಎನ್ನುವ ಸಲಿಗೆಯಿಂದ ಗಂಡ ಕೇಳಲು ರಿಯಾಯಿತಿ, ಒಲ್ಲದ ಮನಸ್ಸಿನಿಂದಲೇ ಅಂಗ್ಡಿಯವ ಕೊಟ್ಟನು ರಿಯಾಯಿತಿ.


ಮನೆಗೆ ವಾಪಸ್ಸಾದ ಗಂಡನಿಗೆ ಇನ್ನೊಂದು ಕೆಲಸ ಕೊಡಲು ಹೆಂಡ್ತಿ, "ಸರಿ ಆಯ್ತು ಕಣೆ ಎನ್ನಲ್ಲಷ್ಟೇ ಅಲ್ಲವೇ ಆದೀತು" ಎಂದು ಗೊಣಗಿದ ಗಂಡ,

ಗೊಣಗಲು ನಿಲ್ಲಿಸದ ಗಂಡ ಮತ್ತೆ ಹೀಗೆ ಗೊಣಗಿದನು-"ಯಾರಿಗೆ ಬೇಕು ಸ್ವಾಮಿ ಇದ್ದೆಲ್ಲಾ, ಏನೂ ಬೇಕಾದರೂ ತಡೆಯಬಹುದು ಈ ಹೆಂಡ್ತೀರ ಕಾಟ ತಡೆಯಲು ಆಗದು".

ಗಂಡನ ಗೊಣಗಾಟ ಕೆಳಿಸಿಕೊಂಡ ಹೆಂಡ್ತಿ- "ಏನ್ರೀ ಅದು ಗೊಣಗ್ತಾಯಿರೋದು" ಎಂದೊಂಡನೆಯೇ, "ಹೇ ಏನಿಲ್ಲ ಕಣೆ" ಎಂದು ಕೆಲಸವನ್ನು ಗೊಣಗುತ್ತಲೇ ಮುಂದುವರೆಸಿದ,

ಗಂಡ ಓದುಗರಿಗೆ ಗೊಣಗುತ್ತಲೇ ಹೀಗೆಂದನು- "ಹೀಗೇ ನೋಡಿ ಸ್ವಾಮಿ ಗಾಳಿ ಹೋದ ಬಲೂನಿನಂತೆಯೇ ಅಲ್ಲವೇ ಗಂಡಂದಿರ ಪರಿಸ್ಥಿತಿ, ಓಹೋ ನಿಮಗೆ ಮದುವೆ ಆಗಿಲ್ಲವೇ!? ಆಗಿ ನೋಡಿ ತಿಳಿಯುತ್ತೆ ಮದುವೆಯ ನಂತರದ ಫಜೀತಿ". 


ಈ ವಿನೋದಮಯ ಸತ್ಯವನ್ನು ಓದುವ ನಿಮಗೆ ನಗಲು ಆಗದೇ ಅಳಲು ಆಗದೇ ಉಂಟಾಗಬಹುದು ಇಕ್ಕಟ್ಟಿನ ಸ್ಥಿತಿ, ನೆನೆಸಿಕೊಂಡು ಮದುವೆಯ ನಂತರದ ಫಜೀತಿ!?

                ----ಚಿನ್ಮಯಿ

No comments:

Post a Comment